ಅಥವಾ
(6) (2) (0) (0) (1) (0) (0) (0) (1) (1) (0) (0) (0) (0) ಅಂ (2) ಅಃ (2) (3) (0) (1) (1) (0) (0) (0) (2) (0) (0) (0) (0) (0) (0) (0) (4) (0) (1) (0) (5) (0) (0) (0) (0) (0) (0) (1) (0) (0) (1) (0) (0) (6) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕ್ರೋಧವೆಂಬ ಹೊಲಗೇರಿಯ ಹೊರವಂಟು, ಭೇದವೆಂಬೈವರನತಿಗಳೆದನು. ನಾದಬಿಂದುವೆಂಬ ತೀರ್ಥವನು ಮಿಂದು, ಆದಿ ಎಂಬ ಅಷ್ಟದಳವಂ ಕಿತ್ತೆತ್ತಿ ಹೋದನು. ನಾದ ಬಿಂದು ಆದಿ ಬೋಧೆಗೆ ಒಳಗಾದ ಘನವನು ಸಾಧಿಸಿದಂ ಭೋ ಎನ್ನ ಅಜಗಣ್ಣತಂದೆ
--------------
ಮುಕ್ತಾಯಕ್ಕ
ಕಣ್ಣ ಮೊದಲಲ್ಲಿ ಕುಳ್ಳಿರ್ದು ಬಣ್ಣದೋರುವ ಪರಿಯ ನೋಡಾ ಅವ್ವಾ. ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದನು. ಈ ಅಜಗಣ್ಣನ ಯೋಗಕ್ಕೆ ಬೆರಗಾದೆನವ್ವಾ. ಈ ಅರಿವೆಂತುಟೆಲ್ಲವನೊಳಗಿಟ್ಟುಕೊಂಡನು, ಶಿವಗಣಸಂಚ ಶಿವಯೋಗಿ ಅಜಗಣ್ಣದೇವನು
--------------
ಮುಕ್ತಾಯಕ್ಕ
ಕೈಯದು ಕುರುಹು, ಬಾಯದು ಬೊಬ್ಬೆ. ಉಲಿಯದಿರೊ ಭಾವಾ, ಉಲಿಯದಿರೊ ಭಾವಾ ! ವಾರಿಕಲ್ಲ ಕೊಡನಲ್ಲಿ ಮುತ್ತು ಮಾಣಿಕವ ತುಂಬಿ, ಎತ್ತುವರಿಲ್ಲದೆ ಸಖಿಯನರಸುತಿಪ್ಪೆ. ಮನದ ತನುವಿನಲ್ಲಿ, ಆ ತನುವಿನ ಮನದಲ್ಲಿ ತನಗೆ ತಾನೆತ್ತಿಕೊಂಡಡೆ, ಮನ ಮೇರೆದಪ್ಪಿ ಕರಗಿ ಉಕ್ಕಿತ್ತು ನಮ್ಮ ಅಜಗಣ್ಣನಯೋಗ.
--------------
ಮುಕ್ತಾಯಕ್ಕ