ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ ಕಟ್ಟಳೆಯ ವರುಷಕ್ಕೆ ತಪ್ಪದೆ ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ ಅವು ಬಾರದಿರೆ ತಾ ಸಂದ್ಥಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ ಗುರುಸ್ಥಲ ಎಂದಿಗೂ ಇಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 39 ||
--------------
ದಾಸೋಹದ ಸಂಗಣ್ಣ
ತಮದ ಗುರಿಯ ಜ್ಯೋತಿಯ ಕುಡಿವೆಳಗಿನ ಸರದಲ್ಲಿಎಸಲಿಕ್ಕಾಗಿ, ಗುರಿಯಲ್ಲಿಯೆ ಸರ ಪರಿಹರಿಸಿ, ಆ ಸರದಲ್ಲಿಯೇ ತಮ ಪರಿಹರಿಸಿತ್ತು. ಲಕ್ಷ ್ಯದಲ್ಲಿಯೆ ಚಿತ್ತ, ಚಿತ್ತದಲ್ಲಿಯೆ ಲಕ್ಷ ್ಯ ಅಲಕ್ಷ ್ಯವಾಯಿತ್ತು. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ತನು ಮೂರು ಆತ್ಮವಾರು ಜೀವವೆರಡು ಜ್ಞಾನ ಎಂಬತ್ತನಾಲ್ಕು ಲಕ್ಷ ಪರಮನೊಂದೆ ಭೇದ. ಇಂತೀ ತ್ರಿವಿಧ ತನು ವರ್ಣಂಗಳಲ್ಲಿ ವಿಶ್ವಮಯವಾಗಿ ಸರ್ವ ಜೀವಂಗಳೆಲ್ಲವೂ ತಮ್ಮ ನೆಲ ಹೊಲದಲ್ಲಿ ಆಹಾರ ವ್ಯವಹಾರ ವಿಷಯಂಗಳಿಂದ ಉತ್ಪತ್ಯ ಸ್ಥಿತಿ ಲಯಂಗಳಿಂದ ಕಲ್ಪಾಂತರಕ್ಕೊಳಗಾಗಿಪ್ಪುದು ಬ್ರಹ್ಮಾಂಡಪಿಂಡ. ಇಂತಿವ ಕಳೆದುಳಿದು ಜ್ಞಾನಪಿಂಡ ಉದಯವಾದಲ್ಲಿ ಸರ್ವ ಘಟಪಟಾದಿಗಳ ಸೋಂಕು ಸರ್ವ ಚೇತನದ ವರ್ಮ ಸರ್ವ ಜೀವದ ಕ್ಷುದೆ, ಸರ್ವಾಂತ್ಮಂಗಳಲ್ಲಿ ದಯ ಕ್ರೂರಮೃಗ ಅಹಿ ಚೋರ ಹಗೆ ಇಂತಿವು ಮುನಿದಲ್ಲಿ ಸಂತತ ಭೀತಿಯಿಲ್ಲದೆ ಸಂತೈಸಿಕೊಂಡು ಸರ್ವಾತ್ಮಕ್ಕೆ ಸಂತೋಷವ ಮಾಡುವುದೆ ಜ್ಞಾನ ಪಿಂಡೋದಯ. ಶಂಭುವಿನಿಂದಿತ್ತು ಸ್ವಯಂಭುವನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು || 40 ||
--------------
ದಾಸೋಹದ ಸಂಗಣ್ಣ
ತನುಧರ್ಮವ ಕಂಡು ಮನಧರ್ಮವನರಿದು, ಅರಿವಿನ ವಿವೇಕದಿಂದ ಭೃತ್ಯರನೊಡಗೂಡುವನೆ ಗುರುಚರಮೂರ್ತಿ. ಆತ ಪರಮ ವಿರಕ್ತ, ಪರಾಪರದಿಂದತ್ತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು || 41 ||
--------------
