ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊಣಕೆಗೆ ಹೋರಿದಲ್ಲಿ ವನಿತೆಯರ ಮನೆಯಾಸೆ ಉಂಟೆ? ಘನತರವಪ್ಪ ಪರಮ ದಾಸೋಹಿ ತಾನಾಗಿ ಅಲ್ಲಿ ಅನುವರವನರಸಲುಂಟೆ? ಮೂರಕ್ಕೆ ಆಶೆಯ ಹರಿದು ಮಾಡುವ ಮಾಟ ಚಂದೇಶ್ವರಲಿಂಗದ ಕೂಟ.
--------------
ನುಲಿಯ ಚಂದಯ್ಯ
ಹೊಕ್ಕಲ್ಲಿ ಹೊಕ್ಕು, ಒಕ್ಕುದ ಮಿಕ್ಕುದನುಂಡು ಸುಖಿಯಾಗಿ ಸುಳಿವ ಜಂಗಮಕ್ಕೆ ಕುಲವೆಲ್ಲಿಯದೊ ಛಲವೆಲ್ಲಿಯದೊ? ಶೀಲ ವ್ರತ ನೇಮಂಗಳಿಲ್ಲ, ಜಾತ್ಯಾದಿ ಸೂತಕ ಮುನ್ನಿಲ್ಲ. ಆವಾವಾಚಾರ ವಿಚಾರ ಭಕ್ತಂಗಲ್ಲದೆ ಜುಗಮಕ್ಕುಂಟೆ? ಒಡೆಯರಲ್ಲಿ ಆಚಾರವಿಲ್ಲೆಂದು ಪಾದೋದಕ ಪ್ರಸಾದವನೊಲ್ಲದಿಪ್ಪ ಬಹುಭ್ರಮಿತ ಪಾತಕರ ಅಚ್ಚಲಿಂಗೈಕ್ಯರು ಮೆಚ್ಚರು ಕಾಣಾಚಂದೇಶ್ವರಾ.
--------------
ನುಲಿಯ ಚಂದಯ್ಯ
ಹಿಂದಣ ಭವಸಾಗರವ ದಾಂಟಿದೆ ಮುಂದಣ ಮುಕ್ತಿಯಪಥಕ್ಕೆ ಜ್ಞಾನವಂಕುರಿಸಿತ್ತು. ಇನ್ನಂಜೆನಿನ್ನಂಜೆನಯ್ಯಾ, ಎನ್ನ ಮನೋಮಯ ಮೂರ್ತಿಯಪ್ಪ ಚಂದೇಶ್ವರನ ಕಾರುಣ್ಯವಾಯಿತ್ತಾಗಿ ಗೆದ್ದೆನಯ್ಯಾ ಮಹಾಮಾಯೆಯ!
--------------
ನುಲಿಯ ಚಂದಯ್ಯ