ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಗುರು ಕುರುಹು ಕೊಟ್ಟು, ಕುರುಹಿನ ಬೆಂಬಳಿಯಲ್ಲಿ ಅರಿಯೆಂದು ಹೇಳಲಿಕ್ಕಾಗಿ ಆ ಉಭಯವ ಮರೆದು ಬೇರೊಂದರಿವಿನ ಮುಖದಲ್ಲಿ ಒಡಗೂಡಿಹೆನೆಂಬ ಅಡಗಗಳ್ಳರ ನೋಡಾ. ಕುರಿ ನಾಚಿ ವತ್ಸ ಮೊದಲಾಗಿಯೂ ತಮ್ಮ ಒಡೆಯನ ಇಂತೀ ಗುಣವನರಿಯದ ಬಡಿವ ಬಾಯವರನೊಡಗೂಡ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 89 ||
--------------
ದಾಸೋಹದ ಸಂಗಣ್ಣ
ಶಿಲೆಯೊಳಗೆ ಪಾವಕನಿಪ್ಪ ತೆರನಂತೆ ಕಡೆ ನಡು ಮೊದಲೆನ್ನದೆ ಎಲ್ಲಿ ಮುಟ್ಟಿದಲ್ಲಿ ಕಿಡಿ ಪಲೈಸುವಂತೆ ಸರ್ವಾಂಗಲಿಂಗವಾದ ಶರಣಂಗೆ ಆವ ಗುಣದಲ್ಲಿ ನೋಡಿದಡೂ, ಅಲ್ಲಿಯೆ ಲಿಂಗ ಮುಂಚು. ತನಗೆ ಅನ್ಯ ಭಿನ್ನವೆಂಬ ಮುಟ್ಟಿನ ಸೂತಕ ಕಟ್ಟಿನ ಭಾವವಿಲ್ಲ. ಹಣ್ಣಿನಲ್ಲಿ ವಿಷ ವೇಧಿಸಲಿಕ್ಕಾಗಿ ಹಣ್ಣು ಸಾವುದೆ ಹಣ್ಣಿನ ರಸವ ಕೊಂಡವನಲ್ಲದೆ? ಈ ಗುಣ ಸರ್ವಾಂಗಲಿಂಗಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 88 ||
--------------
ದಾಸೋಹದ ಸಂಗಣ್ಣ