ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಮ ಹಂಜರಿಸಿದಲ್ಲಿ, ಚಂಡಕರನ ಕಿರಣವೆಲ್ಲಿ ಹೊಂದಿತ್ತು ? ಅಪ್ಪು ವಹ್ನಿಯ ಘಟಿಸಲಾಗಿ, ಧೂಮದಲ್ಲಿ ಉಳಿಯಿತ್ತು? ಘಟ ಇಷ್ಟದಲ್ಲಿ ಕುರುಹಳಿವಾಗ, ಅರಿವೆಲ್ಲಿದ್ದಿತ್ತು ? ಅರಿವು ನಾಮ ಅವದ್ಥಿಗಿಲ್ಲವಾಗಿ, ಅರ್ಕೇಶ್ವರಲಿಂಗದ ಕುರುಹು ಎಲ್ಲಿದ್ದಿತ್ತು ?
--------------
ಮಧುವಯ್ಯ
ತರು ಕುಲಿಶದಲ್ಲಿ ಹೊಕ್ಕು, ತನ್ನಯ ಕುಲವ bs್ಞೀದನವÀ ಮಾಡುವಂತೆ, ಸಮಯವ ಹೊಕ್ಕು, ಸಮಯವ ನೇತಿಗಳೆವ ಶ್ರಮವಿಲ್ಲದವರನೊಲ್ಲ, ಅರ್ಕೇಶ್ವರಲಿಂಗ.
--------------
ಮಧುವಯ್ಯ
ತ್ರಿಸಂಧಿಯಲ್ಲಿ ಧ್ಯಾನ ಮರವೆಯೆಂದು, ಮಣಿಮಾಲೆಯಲ್ಲಿ ಅಗಣಿತನ ಎಣಿಕೆಯಿಂದ ಅರಿದೆಹೆನೆಂದು, ಸಿಕ್ಕಿತ್ತು ಧ್ಯಾನ ಜಪದ ಕೃತ್ಯದಲ್ಲಿ. ಆ ಜಪ ಧ್ಯಾನ ಭಾವ ಸಂಚಾರವಿಲ್ಲದೆ ಭಾವಿಸಿದಲ್ಲಿ ಜಪ ಸಂದಿತ್ತು. ನೇಮಭಾವದಲ್ಲಿ ಅಡಗಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ತನು ನಿರ್ವಾಣ, ಮನ ಸಂಸಾರ. ಮಾತು ಬ್ರಹ್ಮ, ನೀತಿ ಅಧಮ. ಅದೇತರ ಅರಿವು ? ಘಾತಕನ ಕೈಯ ಕತ್ತಿಯಂತೆ, ಇದು ನಿಹಿತವಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ತ್ರಿವಿಧ ಘಟಿಸಿ ಕುರುಹಾದಲ್ಲಿ, ಕುರುಹು ಅರಿವನರಿದುದಿಲ್ಲ. ಆ ಅರಿವಿಂದ ಕುರುಹ ಪ್ರಮಾಣಿಸಿ, ಮಧುರದಂಡದಂತೆ ಉಭಯವನರಿ. ಅರಿದಲ್ಲಿ ಅರ್ಕೇಶ್ವರಲಿಂಗನ ಭಾವದ ಕೂಟ.
--------------
ಮಧುವಯ್ಯ