ಭ ಪದದಿಂದ ಪ್ರಾರಂಭವಾಗುವ ವಚನಗಳು:
ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ,ಉರಿ ಸಿರಿ ಉಭಯವೂ ಸರಿ ಎನ್ನದಿರ್ದಡೆ ಭಕ್ತನಿಗದೇ ಹಾನಿ.ಜಂಗಮವೆಂದು ಪ್ರಮಾಣಿಸಿ,ತನ್ನ ಕಂಗಳ ಮುಂದೆ ಕಂಡವರ ಭಂಜಿಸಲಿಕ್ಕೆ,ತನ್ನಂಗವ ಹೊರೆದಡೆ ತೀರ್ಥಪ್ರಸಾದಕ್ಕೆ ಅವನಂದೇ ಹೊರಗು, ಗವರೇಶ್ವರಾ.