ಊ ಪದದಿಂದ ಪ್ರಾರಂಭವಾಗುವ ವಚನಗಳು:
ಊರ ಬಾರಿಕನ ಬಾಗಿಲಲ್ಲಿತಲೆ ಕೆಳಗಾಗಿ ಕಾಲು ಮೇಲಾಗಿ ಚರಿಸ್ಯಾಡುವ ಮೃಗವಎಡಪಾದ ಮುಂದಿಟ್ಟು, ಬಲಪಾದ ಹಿಂದಿಟ್ಟು,ವೀರಮಂಡಿಯ ಹೂಡಿ, ಒಳಬಾಗಿಲೊಳಗೆ ಕೂತುಒಂದೇ ಬಾಣದೊಳಗೆ ಹತಮಾಡಿನೀರು ಬೆಂಕಿಯಿಲ್ಲದೆ ಪಾಕವ ಮಾಡಿ,ಬಾಲಹನುಮಗರ್ಪಿಸಿ ಕಾಯಕವ ಮಾಡುವೆನಯ್ಯಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.
ಊರ ಬೆಂಕಿ ಊರ ಸುಟ್ಟಿತ್ತ ಕಂಡೆ.ಸುಟ್ಟ ಊರೊಳಗಣ ಅಗ್ನಿಊರ ಮುಂದಿನ ಶಿಶುವ ನುಂಗಿತ್ತ ಕಂಡೆ.ಆ ಶಿಶು ಊರ ಬೆಂಕಿಯ ನುಂಗಿ,ಸೂಳಿಯ ಸಂಗವ ಮಾಡಿ,ಆ ಶಿಶುವು ಸತ್ತಿತ್ತ ಕಂಡು ಬೆರಗಾದೆನಯ್ಯಾ.ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.