ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಣ್ಣಿನಲ್ಲಿ ನೀರ ಬೆರಸಿ, ಮಥಿತಾಗಿ ನಿಂದು, ನಿಲಿಸಿ ತೋರಿ, ಮುನ್ನಿನಂತಾಯಿತ್ತು. ಅಪ್ಪು ಸಂಗವನೆಯ್ದಿದಂತೆ ಇರಬೇಕು, ಇಷ್ಟಪ್ರಾಣಯೋಗಸಂಬಂಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು. ಮುಂದಕ್ಕೆ ಒದಗು, ಹಿಂದಕ್ಕೆ ದೂರವಾಯಿತ್ತು. ಇಷ್ಟದಲ್ಲಿ ಚಿತ್ತ ನೆಮ್ಮಿ, ಮತ್ತೆ ಪ್ರಾಣನ ಪಥ್ಯವನರಿಯಬೇಕು. ಫಲದ ತೊಡಪು ಕೈಗೆ ತಾಹಂತೆ, ಘಟಜ್ಞಾನಕ್ಕೆ ಬ್ಥಿನ್ನವಿಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮರುತ ಸಂಗವ ಮಾಡಿದ ಉರಿ, ವಾರಿ ಗಂಧದಂತೆ, ವಾಳುಕ ಸಂಬಂದ್ಥಿಯಾದ ಜಲದ ಇರವಿನಂತೆ, ಶಿಲೆ ತೈಲದ ಒಲುಮೆಯಂತಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮನ ಮುಟ್ಟದ ಪೂಜೆ, ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ. ವಸ್ತುವ ಮುಟ್ಟದ ಅರ್ಪಿತ, ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ, ಇದು ನಿಶ್ಚಯದ ಮುಟ್ಟಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮನೆಯ ಹೊರಗಿದ್ದವನ, ಮನೆಯ ಒಳಗಿದ್ದವ ಕರೆದಡೆ ವಿರೋಧವುಂಟೆ ಅಯ್ಯಾ ? ಕ್ರೀ ಹೊರಗಾಗಿ ಆತ್ಮನೊಳಗಾದಲ್ಲಿ, ನಾನೆಂಬನ್ನಕ್ಕ ಕ್ರೀ ಶೂನ್ಯವಿಲ್ಲದಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮೊದಲು ರೂಪಾದ ಬಿತ್ತು, ಭೂಮಿಯಲ್ಲಿ ಬಿತ್ತಿ, ಅದು ಬೀಜ ನಾಮ ನಿಂದು, ಸಸಿಯೆಂಬ ನಾಮವಾಯಿತ್ತು. ಸಸಿ ಬಲಿದು ಬೆಳೆದು, ಉಂಡಿಗೆಯ ಬೀಜವೆಂಬ ಉಭಯನಾಮವ ತಾಳಿದುದು. ಬೀಜ ಒಂದೋ, ಎರಡೋ ? ಎಂಬುದನರಿದಲ್ಲಿ, ಕ್ರೀ ಶೂನ್ಯವೆಂಬ ಉಭಯನಾಮವಡಗಿತ್ತು. ಐಘಟದೂರ ರಾಮೇಶ್ವರಲಿಂಗ[ದ] ಉಭಯನಾಮ ನಿಂದಿತ್ತು.
--------------
ಮೆರೆಮಿಂಡಯ್ಯ
ಮೇಘ ಒಸರಿ ಧರೆಯಲ್ಲಿ ನಿಂದು, ಆ ಧರೆಯ ತೋಡಿ ತೆಗೆಯೆ, [ಆ ಸಲಿಲ] ಮುನ್ನಿನ ಹಾಂಗೆ ಧರೆಗಿಳಿಯೆ. ಹಾಗಿರಬೇಕು, ಇಷ್ಟಪ್ರಾಣಯೋಗಸಂಬಂಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮಣ್ಣು ಬೆಂದು ಮಡಕೆಯಾಗಿ ಒಡೆದಡೆ, ಮುನ್ನಿನಂತಾದುದಿಲ್ಲ. ಮಿಸುನಿ ವಿಶ್ವದೊಳಗಿದ್ದು, ತನ್ನಯ ರಸಕುಲವ ಬೆರೆಸಿದುದಿಲ್ಲ. ಕ್ಷೀರ ಬಲಿದು ನಿಂದು, ಮುನ್ನಿನ ಪಿಸಿತವ ಸಾರಿದುದಿಲ್ಲ. ಮೂರನರಿದು ಹರಿದು, ಮೂರನೊಡಗೂಡುವ ಡಾಗಿನ ಪಶುಗಳಿಗೇಕೆ ನೆರೆ ನಿರನ ಹೊಲಬು, ಐಘಟದೂರ ರಾಮೇಶ್ವರಲಿಂಗವನರಿಯರಾಗಿ ?
--------------
ಮೆರೆಮಿಂಡಯ್ಯ
ಮರದ ಘಟಕ್ಕೆ, ತೊಗಲ ಬಿಗಿದು ಹೊಡೆಯೆ, ಅದು ಒಡಗೂಡೆ ನಾದವಾಯಿತ್ತು. ಈ ತೊ[ಗಲಿ]ನ ಭೇದ, ಒಡಗೂಡುವ ಲಿಂಗದ ಭಾವ ಕುರುಹಿನ ನೆಮ್ಮುಗೆಯನರಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮನೆಯಲ್ಲಿ ಮನುಜರು ಅಡಗುವರಲ್ಲದೆ, ಮನುಜರಲ್ಲಿ ಮನೆ ಅಡಗಿದುದುಂಟೆ ? ಮಾಡುವುದಕ್ಕೆ ಕರ್ತನಲ್ಲದೆ ಆ ಘಟವ ಘಟಿಸುವುದಕ್ಕೆ ಅಗೋಚರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಮೊನೆಯಿರಿವಡೆ ಕರವಿಡಿಯಲ್ಲಿ ಇರಿದಲ್ಲದಾಗದು. ಮನ ಅರಿವಡೆ ಕುರುಹಿನ ನೆರಿಗೆಯಲ್ಲಿ ಸಲೆ ಸಂದು ನಿಂದಲ್ಲದಾಗದು. ಕ್ರೀ ಭಾವಶುದ್ಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