ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಪ್ರಾಣಸಂಬಂಧಯೋಗ ಭೇದದ ಪರಿ ಯಾವುದೆಂದಡೆ : ಅಕ್ಷಿಯ ಮುಚ್ಚಿದಲ್ಲಿ ನಿರೂಪಾಯಿತ್ತು, ತೆರೆದಲ್ಲಿ ರೂಪಾಯಿತ್ತು. ತನ್ನಯ ಅರಿವು ಮರವೆಯಿಂದ ಕ್ರೀ, ನಿಃಕ್ರೀಯೆಂಬ ಸಂದೇಹವಾಯಿತ್ತು. ನಿಂದ ನೀರ ನೆಳಲು, ಚರಿಸಿದಲ್ಲಿ ಅಡಗಿತ್ತು. ಆ ತೆರದ ದೃಷ್ಟವನರಿ, ಐಘಟದೂರ ರಾಮೇಶ್ವರಲಿಂಗ ಏಕಸ್ವರೂಪು.
--------------
ಮೆರೆಮಿಂಡಯ್ಯ
ಇಚ್ಫಾಶಕ್ತಿ ರೂಪಾಗಿ ಬ್ರಹ್ಮಪದವಾಯಿತ್ತು. ಕ್ರಿಯಾಶಕ್ತಿ ರೂಪಾಗಿ ವಿಷ್ಣುಪದವಾಯಿತ್ತು. ಜ್ಞಾನಶಕ್ತಿ ರೂಪಾಗಿ ರುದ್ರಪದವಾಯಿತ್ತು. ತ್ರಿವಿಧಪದ ಕೂಡಿ ಕಾಮ ನಾಸ್ತಿಯಾಯಿತ್ತು, ಐಘಟದೂರ ರಾಮೇಶ್ವರಲಿಂಗವನರಿಯದೆ.
--------------
ಮೆರೆಮಿಂಡಯ್ಯ
ಇಷ್ಟಲಿಂಗ ವಸ್ತುವನರಸುವುದಕ್ಕೆ ದೃಷ್ಟವಿಲ್ಲ. ವಸ್ತು ತಾನೆ ಕುರುಹಿನಲ್ಲಿ ನಿಂದರುಹಿಸಿಕೊಳ್ಳಬೇಕು. ಅದೆಂತೆಂದಡೆ : ಮಣಿ ದಾರವನೊಳಕೊಂಡು ತಾ ಕುರುಹಿಗೆ ಬಂದು ನಿಲುವಂತೆ. ವಸ್ತುವನೊಳಕೊಂಡು ಕುರುಹಿನ ರೂಪು ಮಣಿದಾರದಂತೆ. ಇಂತೀ ಉಭಯದ ಭೇದ, ಎಡೆದೆರಪಿಲ್ಲ, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಇಷ್ಟದ ಪೂಜೆಯನರಿವುದಕ್ಕೆ ಕೋಲ ಸುತ್ತಿದ ನೂಲಿನಂತಿರಬೇಕು. ಭಾವದ ಭ್ರಮೆ ಹಿಂಗುವುದಕ್ಕೆ ಸಾವಧಾನದಲ್ಲಿ ಸಾವಯವವಾದ ಸಾವಿನಂತೆ, ಭಾವ ಎಯ್ದಬೇಕು. ಇಷ್ಟ ಪ್ರಾಣದಲ್ಲಿ ಉರಿ ಅರಗಿನ ಯೋಗದಂತೆ, ಕ್ರೀಯಲ್ಲಿ ಕರಗಬೇಕು. ಇದೇ ದೃಷ್ಟ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಇಷ್ಟಲಿಂಗಸಂಬಂಧ ಮುಕ್ತಿಪದ. ಭಾವಲಿಂಗಸಂಬಂಧ ಭವಕ್ಕೆ ಬೀಜ. ಪ್ರಾಣಲಿಂಗಸಂಬಂಧ ಪ್ರಣವದ ಗೊತ್ತು. ಇಂತೀ ತ್ರಿವಿಧಭೇದವರತು ನಿಂದುದು, ಐಕ್ಯಲಿಂಗಸಂಬಂಧ, ಐಘಟದೂರ ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಇರುಳಿಗೆ ಮೊಲೆ ಯೋನಿ ಅಧರ. ಹಗಲಿಗೆ ಸಂಪುಟ ಲೇಖ. ಮಾತಿನ ಮಾಲೆಯ ಸರಕು ವೇಷದ ಪುಣ್ಯ ಸುಡು ಭ್ರಾಂತರ ಮಾತು, ಸಾಕು ನಿಲ್ಲು, ಐಘಟದೂರ ರಾಮೇಶ್ವರಲಿಂಗ, ಅವರ ಬಲ್ಲನಾಗಿ.
--------------
ಮೆರೆಮಿಂಡಯ್ಯ
ಇಚ್ಫಾಶಕ್ತಿಸ್ವರೂಪ ವರ್ತುಳವಾಗಿ, ಕ್ರಿಯಾಶಕ್ತಿಸ್ವರೂಪ ಗೋಮುಖವಾಗಿ, ಜ್ಞಾನಶಕ್ತಿಸ್ವರೂಪ ಸಲಾಖೆರೂಪಾಗಿ, ತ್ರಿವಿಧಭೇದವ ಒಡಗೂಡಿ ತ್ರಿವಿಧಶಕ್ತಿ ಲಿಂಗವಾಯಿತ್ತು. ಇಚ್ಫಾಶಕ್ತಿಗೆ ಕ್ರೀ, ಕ್ರಿಯಾಶಕ್ತಿ ಜ್ಞಾನ, ಜ್ಞಾನಶಕ್ತಿಗೆ ಸರ್ವಭಾವಕೂಟ. ಭಾವ ಇಷ್ಟದಲ್ಲಿ ನಿಂದು, ತ್ರಿವಿಧವ ತೊಟ್ಟು ಬಿಟ್ಟು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಇದೇ ಗೊತ್ತು.
--------------
ಮೆರೆಮಿಂಡಯ್ಯ