ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮ ನಮಸ್ಕಾರವೆ ಗುರುಪೂಜೆ, ಜಂಗಮ ಪೂಜೆಯ ಲಿಂಗಪೂಜೆ, ಜಂಗಮ ತೃಪ್ತಿಯೆ ತನಗೆ ಪ್ರಸನ್ನ. ತನಗೆ ಪ್ರಸನ್ನವಾದುದೆ ನಿತ್ಯಪ್ರಸಾದದಾಗು, ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಕಟ್ಟುಗೊತ್ತು ಕಾಣಾ! ಸಂಗನ ಬಸವಣ್ಣ ಪ್ರಭುವೆ.
--------------
ನುಲಿಯ ಚಂದಯ್ಯ
ಜಲಚರಕೇಕೆ ತೆಪ್ಪದ ಹಂಗು? ವಿಹಂಗಗೇಕೆ ಅಡಿವಜ್ಜೆಯ ಮೆಟ್ಟು? ಮಧುರರಸಕ್ಕೇಕೆ ಮೇಲಪ್ಪ ಸಿಹಿ? ಕಲ್ಪವೃಕ್ಷಕ್ಕೇಕೆ ಕಾಲದ ಹಂಗು? ದಾಸೋಹವನರಿದು ಮಾಡುವಂಗೆ ಇನ್ನೇತರ ಪೂಜೆ ಪುಣ್ಯ? ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆಎಡೆದೆರಪಿಲ್ಲ.
--------------
ನುಲಿಯ ಚಂದಯ್ಯ
ಜಂಗಮಸೇವೆಯ ಚಿತ್ತ ಶುದ್ಧವಾಗಿ ಮಾಡುವಲ್ಲಿ ಗುರುಸೇವೆ ಸಂದಿತ್ತು. ಜುಗಮಸೇವೆಯ ಚಿತ್ತಶುದ್ಧವಾಗಿ ಮಾಡಲಾಗಿ ಲಿಂಗಪೂಜೆ ಸಂದಿತ್ತು. ಜಂಗಮದಾಸೋಹದಿಂದ ಸರ್ವ ಪದವಾಯಿತ್ತು. ಆ ಗುಣವನರಿದು ಹರಿಯಲಾಗಿ ಬಟ್ಟಬಯಲು ಕಾಣಬಂದಿತ್ತು. ಹುಟ್ಟುವ ಹೊಂದುವ ನೆಲೆ ಇತ್ತಲೆ ಉಳಿಯಿತ್ತು. ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿಯಲಾಗಿ.
--------------
ನುಲಿಯ ಚಂದಯ್ಯ