ಅಥವಾ
(3) (3) (1) (0) (0) (0) (0) (0) (0) (0) (0) (0) (0) (0) ಅಂ (2) ಅಃ (2) (3) (0) (1) (0) (0) (0) (0) (2) (0) (0) (0) (0) (0) (0) (0) (0) (0) (0) (0) (1) (1) (0) (1) (1) (3) (0) (0) (0) (0) (0) (1) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೂಗಿನಲ್ಲಿ ಕಂಡು, ಮೂರ್ತಿಯ ಕಂಗಳಲ್ಲಿ ಮಾಡಿಸಿ, ಕಿವಿಯಲ್ಲಿ ಶೋಭನ, ತಲೆಯಲ್ಲಿ ಕೈಗೂಡಿ, ಕಣ್ಣ ಕಾಡಿನ ತಲೆ ಹೊಲದಲ್ಲಿ ಸತ್ತದೇವರ ಕಂಡು, ಹುಟ್ಟಿದ ಗಿಡುವಿನ ಪತ್ರೆಯ ಕೈ ಮುಟ್ಟದೆ ಕೊಯ್ದು, ಬತ್ತಿದ ಕೆರೆಯ ಜಲವ ತುಂಬಿಕೊಂಡು, ಬಂದು ಮುಟ್ಟಿ ಪೂಜಿಸಹೋದಡೆ ಸತ್ತ ದೇವರೆದ್ದು ಪೂಜಾರಿಯ ನುಂಗಿದರು ನೋಡಾ. ತಲೆಯಲ್ಲಿ ನಡೆದು, ತಲೆಗೆಟ್ಟು ನಿರಾಳವಾದ ನಿಜಗುರು ಭೋಗೇಶ್ವರಾ, ನಿಮ್ಮ ಶರಣರಿಗಲ್ಲದೆ ಸತ್ತದೇವರನು ಸಾಯದವರು ಪೂಜಿಸಿ ನಿತ್ಯವ ಹಡೆದೆಹೆನೆಂಬ ಮಾತೆಲ್ಲಿಯದೊ ?
--------------
ಭೋಗಣ್ಣ
ಮೂರುಲೋಹದ ಕೋಟೆಗೆ ಏಳುಸುತ್ತಿನ ಅಗಳು ನೋಡಾ. ಆ ಕೋಟೆಯೊಳಗೆ ಒಂಬತ್ತು ದುರ್ಗವಿಹವು. ನಾಲ್ಕೈದು ಹೆಬ್ಬಾಗಿಲಿಹವು. ಕಾಬರಿಗೆ ಕಾಣಬಾರದು. ಕಂಡೆ ಕಾಣೆನೆಂಬ ಉಭಯದ ಸಂದಳಿದುಳಿದವರಿಗಲ್ಲದೆ ಕಾಣಬಾರದು. ಆ ಪಟ್ಟಣದೊಳಗೆ ಅತಿರಥ ಮಹಾರಥರಿಹರು. ಸಾವಂತ ಭಲ್ಲೂಕರಿಹರು. ಷಡಾಯತೆ ಚಕ್ರವರ್ತಿಗಳು ಹರಿದು ರಾಜ್ಯವನಾಳುತ್ತಿಹರು. ಇಪ್ಪತ್ತೆಂಟುಲಕ್ಷ ಭೂತತಂಡವಿಹರು. ಹದಿನೆಂಟುಲಕ್ಷ ರಾಕ್ಷಸಸ್ತೋಮವಿಹರು. ಆ ಪಟ್ಟಣವ ಕಾವಳ ಐವಾಯಲ್ಲಿ ತೆಗೆದು ಅವಳ ಮೂಗು ಮೊಲೆಯ ಕೊಯ್ದು ಮೊರೆಗೆಟ್ಟು ಒಡಹುಟ್ಟಿ ದೇವರ ಕೂಡೆ ಹಾದರವನಾಡಿ, ನಿರಾಳದಲ್ಲಿ ನಿಶ್ಚಟನಾಗಿ ನಿಃಶೂನ್ಯವೆಂಬ ಸಿಂಹಾಸನದ ಮೇಲೆ ಸೋಂಕಿಲ್ಲದೆ ಸೊಬಗಿನಲ್ಲಿ ಮೂರ್ತಿಗೊಂಡಿಪ್ಪ ಆ ಮಹಾಪ್ರಭುವಿನ ಪಾದಕ್ಕೆ ನಾನು ನಮೋ ನಮೋ ಎಂದು ಬದುಕಿದೆನು ನೋಡಾ ನಿಜಗುರು ಭೋಗೇಶ್ವರಾ.
--------------
ಭೋಗಣ್ಣ
ಮನವನ್ಯಾಯಪಾತಕದೊಳಗೆ ಸಿಲುಕಿಹುದು. ಮಾತಿನಲ್ಲಿ ಭಕ್ತಿ ವಿನಯ ಉಪಚಾರವ ನುಡಿದರು. ಅನುವಿಲ್ಲದರಿಯದೆ ಬರಿಯ ಬಾಯಭುಂಜಕರು. ಜಾರೆ ಜಾರನ ಸ್ನೇಹದೊಳಿದ್ದು, ನೀನಲ್ಲದೆ ಅಂತಃಪುರವನರಿಯೆನೆಂದು ಕಣ್ಣನೀರ ತುಂಬುತ್ತ ಬೋಸರಿಗತನದಿಂದ ಒಡಲ ಹೊರೆವಳಂತೆ, ವಾಗದ್ವೈತದಿಂದ ಒಡಲ ಹೊರೆವ ಶಬ್ದಬೋಧಕರಿಗೆ ನಿಜಗುರು ಭೋಗೇಶ್ವರ ಶರಣರ ಪದವೆಂತು ದೊರೆಕೊಂಬುದೋ ?
--------------
ಭೋಗಣ್ಣ