ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು. ಶಿಲೆಯೊಳಗಣ ಕಿಚ್ಚು ತಾಯನುಳುಹಿ, ಇದಿರ ಸುಟ್ಟಿತ್ತು. ಮರದೊಳಗಣ ಕಿಚ್ಚು ಮರನನೂ ಸುಟ್ಚು, ಇದಿರನೂ ಸುಟ್ಟು, ಪರಿಸ್ಪಂದಕ್ಕೆ ಹರಿಯಿತ್ತು. ಇಂತೀ ತ್ರಿವಿಧಭೇದದಿಂದ, ಜ್ಞಾನದ ಭೇದವನರಿ ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನಾನಾ ಫಲವ ಸಲಹುವಲ್ಲಿ, ಮೂಲದ ಬೆಳೆಯನರಿತು ನೀರನೆರೆಯಬೇಕು. ವ್ರತ ನೇಮ ಕೃತ್ಯ ನಿತ್ಯವ ಮಾಡುವಲ್ಲಿ, ಅತಿಶಯನಾಗಿರಬೇಕು. ಪಟುಭಟನಾದಲ್ಲಿ ಉಭಯದಳ ಪಿತಾಮಹನಾಗಿರಬೇಕು. ಗತಿ ಬಟ್ಟೆಯ ತೋರುವ ಚರಗುರುದ್ವಯ ಗತಿಮಹನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನರದೇಹವ ತೊಟ್ಟು, ತಾ ಗುರುವೆಂದು ಇದಿರಿಗೆ ಇಷ್ಟವ ಕೊಟ್ಟು, ಅವರ ಮನೆಯಲ್ಲಿ ಒಲ್ಲದೆ, ಅಕ್ಕಿ ತುಪ್ಪವ ನೀಡಿಸಿಕೊಂಡು, ಅಟ್ಟುಕೊಂಡುಂಬ ಮಿಟ್ಟೆಯಭಂಡರ ಕೈಯಲ್ಲಿ ಕಟ್ಟಿಸಿಕೊಂಡ ಲಿಂಗ, ದೃಷ್ಟದಿ ಶ್ರವಕಾಯ. ಇದನರಿತು, ಅಲ್ಲಿ ಹೊಕ್ಕು ಉಂಡವಂಗೆ ಕರಟನ ಕೈಯ ಕೀಟಕ, ಆ ಕಾಕೂಳು, ಘಟಿತಮಯ ಐಘಟದೂರ ರಾಮೇಶ್ವರಲಿಂಗ ಅವರ ಒಲ್ಲನಾಗಿ.
--------------
ಮೆರೆಮಿಂಡಯ್ಯ
ನೀರೊಳಗಣ ಕಿಚ್ಚಿಗೆ ನೀರೆ ತಾಯಿ. ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ. ಮರದೊಳಗಣ ಕಿಚ್ಚಿಗೆ ಮರನೆ ತಾಯಿ. ಅವು ಹೊರಹೊಮ್ಮಿದಾಗ ತಾಯ ತಿಂದು, ತಾವು ತಲೆದೋರುವಂತೆ ಕುರುಹಿಂದ ಅರಿವನರಿತು ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ, ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು.
--------------
ಮೆರೆಮಿಂಡಯ್ಯ