ಅಥವಾ
(6) (2) (0) (0) (1) (0) (0) (0) (1) (1) (0) (0) (0) (0) ಅಂ (2) ಅಃ (2) (3) (0) (1) (1) (0) (0) (0) (2) (0) (0) (0) (0) (0) (0) (0) (4) (0) (1) (0) (5) (0) (0) (0) (0) (0) (0) (1) (0) (0) (1) (0) (0) (6) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತೊರೆಯ ಕಟ್ಟೆಯಕಟ್ಟಿ ನಿಲಿಸಲುಬಹುದೆ ? ನೆರೆ ಮರುಳಿಗೆ ಬುದ್ಧಿಯ ಹೇಳಲುಬಹುದೆ ? ತರಿಸಲುವೋದವನಿದಿರಿಚ್ಫೆಯನರಿಯದೆ ಮರೆದಿದ್ದಡೆ ಹಗೆ ಇರಿವುದ ಮಾಣ್ಬನೆ ? ದೂರದಲ್ಲಿ ಹೋದವ ಊರ ಸುದ್ದಿಯನರಿಯ. ಹೇಳದೆ ಬಯಲಾದ ಕಾಣಾ, ಎನ್ನ ಅಜಗಣ್ಣತಂದೆ.
--------------
ಮುಕ್ತಾಯಕ್ಕ
ತನುವಿನೊಳಗೆ ತನುವಾಗಿ, ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ ಕೆಲಬರಿಗೆ ಅರಿಯಬಪ್ಪುದೆ ? ಅಂತರಂಗದೊಳಗೆ ಅದೆ ಎಂದಡೇನು ? ಮನ ಮುಟ್ಟುವನ್ನಕ್ಕರ ಕಾಣಬಾರದು. ಬಹಿರಂಗದಲ್ಲಿ ಅದೆ ಎಂದಡೇನು ? ಪೂಜಿಸುವನ್ನಕ್ಕರ ಕಾಣಬಾರದು. ಸಾಕಾರವಲ್ಲದ ನಿರಾಕಾರ ಲಿಂಗವು ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು. ಎನ್ನ ಮನದೊಳಗೆ ಘನವನನುಗೊಳಿಸಿ ತೋರುವರಿಲ್ಲದ ಕಾರಣ ಎನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ ಬೆರಗಾದೆ ಕಾಣಾ ಪ್ರಭುವೆ ?
--------------
ಮುಕ್ತಾಯಕ್ಕ
ತನ್ನ ತಾನರಿದವಂಗೆ ಅರಿವೆ ಗುರು. ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು. ದೃಷ್ಟನಷ್ಟವೆ ಗುರು ತಾನಾದಲ್ಲಿ, ಮುಟ್ಟಿ ತೋರಿದವರಿಲ್ಲದಡೇನು ? ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ. ಗುರು ತಾನಾದಡೂ ಗುರುವಿಡಿದಿರಬೇಕು ಎನ್ನ ಅಜಗಣ್ಣನಂತೆ.
--------------
ಮುಕ್ತಾಯಕ್ಕ
ತನುವಿಡಿದನಾಗಿ ಅನುವನರಿಯದೆ ಕೆಟ್ಟೆನು. ಮನವಿಡಿದೆನಾಗಿ ಅರಿವು ಉಳಿಯದೆ ಕೆಟ್ಟೆನು. ಭಾವದ ಬಯಕೆ ಹಿಂಗದಾಗಿ ವಿಯೋಗಿಯಾಗಿ ಕೆಟ್ಟೆನು. ಅರಿವ ನುಡಿದು ಮರಹಿಗೊಳಗಾದೆನು. ಎನ್ನ ಕಾಣದೆ ಭಿನ್ನಜ್ಞಾನಿಯಾದೆನು. ಅಜಗಣ್ಣನೆಂಬ ಮಹಿಮನು ಘನವೇದ್ಯನಾಗಿ ಎನ್ನ ಮತಿಗೆ ಮರವೆಯ ಮಾಡಿಹೋದನು.
--------------
ಮುಕ್ತಾಯಕ್ಕ