ಅಥವಾ
(6) (2) (0) (0) (1) (0) (0) (0) (1) (1) (0) (0) (0) (0) ಅಂ (2) ಅಃ (2) (3) (0) (1) (1) (0) (0) (0) (2) (0) (0) (0) (0) (0) (0) (0) (4) (0) (1) (0) (5) (0) (0) (0) (0) (0) (0) (1) (0) (0) (1) (0) (0) (6) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ, ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ. ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ, ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ, ಎನ್ನ ಅಜಗಣ್ಣನ ಯೋಗಕ್ಕೆ.
--------------
ಮುಕ್ತಾಯಕ್ಕ
ನುಡಿಯೆನೆಂಬಲ್ಲಿಯೆ ನುಡಿ ಅದೆ. ನಡೆಯೆನೆಂಬಲ್ಲಿಯೆ ನಡೆ ಅದೆ. ಭಾವಿಸೆನೆಂಬಲ್ಲಿಯೆ ಭಾವ ಅದೆ. ಅರಿದು ಮರೆದೆನೆಂಬಲ್ಲಿಯೆ ಅರಿವು ಮರವೆ ಅದೆ. ಅಂಗದಲ್ಲಿ ಲಿಂಗ ಲೀಯವಾಯಿತ್ತೆಂದಡೆ ಅಲ್ಲಿಯೆ ಅಂಗ ಅದೆ. ಅನಂಗಸಂಗಿಯಾದೆನೆಂಬಲ್ಲಿಯೆ ವಿಷಯಸೂತಕ ಅದೆ. ನಾನೆ ನಾನಾದೆನೆಂಬಲ್ಲಿಯೆ ನೀನೆಂಬುದು ಅದೆ. ಅರಿದು ಮರೆದ ಪರಿ ಎಂತು ಹೇಳಾ ? ಅರಿವು ನಷ್ಟವಾಗಿ, ಮರಹು ಲಯವಾಗಿಪ್ಪಡೆ ಎನ್ನ ಅಜಗಣ್ಣತಂದೆಯಲ್ಲದೆ ಮತ್ತಾರನೂ ಕಾಣೆ.
--------------
ಮುಕ್ತಾಯಕ್ಕ
ನುಡಿಯ ಹಂಗಿನ್ನೂ ನಿಮಗೆ ಹಿಂಗದು, ನಡೆಯನೆಂತು ಪರರಿಗೆ ಹೇಳುವಿರಿ ? ಒಡಲ ಹಂಗಿನ ಸುಳುಹು ಬಿಡದು; ಎನ್ನೊಡನೆ ಮತ್ತೇತರ ಅನುಭವವಣ್ಣಾ ? ತಾನಾದಲ್ಲದೆ ಇದಿರಿಂಗೆ ಹೇಳಬಹುದೆ ? ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು ಕಾಣಾ ಎನ್ನ ಅಜಗಣ್ಣತಂದೆ.
--------------
ಮುಕ್ತಾಯಕ್ಕ
ನಡೆದು ನಡೆದು ನಡೆಯ ಕಂಡವರು ನುಡಿದು ನುಡಿದು ಹೇಳುತ್ತಿಹರೆ ? ನುಡಿದು ನುಡಿದು ಹೇಳುವನ್ನಕ್ಕರ ನಡೆದುದೆಲ್ಲಾ ಹುಸಿಯೆಂಬೆನು. ಮಾತಿನ ಮಥನದಿಂದಾದ ಅರಿವು ಕರಣ ಮಥನದಿಂದಾದುದಲ್ಲದೆ, ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ ? ಇದಿರ ಗೆಲಬೇಕೆಂದು ನುಡಿದುಕೊಂಡಡೇನು, ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ ? ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು.
--------------
ಮುಕ್ತಾಯಕ್ಕ
ನುಡಿಯಲುಬಾರದು ಕೆಟ್ಟನುಡಿಗಳ. ನಡೆಯಲುಬಾರದು ಕೆಟ್ಟನಡೆಗಳ. ನುಡಿದಡೇನು ನುಡಿಯದಿರ್ದಡೇನು ? ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ.
--------------
ಮುಕ್ತಾಯಕ್ಕ