ದಾಸೋಹದ ಸಂಗಣ್ಣ
ತಾನಿರಿಸಿದ ಕಡವರವೆಂದಡೆ ಸಾಕ್ಷಿಯಿಲ್ಲದೆ ಕುರುಹನರಿಯದೆ ಅಗೆಯಬಹುದೆ? ಸಕಲ ವೇದ ಶಾಸ್ತ್ರ ಪುರಾಣ ಅಗಮಂಗಳ ತಾ ಬಲ್ಲೆನೆಂದಡೆ ಕ್ರೀಯಿಲ್ಲದೆ ಜ್ಞಾನಹೀನವಾಗಿ ಭಾವಶುದ್ಧವಿಲ್ಲದೆ ಮತ್ತೇನುವನರಿಬಲ್ಲನೆ? ಇದು ಕಾರಣದಲ್ಲಿ ಕ್ರೀಗೆ ಪೂಜೆ, ಅರಿವಿಂಗೆ ತ್ರಿವಿಧದ ಬಿಡುಗಡೆ, ಆ ಬಿಡುಗಡೆಯ ಅಡಿಯಮೆಟ್ಟಿದ ಶರಣ ಉಂಡುಪವಾಸಿ ಬಳಸಿ ಬ್ರಹ್ಮಚಾರಿ. ಪಳುಕಿನ ವರ್ತಿಯಂತೆ, ತಿಲರಸ ಅಪ್ಪುವಿನಂತೆ, ಹೊದ್ದಿಯೂ ಹೊದ್ದದ ನಿಜಲಿಂಗಾಗಿಯ ಯೋಗ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮದುಕೇಶ್ವರನು. || 43 ||
--------------
ದಾಸೋಹದ ಸಂಗಣ್ಣ
ತ್ರಿವಿಧ ಪ್ರಸಾದವ ಸ್ವೀಕರಿಸುವಲ್ಲಿ ತನ್ನ ಸತ್ಪತ್ರವಲ್ಲದುದ ಲಿಂಗಕ್ಕೆ ಅರ್ಪಿಸಿಕೊಂಡಹೆನೆನಲ್ಲಿಲ್ಲ. ಗುರು ಪ್ರಸಾದ ಬಂದಿತ್ತೆಂದು ತನ್ನ ಕ್ರೀ ಮೀರಿ ಮುಟ್ಟಲಿಲ್ಲ. ಜಂಗಮ ಪ್ರಸಾದವ ಉಭಯ ಪ್ರಸಾದದಲ್ಲಿ ಕೂಡಿ ತನ್ನ ಕ್ರೀ ಹೊರೆಯಾಗಿ ಕೊಳ್ಳಲಿಲ್ಲ. ಇಂತೀ ತ್ರಿವಿಧ ಪ್ರಸಾದದ ಭೇದ ಭಕ್ತಿ ವರ್ತಕಂಗೆ ಶುದ್ಧವಾದಲ್ಲಿ ಲಿಂಗ ಪ್ರಸಾದ. ಮಾಹೇಶ್ವರ ವರ್ತಕಂಗೆ ತನು-ಮನ ಶುದ್ಧವಾದಲ್ಲಿ ಗುರುಪ್ರಸಾದ. ಪ್ರಸಾದಿಸ್ಥಲ ವರ್ತಕಂಗೆ ತ್ರಿವಿಧಮಲತ್ರಯ ದೂರಸ್ಥನಾಗಿ ಮನ-ವಚನ-ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿ ಆಯಾ ಉಚಿತದಲ್ಲಿ ಜಂಗಮ ಪ್ರಸಾದ ಬರಲಿಕ್ಕಾಗಿ ಸ್ವಯ ಸತ್ಕಿ ್ರೀ ತಪ್ಪದೆ ತನ್ನ ದೃಷ್ಟಕ್ಕೆ ಕೊಟ್ಟು ಕೊಂಬುದು ಮಹಾಪ್ರಸಾದಿಯ ಪ್ರಸನ್ನ. ಈ ರಚನೆ ಮಹಾಪ್ರಮಥರ ಪ್ರಸಾದ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ ಮಾತುಳಂಗ ಮಧುಕೇಶ್ವರನು. || 45 ||
--------------
ದಾಸೋಹದ ಸಂಗಣ್ಣ
