ದ ಪದದಿಂದ ಪ್ರಾರಂಭವಾಗುವ ವಚನಗಳು:
ದೊರಕುವನ್ನಕ್ಕರ ನಿಸ್ಪೃಹ.ದೊರಕಿದ ಮತ್ತೆ ಸಂಸಾರಿಯೆ ?ಇಂತೀ ಉಭಯವನರಿಯದೆ ಪೂಜಿಸಿಕೊಂಬಹಿರಿಯರ ನಾನರಿದೆ, ತ್ರಿವಿಧವೆಂಬ ಮಾರಿಯ ಮುಂದೆಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಅರಿದಹನೆಂದು.
ದೃಕ್ಕು ಗುರುವಿನ ಭಾವ, ದೃಶ್ಯ ಶಿಷ್ಯನ ಯುಕ್ತಿ.ಆತ್ಮ ಘಟದಂತೆ, ಕರ್ತೃಭೃತ್ಯಭಾವ.ಇಂತೀ ಉಭಯ ಏಕವಾದಲ್ಲಿ ನಿರ್ವೀಜ ನಿರಿಯಾಣಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವುಉಭಯವಾದ ಭೇದ.