ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು ವರ್ತುಳ ಖಂಡಿಕಾದಂಡ ಗೋಮುಖ ಗೋಳಕಾಕಾರವಪ್ಪ ಲಿಂಗಮೂರ್ತಿಯಿಂದ ಶಶಿ ರವಿ ಪವನ ಪಾವಕ ಆತ್ಮ ಮುಂತಾದ ಭೇದಂಗಳನರಿದು ಪಂಚಸೂತ್ರದಿಂದ ಪ್ರಯೋಗಿಸಿ, ಅಚೇತನವಪ್ಪ ಶಿಲೆಯ ಕುಲವಂ ಹರಿದು, ತಾ ಶುಚಿರ್ಭೂತನಾಗಿ ಆ ಇಷ್ಟಲಿಂಗವ ತನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿ ತನು ಕರಗಿ ಮನ ರೆುsುೂಂಪಿಸಿ ಪುಳಕಿತದಿಂದ ಆನಂದಾಶ್ರು ಉಣ್ಮಿ ನಿಧಾನಿಸಿ ನಿಕ್ಷೇಪವ ಕಾಬವನಂತೆ ಬಯಲ ಬಂದಿವಿಡಿವವನಂತೆ ಶಿಲೆಯಲ್ಲಿ ರಸವ ಹಿಳವವನಂತೆ ರತ್ನದ ಕಳೆಯ ಗಂಟನಿಕ್ಕಿ ಕಟ್ಟಿ ತಾಹವನಂತೆ ಮುತ್ತಿನೊಳಗಡಗಿದ ಅಪ್ಪುವಿನ ವಿರಾಳದಿಂದ ಶೋದ್ಥಿಸಿ ಮುಚ್ಚಿತಾಹವನಂತೆ ಜ್ಯೋತಿಗೆ ಪ್ರತಿಹಣತೆಯಿಂದ ಆ ಬೆಳಗ ಮುಟ್ಟಿಸಿ ಕಾಹವನಂತೆ, ಇಂತೀ ನಿರವಯದ ಸುವಸ್ತುವಿನ ಪ್ರಯೋಗದಿಂದ ದಿವ್ಯಪ್ರಕಾಶನ ತನ್ನ ಕರತಳಾಮಳಕದಂತೆ ಮೂರ್ತಿಗೊಂಡಿದ್ದ ಶಿವಲಿಂಗಮೂರ್ತಿಗೆ ಧ್ಯಾನದ ಕೈಯಿಂದ ಆ ಸ್ವರೂಪಕ್ಕೆ ಮೂರ್ತಿಗೊಳಿಸಿ ಷೋಡಶಕಳೆಯಿಂದ ಉಪಚರಿಸಿ ನವಕಳಶ ಪ್ರಯತ್ನ ಪ್ರಯೋಗವ ಮಾಡಿ ಚತುರ್ವಿಧ ಆಚಾರ್ಯರ ಕೂಡಿ ಅಷ್ಟದೆಸೆಗಳಲ್ಲಿ ಕರ್ತೃಕಳಶ ನಾಲ್ಕು, ಭೃತ್ಯಕಳಶ ನಾಲ್ಕು, ಶ್ರೀಗುರುಕಳಶ ಮಧ್ಯದಲ್ಲಿ ನಾಲ್ಕು ವರ್ಣಕ್ರೀ ಮುಂತಾದ ಪ್ರಾಣಲಿಂಗವೆಂದು ಉಪೇಕ್ಷಿಸಿ ಧಾರಣವ ಮಾಡುವಲ್ಲಿ ಗುರು ನಾನೆಂಬುದ ಮರೆದು ಅಹಂಕಾರವ ತೊರೆದು ಆತ್ಮತೇಜವ ಹರಿದು ಮುಂದಣ ತ್ರಿವಿಧ ಸೇವೆಯ ತೋರಿ ಮಂತ್ರಾಬ್ಥಿಷೇಕ ತೀರ್ಥಮಂ ತಳೆದು ಶ್ರೀವಿಭೂತಿಯಲ್ಲಿ ಸರ್ವಾಂಗ ಧೂಳಿತವಂ ಮಾಡಿ ತ್ರಿಕರಣ ಶುದ್ಧವಂ ಮಾಡಿ ಕಪಾಲಕ್ಕೆ ಕರವನಿಟ್ಟಲ್ಲಿ ಪರುಷರಸ ಪಾಷಾಣ ಲೋಹದ ಮೇಲೆ ಬಿದ್ದಂತೆ ನಂಜೇರಿದಂಗೆ ಸಂಜೀವನ ಸಂದ್ಥಿಸಿದಂತೆ ಇಂತೀ ಕಪಾಲಕ್ಕೆ ಕರವನಿಟ್ಟು ಕರ್ಣಕ್ಕೆ ಮಂತ್ರವ ಹೇಳಿದಲ್ಲಿ ಹುಸಿ ಕೊಲೆ ಕುಹಕ ಪಾರದ್ವಾರ ಚೋರತ್ವ ಪಿಸುಣತನವಂಬಿಟ್ಟು ಅರುವತ್ತುನಾಲ್ಕು ಶೀಲ, ಐವತ್ತೆರಡು ನೇಮ, ಮೂವತ್ತರೊಳಗಾದ ನಿತ್ಯಕೃತ್ಯ, ಆರುಸ್ಥಲದೊಳಗಾದ ಆಚಾರ, ಇಪ್ಪತ್ತೈದರೊಳಗಾದ ತತ್ತ್ವ ಇಂತಿವರೊಳಗಾದವರಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ನಿಶ್ಚೆ ೈಸಿ ನಡೆಯೆಂದು ಲಿಂಗಧಾರಣವ ಮಾಡುವದಿದು ಗುರುದೀಕ್ಷಾ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 82 ||
--------------
ದಾಸೋಹದ ಸಂಗಣ್ಣ
ಲಿಂಗಾಂಗವಾದ ಭೋಗ ಭೋಜ್ಯಂಗಳ ತೆರನೆಂತುಟೆಂದಡೆ: ಅವುದ ಕೂಡಿದಲ್ಲಿಯೂ ಬಿಂದು ತಿಲಸಾರದಂತಿರಬೇಕು. ಅವುದ ಬೆರಸಿದಲ್ಲಿಯೂ ಮುಕುರದ ಬಿಂಬದ ಪ್ರತಿಬಿಂಬದಂತೆ ಸಂಗ ತೋರಿ ಅಂಗವಳಿದಿರಬೇಕು. ಇದು ಲಿಂಗಾಂಗಿಯ ಮುಟ್ಟು, ಸುಸಂಗಿಯ ನಿರತ ಸ್ವಯಾಂಗಿಯ ಉಭಯದ ಮುಟ್ಟು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 83 ||
--------------
ದಾಸೋಹದ ಸಂಗಣ್ಣ
ಲಿಂಗಕ್ಕೆ ನೈವೇದ್ಯ ಸಕಲ ಪದಾರ್ಥ ಬಂದಿರಲಿಕ್ಕಾಗಿ ಕಂಗಳು ತುಂಬಿ ನೋಡಿ ಕೈ ತುಂಬ ಮುಟ್ಟಿ, ಲಿಂಗಾರ್ಪಿತಕ್ಕೆ ಮೊದಲೆ ಕ್ಷುಧೆಯಾವರಿಸಿ ಮನ ನೆಟ್ಟಿತ್ತಾದಡೆ, ಆ ಗುಣ ಲಿಂಗಾರ್ಪಿತವಲ್ಲ, ಕ್ರೀಗೆ ಸಲ್ಲ, ಪ್ರಮಥರೊಳಗಲ್ಲ, ಪ್ರಸನ್ನನೊಪ್ಪ. ಶಂಭುವಿನಿಂದಿತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 80 ||
--------------
ದಾಸೋಹದ ಸಂಗಣ್ಣ