ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯಶೂನ್ಯ, ಜೀವಶೂನ್ಯ, ಪ್ರಾಣಶೂನ್ಯವೆಂದೆಂಬರು, ಅದೆಂತಯ್ಯ ? ಮನ ಮನನ ಮನನೀಯಂಗಳಲ್ಲಿ ಮಂತ್ರಲೀಯವಾದುದೆ ಕಾಯಶೂನ್ಯ. ಆ ಮಂತ್ರ ಪಿಂಡಾಂಡದಲ್ಲಿ, ಪರಿಪೂರ್ಣಭೇದ ತೋರಿದಾಗಲೆ ಜೀವಶೂನ್ಯ. ಆ ಪ್ರಭೆಯ ಪರಿಣಾಮದಲ್ಲಿ ಜೀವನ ಉಪಾದ್ಥಿ ನಷ್ಟವಾಗಿ, ಜೀವ ಪರಮ ಸಂಯೋಗವೆಂಬ ಸಂದೇಹವಳಿದಾಗಲೇ ಪ್ರಾಣಶೂನ್ಯ, ಇದು ತ್ರಿವಿಧಶೂನ್ಯ, ಐಘಟದೂರ ರಾಮೇಶ್ವರಲಿಂಗದಲ್ಲಿ ನಿಲುಕಡೆ.
--------------
ಮೆರೆಮಿಂಡಯ್ಯ
ಕಾಮದಲ್ಲಿ ಅಳಿದು, ಕ್ರೋಧದ ದಳ್ಳುರಿಯಲ್ಲಿ ಬೆಂದು, ಮೋಹದ ಸಮುದ್ರದಲ್ಲಿ ಮುಳುಗಿ, ನಾನಾ ಭವರಸಂಗಳನುಂಡು ಘೋರಸರಾಗಬೇಡ. ಅರಿ, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ
ಕುರುಹಿಟ್ಟಲ್ಲಿ ಅರಿವು ನಷ್ಟವಾಯಿತ್ತು. ಅರಿವ ನುಂಗಿದ ಕುರುಹು, ಇದಿರಭಾವಕ್ಕೊಡಲಾಯಿತ್ತು. ತನ್ಮಯ ನಷ್ಟವಾಗಿ, ಉಭಯದೋರದೆ ನಿಂದಲ್ಲಿ, ಆ ನಿಲವು ತಾನೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಕಾಲವಿರಹಿತ ಗುರುವಾಗಬೇಕು. ಕರ್ಮವಿರಹಿತ ಲಿಂಗವಾಗಬೇಕು. ಭವವಿರಹಿತ ಜಂಗಮವಾಗಬೇಕು. ಮೂರನರಿತು bs್ಞೀದಿಸಿ, ವಿರಕ್ತನಾಗಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು, ಈ ಕೇಣಸರದ ಜಾಣತನದ ಗುರುವೇಕೆ ? ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ? ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ. ಬಿಡುವನವರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಕಾಳಿಕೆ ಹರಿದ ಹೇಮದಂತೆ, ನಾರಿಕೇಳಫಲವ ನುಂಗಿದ ವಾರಣದಂತೆ, ಬೆರಸಿ ಬೆರಸದಂತಿರಬೇಕು. ಅದು ನಾಲಿಗೆಯ ಹುಣ್ಣಿನಂತೆ, ಮೀರಬಾರದು, ಅಂಗೀಕರಿಸಬಾರದು. ಕ್ರೀಜ್ಞಾನಸಂಪದದಲ್ಲಿ ಕಾಬವಂಗೆ ಭಾವಶುದ್ಧವಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕುಟಿಲಕ್ಕಲ್ಲದೆ ಜಗ ಸಿಕ್ಕದು. ವಾಚಕಂಗಲ್ಲದೆ ಭೋಗವಿಲ್ಲ. ಘಟಧರ್ಮಕ್ಕೆ ಹೊರಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕ್ರಿಯಾಸಂಪದನಾದಲ್ಲಿ, ಉರಿ ಕಾಷ್ಠವ ವೇದ್ಥಿಸಿದಂತಿರಬೇಕು. ಆ ಚರಪರ ಒಡಗೂಡಿದಂತಿರಬೇಕು. ಜಲ ಜಲವ ಕೂಡಿದಂತೆ ಹೆರೆಹಿಂಗುವುದಕ್ಕೊಡಲಿಲ್ಲ. ವಾರಿಯ ಶಿಲೆ ಬಲಿದು ನೋಡ ನೋಡ ನೀರಾದಂತಿರಬೇಕು. ಇಷ್ಟಲಿಂಗಸಂಬಂಧದ ನಿಷ್ಠೆ, ಪ್ರಾಣಕೂಟ ಉಭಯ ಮೋಸವಿಲ್ಲದಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕುಂಭ ಘಟದಂತೆ ಕುರುಹಾಗಿ, ತುಂಬಿದ ಜಲದಂತೆ ಮನವಾಗಿ, ತಂಡುಲದಂತೆ ಚಿತ್ತಶುದ್ಧವಾಗಿ, ಮಾಡುವ ಕ್ರೀ ಅಗ್ನಿಯಂತಾಗಿ. ಇಂತಿವು ಕೂಡಿ ಘಟಿಸಿ, ಕ್ರೀಜ್ಞಾನ ಶುದ್ಧವಾಗಿ ಅರಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕುರುಹೆ ಘಟವಾಗಿ, ಅರಿವೆ ಆತ್ಮನಾಗಿ. ಉಭಯವನರಿವುದು ಆಚಾರದಂಗವಾಗಿ. ಇವು ನಿಂದು ಉಳಿಯೆ, ಐಘಟದೂರ ರಾಮೇಶ್ವರಲಿಂಗದ ಇರವು, ಬಚ್ಚಬಯಲಾಯಿತ್ತು.
--------------
ಮೆರೆಮಿಂಡಯ್ಯ
ಕಂಡು ಹಿಡಿಯುವುದು ಘಟದ ಭೇದ. ಕಾಣದರಸುವುದು ಆತ್ಮನ ಭೇದ. ಕಂಡುದ ಕಾಣದುದ ಹಿಂಗಿ ಕೂಡುವುದು, ಅರಿವಿನ ಭೇದ. ತ್ರಿವಿಧ ನಿಂದಲ್ಲಿ, ಐಘಟದೂರ ರಾಮೇಶ್ವರಲಿಂಗನ ನಿಲವು ಅಸಾಧ್ಯ
--------------
ಮೆರೆಮಿಂಡಯ್ಯ
ಕುಸುಮ ಒಣಗಿದಾಗ ಸೌರಭವಡಗಿತ್ತು. ಸಾರವರತಾಗ ಸಸಿ ಹೊಂದಿತ್ತು. ಕುರುಹ ಮರೆದಾಗ ಅರಿವು ನಿಂದಿತ್ತು. ಐಘಟದೂರ ರಾಮೇಶ್ವರಲಿಂಗ ಭಜನೆಗೊಳಗಾಗಬೇಕು.
--------------
ಮೆರೆಮಿಂಡಯ್ಯ
ಕೈ ಕಾಲಿನಲ್ಲಿ ಕೊಂಡಡೇನು, ಬಾಯಿಗೆ ಬಂದಲ್ಲದೆ ಒಡಲೆಡೆಯಿಲ್ಲ. ಮಾತಿನಲ್ಲಿ ಆಡಿದಡೇನು, ಮನದಲ್ಲಿ ಅರಿದಡೇನು, ಆ ಇರವು, ಆತನ ಮುಟ್ಟಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕ್ರೀಯ ತೆರನನರಿಯೆನೆಂದು ಬಿಡಬಹುದೆ ಆಚಾರವ ? ಆಚಾರದ ತೆರನನರಿಯೆನೆಂದು ಮರೆಯಬಹುದೆ ಮಾರ್ಗವ ? ಇಂತೀ ನಾನಾ ಭೇದಂಗಳಲ್ಲಿ ಅರಿದು, ವಿಚಾರಿಸಿ, ಮಣ್ಣಿನಲ್ಲಿ ಕೆಡಿಸಿ, ಮಣ್ಣಿನಲ್ಲರಸುವಂತೆ, ಮನೆಯಲ್ಲಿ ಇರಿಸಿದ ಒಡವೆಯ ಮರೆದು, ನೆನೆವಂತೆ ಅರಿ. ಇಷ್ಟಲಿಂಗದ ಪ್ರಾಣಲಿಂಗದ ಗೊತ್ತೆಂಬುಭಯ ಬೇಡ. ಅದು ನಿಶ್ಚಯ, ಒಂದಲ್ಲದೆ ಬೇರೆ ನಾಮವಿಲ್ಲ, ಐಘಟದೂರ ರಾಮೇಶ್ವರಲಿಂಗಕ್ಕೆ.
