ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಡುವ ಮಡಕೆಯ ತೋರಿ ಶಿಶುವಿನ ಹಸುವಅಡಗಿಸುವವಳಂತೆ, ಬರಿದೆ ಗುಮ್ಮನಿದೆಯೆಂದು ಶಿಶುವ ಬೆದರಿಸಿ ಹಸುಳೆಯ ಅಡಗಿಸುವವಳಂತೆ, ಎನ್ನ ಗಸಣಿಗಾರದೆ ಗುರುಚರವೆಂಬ ಬರಿಯ ಇರವ ತೋರಿ, ನೀನು ಎಲ್ಲಿ ಅಡಗಿದೆ? ನಿನ್ನ ಕುರುಹ ತ್ರಿವಿಧದಲ್ಲಿಯೂ ಕಾಣೆ. ಅದು ನಿನ್ನ ಗನ್ನವೊ? ಎನ್ನ ವಿಶ್ವಾಸದ ಹೀನವೊ? ಉಭಯವೂ ನಿನ್ನ ಕೇಡು. ಆಳಿನ ಅಪಮಾನ ಆಳ್ದಂಗೆ ತಪ್ಪದು. ನೀನೆ ಕೆಡುವೆ, ನಿನ್ನೊಳಗೆ ಮುನ್ನವೆ ನಾ ನಷ್ಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಪ್ಪುವಿನ ಉತ್ಕಟದ ಮಣಿಯಂತೆ ಚಿತ್ರದ ಎಸುಗೆಯ ಲಕ್ಷಣದಂತೆ ಸೂತ್ರದ ಲೆಪ್ಪದ ಭಿತ್ತಿ ಕಡೆಗಾಣಿಸಿದಂತೆ ದೀಪದ ಮೊತ್ತ ಕೆಟ್ಟು ಮೃತ್ತಿಕೆಯ ಘಟ ಒಪ್ಪವಿದ್ದಂತೆ ರಾಜ ಚಿತ್ರದ ಗೃಹ ಹೊತ್ತಿ ಬೆಂದು ಭಸ್ಮಗುಪ್ಪೆಯಿದ್ದಂತೆ ಇದು ಕ್ರಿಯಾಪಥ ಮುಕ್ತನ ಭೇದ. ಅರಿದು ಮರೆದವನ ಚಿತ್ತದ ಗೊತ್ತು. µಟ್ಕರ್ಮ ವಿರಕ್ತನ ನಷ್ಟ, ಸರ್ವಗುಣಿ ಸಂಪನ್ನನ ಮುಟ್ಟಿನ ಭೇದ; ನಿರುತ ಸ್ವಯ ಸಂಗದ ಕೂಟ, ಈ ಗುಣ ಸಾವಧಾನಿಯ ಬೇಟ, ಸರ್ವಾಂಗಲಿಂಗಿಯ ಕೂಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅತ್ತಲಿಂದ ಬಂದವನ ಇತ್ತಳವ ಕಂಡು, ಇತ್ತಲಿಂದ ಹೋದವನ ಅತ್ತಳವ ಕಂಡು, ಇದೆತ್ತಣ ಸುದ್ದಿಯೆಂದು ನಾ ಕೇಳಲಾಗಿ, ಕತ್ತೆ ಸತ್ತಿತ್ತು, ಕುದುರೆ ಹರಿಯಿತ್ತು, ಬೇಹಾರ ನಷ್ಟವಾಯಿತ್ತು. ಮಧುಕೇಶ್ವರಲಿಂಗವೇ ಎಂದು ಬಾಯಾರುವ ಚಿತ್ತ ಬಟ್ಟಬಯಲಾಯಿತ್ತು
--------------
ದಾಸೋಹದ ಸಂಗಣ್ಣ
ಅರ್ಪಿತವಾದುದು ಮುಟ್ಟದೆ, ಅನರ್ಪಿತದಲ್ಲಿ ಮುಟ್ಟನರಿದು, ದೃಷ್ಟವ ಕಂಡು ಅರ್ಪಿಸುತ ಕಾಯದಿಂದ ಬಂದ ಕರ್ಮಾರ್ಪಿತ, ಭಾವದಿಂದ ಬಂದ ಭೇದಸ್ವರೂಪು, ಇಂತೀ ಕಾಯವ ಜೀವನರಿದಲ್ಲಿ ದೃಷ್ಟ ತನ್ನಷ್ಟವಾದುದು ಉಭಯ ಅರ್ಪಿತದ ದೃಷ್ಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಪ್ಪುಮಯದಿಂದಾದ ಶರೀರ ಹುಟ್ಟುವಲ್ಲಿ ಅಪ್ಪು ಕೊಡನೊಡೆದು ಉತ್ಪತ್ಯವಾದುದು