ಎನ್ನಂಗದ ಸತ್ಕಿ ್ರೀ ಸಂಗನಬಸವಣ್ಣನು
ಎನ್ನ ಲಿಂಗದ ಸತ್ಕಿ ್ರೀ ಚನ್ನಬಸವಣ್ಣನು.
ಎನ್ನ ಅರುಹಿನ ಸತ್ಕಿ ್ರೀ ಪ್ರಭುವೆ ನೀವು ನೋಡಾ!
ಎನ್ನ ದಾಸೋಹದ ನೈಷೆ*ಯೇ ಮಡಿವಾಳಯ್ಯನು!
ಇಂತೀ ಅಂಗ ಲಿಂಗ ಜ್ಞಾನ ದಾಸೋಹ
ಇವು ಮುಂತಾದವೆಲ್ಲವೂ ನಿಮ್ಮ ಪುರಾತನರಾದ ಕಾರಣ
ಚಂದೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಕೃಪೆಯಿಂದ
ನಿಮ್ಮ ಶ್ರೀಪಾದವ ಬೆರಸಿದೆನಯ್ಯಾ ಪ್ರಭುವೇ!