--------------
ಮೆರೆಮಿಂಡಯ್ಯ
ಕಾಮವ ಬ್ರಹ್ಮಂಗಿಕ್ಕಿ, ಮೋಹವ ವಿಷ್ಣುವಿಂಗಿಕ್ಕಿ, ಲೋಭವ ರುದ್ರಂಗಿಕ್ಕಿ, ಮದವ ಮದನಂಗೆ ಕೊಟ್ಟು, ಕಳೆದುಳಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕಂಡೆನೆಂದಡೆ ಮುಂದಕ್ಕೊಂದನರಿವುತ್ತಿದ್ದಿತ್ತು. ಕಾಣೆನೆಂದಡೆ ಅಂಗದಲ್ಲಿದ್ದ ಕುರುಹು ಇದ್ದಿತ್ತು. ಈ ಉಭಯವ ಹಿಂಗಿ ಕಂಡೆಹೆನೆಂದಡೆ, ಐಘಟದೂರ ರಾಮೇಶ್ವರಲಿಂಗ ಸಾಧ್ಯ.
--------------
ಮೆರೆಮಿಂಡಯ್ಯ
ಕ್ರೀಭಾವಶುದ್ಧತೆ ಆದವನಿರವು, ಬೆಂಕಿ ಕಾಷ*ವ ಕೂಡಿ, ದ್ವಂದ್ವವಾಗಿ ಉರಿದು, ಹಿಂಗಿ ನಂದಿದಂತಿರಬೇಕು. ಹುಳಿ ಸಿಹಿಯ ಕೂಡಿ, ಕೂಟಸ್ಥದಿಂದ ಉಳುಮೆಯ ಘೃತದಂತಿರಬೇಕು. ವಿಷ ಶರೀರದಲ್ಲಿ ವೇಧಿಸಿ, ದೆಸೆಯನಳಿದಂತಿರಬೇಕು. ಅಗ್ನಿಯಲ್ಲಿ ಅರತ ಉದಕದಂತೆ, ಬಯಲೊಳಡಗಿದ ಶಬ್ದದಂತಿರು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕಲ್ಪಿಸಿ ಅರ್ಪಿಸಿ, ಅರ್ಪಿಸಿ ಭೋಗಿಸಲಿಲ್ಲ, ಅರ್ಪಿತ ಅನರ್ಪಿತವೆಂಬೆರಡಳಿದನಾಗಿ. ಕಾಯದ ಕೈಗಳಲ್ಲಿ, ಮನದ ಕೈಗಳಲ್ಲಿ, ಭಾವದ ಕೈಗಳಲ್ಲಿ ಅರ್ಪಿಸುವವನಲ್ಲ, ಆತ ಅನರ್ಪಿತನಾಗಿ. ಅರ್ಪಿತ ಅನರ್ಪಿತವೆಂಬೆರಡಳಿದನಾಗಿ, ಕೂಡಿದೆನಗಲಿದೆ, ಅಳಿದೆನುಳಿದೆನೆಂದಡೆ, ಸಂದನಳಿದ ಸದಮಲಾನಂದಸಿಂಧು [ಐಘಟದೂರ] ರಾಮೇಶ್ವರನು ತಾನೆ.
--------------
ಮೆರೆಮಿಂಡಯ್ಯ
ಕರ್ತೃ ಭೃತ್ಯವಾದಲ್ಲಿ, ಸರಸ ಸುರತಸಂಗ ಪರಿಹಾಸಕಂಗಳಿಂದ ಮಾಡುವುದು, ಮಾಡಿಸಿಕೊಂಬುದು ಉಭಯದ ಕೇಡು. ಅದು ನೀರಸವಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕರ್ಮದ ಗಸಣಿ ಬೇಡ. ವರ್ಮವನರಿದಲ್ಲಿ ಬ್ರಹ್ಮವೆಂದೆನಬೇಡ. ಸಮಾಧಾನ ನೆಲೆಗೊಂಡಲ್ಲಿ, ನಿರ್ಮಳ ನಿಜ ತಾನಾದಲ್ಲಿ, ಆನಂದಸಿಂಧು [ಐಘಟದೂರ] ರಾಮೇಶ್ವರನೆನಲಿಲ್ಲ.
--------------
ಮೆರೆಮಿಂಡಯ್ಯ