ತ್ರಿವಿಧ ಕ್ರೀಯಿಂದ ಭೇದವನರಿತು ಮಾಡುವುದು ಭಕ್ತಿಸ್ಥಲ. ಚತುರ್ವಿಧ ಫಲಪ್ರಾಪ್ತಿಯ ಅನುಭವಿಸದೆ ನಿಶ್ಚಯ ವಸ್ತುವ ಕಾಬುದು ಮಾಹೇಶ್ವರಸ್ಥಲ. ಪಂಚೇಂದ್ರಿಯಂಗಳಲ್ಲಿ ಸಂಚಿತದಲ್ಲಿ ಬಂದುದನರಿದು ಲಿಂಗಾರ್ಪಿತದಿಂದ ಕೊಂಬುದು ಪ್ರಸಾದಿಸ್ಥಲದಂಗದ ಇರವು. ಷಡಾಧಾರಂಗಳಿಂದ ಸುಳಿದ ಸೂಕ್ಷ ್ಮದ ಆತ್ಮನ ನೆಲೆಯನರಿದು ಕೂಡುವ ಕೂಟ ಪ್ರಾಣಲಿಂಗಿಸ್ಥಲದ ಇರವು. ಸುಖದುಃಖವೆಂಬ ಉಭಯವನಳಿದು. ಬೆರಗು ನಿಬ್ಬೆರಗಾದುದು ಶರಣಸ್ಥಲದ ಇರವು. ಸುಗಂಧ ಗಂಧವ ಅಗ್ನಿಯಲ್ಲಿ ಸಂಬಂಧಿಸಿ ಅಂಗ ಅಗ್ನಿಯೊಳಡಗಿ ಗಂಧ ಧೂಮದಲ್ಲಿ ತಲೆದೋರಿ ಧೂಮ ಹಿಂಗೆ ಆ ಗಂಧ ಅಲ್ಲಿಯೇ ಅಡಗಿದಂತೆ ನಿಂದುದುಐಕ್ಯಸ್ಥಲ. ಇಂತೀ ಷಡುಸ್ಥಲ ತ್ರಿಕರಣ ಶುದ್ಧಾತ್ಮಂಗಲ್ಲದೆ ಸಾಧ್ಯವಲ್ಲನೋಡಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗೆ ಮಧುಕೇಶ್ವರನು. || 44 ||
--------------
ದಾಸೋಹದ ಸಂಗಣ್ಣ
ತುಂಬಿ ಕುಸುಮದ ಬಂಡುಂಬಂತೆ ಕುಸುಮದಂಗ ಹರಿಯದೆ ಸುಗಂಧ ಆತ್ಮನಲ್ಲಿ ತುಂಬಿ ತುಂಬಿದ್ದಂತೆ ಕುಂಡಲಿ ಕೀಟಕನ ತಂದು ಮೃತ್ತಿಕೆಯ ಮಂದಿರದಲ್ಲಿ ಇರಿಸಿ ಆ ಬೆಂಬಳಿಯಲ್ಲಿ ರೆುsುೀಂಕರಿಸಲಾಗಿ ಅದು ತನ್ನ ಭೀತಿಯಿಂದ ಮತ್ತೆ ಬಂದಿತ್ತಲ್ಲಾ ಎಂದು ತಾ ಸತ್ತೆಹೆನೆಂಬ ಸಂದೇಹದಿಂದ ಮೂರ್ಛೆ ಕರಿಗೊಂಡು ಕೀಟಕನಂಗವಳಿದು ಕುಂಡಲಿಯಾದ ತೆರದಂತೆ ಈ ಗುಣ ಅಂಗಲಿಂಗ ಮೂರ್ತಿಧ್ಯಾನ ನಿಂದಲ್ಲಿ ಪ್ರಾಣಲಿಂಗಸಂಬಂಧ. ಅದು ತದ್ಭಾವ ನಿಜವಾದಲ್ಲಿ ಲಿಂಗಪ್ರಾಣಯೋಗ. ಉಭಯದ ಸಂದನಳಿದು ಸಂಬಂಧ ಸಂಬಂಧಾವಾದಲ್ಲಿ ಆ ವಸ್ತು ವಸ್ತುಲೇಪ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮದುಕೇಶ್ವರನು. || 46 ||
--------------
ದಾಸೋಹದ ಸಂಗಣ್ಣ
ತೊಟ್ಟುಬಿಡುವ ವೇಳೆಯನರಿದ ಮತ್ತೆ ದೋಟಿಯನಿಕ್ಕಲೇತಕ್ಕೆ? ತನ್ನ ಕೃತ್ಯದ ಭಕ್ತಿಯ ಮಾಡುತ್ತಿದ್ದ ಮತ್ತೆ ಒಂದು ದಿನ ತಪ್ಪಲಿಕ್ಕಾಗಿ ಕುಪ್ಪಳಿಸಿ ಬೇಯಲೇತಕ್ಕೆ? ಇದು ಗುರುಸ್ಥಲಕೆ ನಿಶ್ಚಯವಲ್ಲ; ಇದು ಶಿಲೆಯ ಮಾರಿಯ ಹದಹು; ವ್ಯಾಧನ ವೇಷ, ಮೂಷಕನ ವಾಸದ ತಪ್ಪಿನ ಪಥ ಆತ ಸದ್ಗುರುಜಾತನಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು. || 47 ||
--------------
ದಾಸೋಹದ ಸಂಗಣ್ಣ