ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾದ್ಯಕ್ಕೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ? ಅರಿವಿಂಗೆ ಬಂಧವಲ್ಲದೆ ಅರುಹಿಸಿಕೊಂಬವಂಗೆ ಬಂಧುವುಂಟೆ? ಆರಿದೆಹೆನೆಂಬ ಭ್ರಮೆ ಅರುಹಿಸಿಕೊಂಡಹೆನೆಂಬ ಕುರುಹು ಉಭಯ ನಾಸ್ತಿಯಾದಲ್ಲಿ ಬಾವಶುದ್ಧವಿಲ್ಲ. (ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ), ಮಾತುಳಂಗ ಮಧುಕೇಶ್ವರನು. || 84 ||
--------------
ದಾಸೋಹದ ಸಂಗಣ್ಣ
ವಿಷ ತನ್ನೊಳಗಾದಡೂ ತನ್ನ ಕೇಡು, ವಿಷದೊಳಗು ತಾನಾದಡೂ ತನ್ನ ಕೇಡು. ಕರ್ಕಸದ ನಡುವೆ ಹುಟ್ಟಿದ ಕಂಬದಂತೆ. ಇಂತಿವನರಿದು ಮಾಡಿ ನೀಡಿ ವೃಥಾ ನಿರರ್ಥಕ್ಕೆ ಹೋಗಬೇಡ. ಹುತ್ತಕ್ಕೆ ಹಾಲನೆರೆದಲ್ಲಿ ಸರ್ಪ ಕುಡಿಯಿತ್ತೆ ಆ ಹಾಲ? ಅದು ತಮ್ಮ ಕೃತ್ಯದ ಕಟ್ಟಣೆಗೆ ಸರ್ಪನೊಪ್ಪಿ ಕಾಟವ ಬಿಟ್ಟಿತೆ? ಅದು ತಮ್ಮ ಚಿತ್ತದ ದರ್ಪದ ತೆರ. ಇಂತೀ ವಿಶ್ವಾಸದಿಂದ ಶಿವಭಕ್ತಿಯನೊಪ್ಪುಗೊಂಬ, ಇದು ವಿಶ್ವಾಸಿಯ ಸ್ಥಲ. ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 86 ||
--------------
ದಾಸೋಹದ ಸಂಗಣ್ಣ
ವಿರಕ್ತಂಗೆ ವಿಷಯವುಂಟೆ? ಶರಣಂಗೆ ತಥ್ಯಮಿಥ್ಯವುಂಟೆ? ಮಹದೊಡಗೂಡಿ ಮಾಹಾತ್ಮೆಯನಳಿದವಂಗೆ ಗಾಂಭೀರ ಗರ್ವಕ್ಕೆ ಎಡೆದೆರವುಂಟೆ? ಆತನಿರವು ದಗ್ಧಪಟದಂತೆ, ದಹ್ಯದಲ್ಲಿ ನೊಂದ ರಜ್ಜುವಿನ ತೆರದಂತೆ, ನಿರವಯದಲ್ಲಿ ತೋರಿ ತೋರುವ ಮರೀಚಿಕಾ ಜಲದ ತೆರೆಯ ಹೊಳಹಿನ ವಳಿಯಂತೆ. ರೂಪಿಂಗೆ ದೃಷ್ಟವಾಗಿ ಹಿಡಿವೆಡೆಯಲ್ಲಿ ಅಡಿಯಿಲ್ಲದೆ ವಸ್ತುವನೊಡಗೂಡಬೇಕು. ಆತ ಹಿಡಿದುದು ಹಿಡಿಕೆಯಲ್ಲ, ಮುಟ್ಟಿಂಗೊಳಗಲ್ಲ. ಅಂಬರದ ವರ್ಣ ಎವೆ ಹಳಚುವುದಕ್ಕೆ ಮುನ್ನವೆ ಛಂದವಳಿದಂತೆ. ಇದು ಲಿಂಗಾಂಗಿಯ ಮುಟ್ಟು, ಸರ್ವಗುಣ ಸಂಪನ್ನನ ತೊಟ್ಟು, ದಿವ್ಯಜ್ಞಾನಿಯ ತಟ್ಟು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 87 ||
--------------
ದಾಸೋಹದ ಸಂಗಣ್ಣ
ವಿಷ ಚರದಲ್ಲಿ ಉಂಟು, ವಿಷ ಸ್ಥಾವರದಲ್ಲಿ ಉಂಟು. ನಿರ್ವಿಷ ಚರದಲ್ಲಿ ಉಂಟು, ನಿರ್ವಿಷ ಸ್ಥಾವರದಲ್ಲಿ ಉಂಟು. ಇದಿರಿಟ್ಟು ಕಾಬಲ್ಲಿ ಉಂಟು ದೃಷ್ಟ. ಅಲ್ಲಿ ಇಲ್ಲದಿರೆ ತನ್ನಲ್ಲಿ ಉಂಟು ದೃಷ್ಟ. ಆ ಗುಣ ನೀರಿನೊಳಗೆ ಬೆರೆದೆಯ್ದುವ ತಿಳಿವಳಿಯ ಕುಂಪಟೆಯಂತೆ. ವಾರಿಯಂಗವೆ ತನ್ನ ಚರಾಂಗವಾಗಿ ಇದು ಸದ್ಭಾವಕ್ರಿಯಾಂಗಸ್ಥಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 85 ||
--------------
ದಾಸೋಹದ ಸಂಗಣ್ಣ