ಅಥವಾ
(6) (2) (0) (0) (1) (0) (0) (0) (1) (1) (0) (0) (0) (0) ಅಂ (2) ಅಃ (2) (3) (0) (1) (1) (0) (0) (0) (2) (0) (0) (0) (0) (0) (0) (0) (4) (0) (1) (0) (5) (0) (0) (0) (0) (0) (0) (1) (0) (0) (1) (0) (0) (6) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘನಮಹಿಮಶರಣರ ಸಂಗದಿಂದ ಘನಕ್ಕೆ ಘನವೇದ್ಯವಾದ ಬಳಿಕ ಅರಿಯಲಿಲ್ಲ, ಮರೆಯಲಿಲ್ಲ; ಕೂಡಲಿಲ್ಲ, ಅಗಲಲಿಲ್ಲ. ಮನ ಮೇರೆದಪ್ಪಿ ನಿರವಯಲಾದ ಸುಖವ ಶೂನ್ಯ ನಿಶ್ಶೂನ್ಯವೆಂದು ನುಡಿಯಲುಂಟೆ ? ಶಬ್ದಮುಗ್ಭವಾಗಿ ಎನ್ನ ಅಜಗಣ್ಣತಂದೆಯ ಬೆರಸಿದ ಬಳಿಕ ಉರಿಯುಂಡ ಕರ್ಪೂರದಂತಾದೆನಯ್ಯಾ.
--------------
ಮುಕ್ತಾಯಕ್ಕ