ಅಥವಾ
(6) (2) (0) (0) (1) (0) (0) (0) (1) (1) (0) (0) (0) (0) ಅಂ (2) ಅಃ (2) (3) (0) (1) (1) (0) (0) (0) (2) (0) (0) (0) (0) (0) (0) (0) (4) (0) (1) (0) (5) (0) (0) (0) (0) (0) (0) (1) (0) (0) (1) (0) (0) (6) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಚ್ಚಿದಾನಂದಸ್ವರೂಪವಾದ, ವಾಙ್ಮನಕ್ಕಗೋಚರವಾದ, ಜ್ಞಾನಕ್ರೀಯನೊಳಕೊಂಡು ನಿಂದ ಜಂಗಮವೆ ಅಂಗ ಪ್ರಾಣವಾದ, ಶರಣರನೊಳಕೊಂಡು ಚಿದ್ಘನದೊಳಗೆ ಅವಿರಳೈಕ್ಯವಾದ ಎನ್ನ ಅಜಗಣ್ಣತಂದೆಯನರಿದು ಶರಣೆಂಬಾತ ನೀನಾರು ಹೇಳಯ್ಯಾ ? || 31 ||
--------------
ಮುಕ್ತಾಯಕ್ಕ
ಸತ್ಯವುಳ್ಳಲ್ಲಿ ಶಬುದ ಹಿಂಗದು; ಭಾವವುಳ್ಳಲ್ಲಿ ಭಕ್ತಿ ಹಿಂಗದು. ಮೂರುಲೋಕದ ಹಂಗಿನ ಶಬುದವೇನಯ್ಯಾ ? ಮುಕುತಿಯನೇವೆನಯ್ಯಾ ಎನ್ನ ಯುಕುತಿಯ ಮುಕುತಿಯ ಬಕುತಿಯಪದವನು ಕಂಡು ನಾಚಿದನಜಗಣ್ಣತಂದೆ.
--------------
ಮುಕ್ತಾಯಕ್ಕ
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ? ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ, ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.
--------------
ಮುಕ್ತಾಯಕ್ಕ
ಸಿಡಿಲುಹೊಯ್ದ ಬಾವಿಗೆ ಸೋಪಾನವೇಕೊ ? ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ ? ಸೊಡರುಳ್ಳ ಮನೆಗೆ ಮತ್ತೆ ತಮಂಧವೆಂಬುದೇನೊ ? ತನ್ನಲ್ಲಿ ತಾನು ತದ್ಗತವಾದ ಬಳಿಕ ಬೊಮ್ಮ ಪರಬೊಮ್ಮವಾದೆನೆಂಬುದಿಲ್ಲ ನೋಡಾ ಎನ್ನ ಅಜಗಣ್ಣತಂದೆಗೆ.
--------------
ಮುಕ್ತಾಯಕ್ಕ
ಸಿಡಿಲುಹೊಯ್ದ ಬಾವಿಗೆ ಸೋಪಾನವುಂಟೆ ? ಷಡುವರ್ಣರಹಿತಂಗೆ ಬಣ್ಣವುಂಟೆ ? ಕಡಲದಾಂಟಿದವಂಗೆ ಹರುಗೋಲುಂಟೆ ? ಬಿಡದೆ ಕಟ್ಟಿದ ಒರೆಗೆ ಸಂಧಾನವುಂಟೆ ? ಒಡಲಿಲ್ಲದವಂಗೆ ಒಡವೆಯುಂಟೆ ? ನುಡಿಯುಂಟೆ ಎಮ್ಮ ಅಜಗಣ್ಣದೇವಂಗೆ ?
--------------
ಮುಕ್ತಾಯಕ್ಕ
ಸ್ಫಟಿಕಪ್ರಜ್ವಲಜ್ಯೋತಿ ಘಟದೊಳಗೆ ತೋರುತ್ತಿರೆ, ದಿಟಪುಟವನತಿಗಳೆದು ಸಟೆಯ ಬಳಸುವರೆ ? ಅಂತರಂಗದ ಶುದ್ಭಿಯ ಬಹಿರಂಗಕ್ಕೆ ತಂದು ಸಂತೈಸಲರಿಯದೆ ಮರುಳಾದಿರಣ್ಣಾ ? ಜಂತ್ರದ ಕೀಲಕೂಟದ ಸಂಚದ ಭೇದವು ತಪ್ಪಿ, ಮಂತ್ರಭಿನ್ನವಾಗಿ ನುಡಿವರೆ ಅಜಗಣ್ಣಾ ?
--------------
ಮುಕ್ತಾಯಕ್ಕ