ಪಿಂಡದ ಭೇದ. ಆ ಪಿಂಡ ನಷ್ಟವನೆಯ್ದುವಲ್ಲಿ ಉಂಗುಷ್ಪ ಮುಂತಾದ ಅಡಿತೊಡೆಗಳಲ್ಲಿ ಅಪ್ಪು ಆವರ್ಜಿಸಿ ಚೇತನ ನಷ್ಟವಾಗಿ, ಇದು ದೃಷ್ಟ ಪಿಂಡದಿ ಮರಣ. ಈ ಉಭಯದ ಜನನ ಮರಣವ ತಾನರಿತು, ಜಗದಂತೆ ಹುಟ್ಟದೆ ಜಗದಂತೆ ಹೊಂದದೆ, ಶ್ರೀಗುರುವಿನ ಕರಕಮಲದಲ್ಲಿ ಅಂತಃಕರಣ ಆನಂದ ಅಶ್ರುಜಲ ಉಣ್ಮಿ, ಹುಟ್ಟಿದ ಪಿಂಡ ಗುರು ಕರಜಾತ. ಇಂತಪ್ಪ ಲಿಂಗಮೂರ್ತಿ ಧ್ಯಾನದಿಂದ ಬೆಳೆದು, ತ್ರಿವಿಧ ಪ್ರಸಾದವ ಸ್ವೀಕರಿಸಿ ಸರ್ವಜ್ಞಾನ ಸಂಪನ್ನನಾಗಿ ಪಿಂಡದ ಅಳಿವನರಿವಲ್ಲಿ ಸಂಚಿತದ ಸುಖ, ಪ್ರಾರಬ್ಧದ ಶಂಕೆ, ಆಗಾಮಿಯ ಆಗು ಇಂತೀ ತ್ರಿವಿಧ ಭೇದವ ಕಂಡು ತ್ರಿವಿಧ ಮಲಕ್ಕೆ ಮನವನಿಕ್ಕದೆ ಇವು ಮುನ್ನ ತನ್ನವಲ್ಲ, ಇನ್ನು ನನ್ನವಲ್ಲ ಎಂಬುದ ತಿಳಿದು, ಸತಿ-ಸುತ-ಪಿತ-ಜನನಿ-ಬಂಧು ಮುಂತಾದ ವರ್ಗಂಗಳನರಿತು, ಇವು ತಾವು ಬಟ್ಟೆಯೆಂಬುದು ತಿಳಿದು ಲೌಕಿಕಕ್ಕೆ ಮನವಿಕ್ಕದೆ, ಆತ್ಮಂಗೆ ಉಚಿತ ವೇಳೆ ಬಂದಲ್ಲಿ ಗುರುವಿನಲ್ಲಿ ವಿಶ್ವಾಸ, ಲಿಂಗದಲ್ಲಿ ಮೂರ್ತಿಧ್ಯಾನ, ಜಂಗಮದಲ್ಲಿ ಪ್ರಸನ್ನ ಪ್ರಸಾದವ ಕೈಕೊಂಡು, ಹುಸಿಯ ಮೃತ್ತಿಕೆಯಲ್ಲಿ ಸರಳು ಸುರಿದಂತೆ, ತನ್ನ ಇಷ್ಟದಲ್ಲಿ ಚಿತ್ತ ಹೊರೆಯಿಲ್ಲದೆ ಹರಿದು, ಎರವಿಲ್ಲದೆ ಕೂಡಿ ಬೆರೆದುದೆ ಸಾವಧಾನಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಂಗದಲ್ಲಿ ಲಿಂಗ ವೇಧಿಸಬೇಕೆಂಬಲ್ಲಿ ಅಂಗಕ್ಕೂ ಲಿಂಗಕ್ಕೂ ಏನು ಸಂಬಂಧ? ಅಂಗದ ಮೇಲೆ ವಿಷವ ತೊಡೆಯಲಿಕ್ಕಾಗಿ ಚರ್ಮ ಹಿಂಗದೆ ಆತ್ಮಂಗೆ ಲಹರಿ ಕೊಂಡುದುಂಟೆ? ಇಂತೀ ಅಂಗ ಲಿಂಗದಲ್ಲಿ ಅರ್ಚನೆ ಆವರಿಸಿ ಆತ್ಮಸ್ಥಿರೀಕರಿಸಿ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಗ್ನಿಯ ಕಳೆ ಐದು ಗುಣ, ಜ್ಯೋತಿಯ ಕಳೆ ಹಲವು ಗುಣ. ರತ್ನದ ಕಳೆ ನವಗುಣ, ಚಿತ್ತದ ಕಳೆ ವಿಶ್ವತೋಮುಖ. ಸುಚಿತ್ತದ ಕಳೆ ಏಕಜ್ಯೋತಿಯಾಗಿಪ್ಪುದ ತಿಳಿದು ಇಷ್ಟದ ಲಕ್ಷ ್ಯದಲ್ಲಿ ಬೈಚಿಟ್ಟಾತ ಪ್ರತ್ಯಕ್ಷ ಪರಮಸುಖಿ. ಮತ್ರ್ಯ ಕೈಲಾಸವೆಂಬ ಗುಟ್ಟಿನ ಕೊಳಕಿಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