ಅಥವಾ
(3) (3) (1) (0) (0) (0) (0) (0) (0) (0) (0) (0) (0) (0) ಅಂ (2) ಅಃ (2) (3) (0) (1) (0) (0) (0) (0) (2) (0) (0) (0) (0) (0) (0) (0) (0) (0) (0) (0) (1) (1) (0) (1) (1) (3) (0) (0) (0) (0) (0) (1) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಂಗಳ ತಿರುಳನುರುಹಿ, ಆದಿಯ ಬೀಜವ ವೇದವರಿಯಲ್ಲಿ ಸುಟ್ಟು, ಆ ಭಸ್ಮವ ಹಣೆಯಲ್ಲಿ ಧರಿಸಿ, ಅರಳಿಯ ಮರದೊಳಗಾಡುವ ಗಿಳಿಯ ಎಲೆ ನುಂಗಿತ್ತ ಕಂಡೆ. ಅರಳಿ ಹೂವಾಯಿತ್ತು, ಫಲ ನಷ್ಟವಾಯಿತ್ತು ನೋಡಾ. ಎಲೆ ಉದುರಿತ್ತು, ಆ ಮರದ ಮೊದಲಲ್ಲಿಗೆ ಕಿಚ್ಚನಿಕ್ಕಿ, ಬ್ರಹ್ಮನ ತಲೆಯಲ್ಲಿ ಬೆಣ್ಣೆಯ ಬೆಟ್ಟ ರುದ್ರಲೋಕಕ್ಕೆ ದಾಳಿ ಮಾಡಿ, ಗ್ರಾಮದ ಮಧ್ಯದೊಳಗೊಂದು ಕೊಂಡವ ಸುಟ್ಟು, ಯಜ್ಞ ಪುರುಷನ ಹಿಡಿದು, ಕೈ ಸಂಕಲೆಯನಿಕ್ಕಿ, ಗಂಗೆವಾಳುಕರಿಗೆ ಕೈವಲ್ಯವನಿತ್ತು, ಅಷ್ಟಮೂರ್ತಿಯೆಂಬ ನಾಮವ ನಷ್ಟವ ಮಾಡಿ, ವಿಶ್ವಮೂರ್ತಿಯ ಪಾಶವಂ ಪರಿದು, ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿ, ರುದ್ರಲೋಕಕ್ಕೆ ದಾಳಿ ಮಾಡಿ, ಆ ಮೂರ್ತಿಗಣೇಶ್ವರರಿಗೆ ಐಕ್ಯಪದವನಿತ್ತು, ಬಟ್ಟಬಯಲ ಕಟ್ಟಕಡೆಯೆನಿಪ ಸಿದ್ಭ ನಿಜಗುರು ಭೋಗಸಂಗನಲ್ಲಿ ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ ನಮೋ ನಮೋ ಎಂದು ಬದುಕಿದೆ.
--------------
ಭೋಗಣ್ಣ
ಕುದುರೆಯನೇರಿದ ರಾವುತ, ಕುದುರೆ ಕೆಟ್ಟಿತೆಂದು ಅರಸಹೋಗಿ, ಇರುಬಿಲಿ ಬಿದ್ದಡೆ ಬಳ್ಳು ತರುಬಿ, ಕುದುರೆ ರಾವುತನಿಬ್ಬರ ನುಂಗಿತ್ತು. ಇದೇನು ಸೋಜಿಗ ಹೇಳಾ, ನಿಜಗುರು ಭೋಗೇಶ್ವರಾ.
--------------
ಭೋಗಣ್ಣ
ಕುರುಡನ ಮುಂಡಕ್ಕೆ ಹೆಳವನ ಶಿರಸ್ಸು ಸ್ಥಾಪ್ಯವ ಮಾಡಿದರಯ್ಯಾ. ಅದಕ್ಕೆ ಮೋಟನು ಪರಿಚಾರಕ ನೋಡಾ. ಮೂಗ ಹೇಳುವ ಮಾತನು ಬಧಿರ ಕೇಳಿ, ಅತ್ತೆಯನಳಿಯ ಮದುವೆಯಾಗಿ, ಅವರಿಬ್ಬರ ಸಂಗದಿಂದ ಹುಟ್ಟಿತೊಂದು ಮಗು. ಮೊರೆಗೆಟ್ಟು ತಂದೆ ಮಗಳ ಮದುವೆಯಾಗಿ, ತ್ರಿಪುರದ ಮಧ್ಯದೊಳಗೆ ಕ್ರೀಗಳ ದೇಗುಲ ನಿಂದಿತ್ತು. ದೇವರ ನೋಡಹೋದಡೆ ದೇವರು ದೇಗುಲದ ನುಂಗಿದರು. ಇದ ಕಂಡು ಆನು ಬೆರಗಾದೆನು, ನಿಜಗುರು ಭೋಗೇಶ್ವರನಲ್ಲಿ.
--------------
ಭೋಗಣ್ಣ