ಅಥವಾ
(1) (0) (1) (0) (0) (0) (0) (0) (7) (0) (0) (1) (0) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (1) (3) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೊರನ ಹೊಲಿವ ಗವರ ನಾನೆತ್ತ ಬಲ್ಲೆನು? ಕಟ್ಟಿಕೊಂಡಾತ ಭಕ್ತನಪ್ಪನೆ, ಕೆಡಹಿದಾತ ದ್ರೋಹಿಯಪ್ಪನೆ? ಆ ಲಿಂಗವು ಕಟ್ಟಲಿಕೆ, ತನ್ನ ಕೈಯಲ್ಲಿಪ್ಪುದೆ? ಕೆಡಹಲಿಕೆ, ಬೀಳಲು ಬಲ್ಲುದೆ? ಆ ಲಿಂಗ ಬಿದ್ದ ಬಳಿಕ, ಜಗತ್ತು ಉಳಿಯಬಲ್ಲುದೆ. ಆ ಪ್ರಾಣಲಿಂಗ ಬಿದ್ದಬಳಿಕ, ಆ ಪ್ರಾಣ ಉಳಿಯಬಲ್ಲುದೆ. ಆ ಲಿಂಗ ಬಿದ್ದಿತ್ತೆಂಬ ಸೂತಕದ ಶಬ್ದ ಭ್ರಾಂತುವಿನ ಪುಂಜ ಅಂತು ಅದ ಕೇಳಲಾಗದು. ಯುಗಜುಗಂಗಳು ಗತವಹವಲ್ಲದೆ, ಲಿಂಗಕ್ಕೆ ಗತ ಉಂಟೆ? ಲಿಂಗ ಬಿದ್ದಿತ್ತೆಂದು ನಿಂದಿಸಿ ನುಡಿವ ದ್ರೋಹಿಗಳ ಮಾತ ಕೇಳಲಾಗದು, ಗವರೇಶ್ವರಾ.
--------------
ಮೇದರ ಕೇತಯ್ಯ
ಮೊದಲಿಲ್ಲದೆ ಲಾಭವುಂಟೆ? ನಿರೀಕ್ಷಣೆಯಿಲ್ಲದೆ ಪರೀಕ್ಷೆಯುಂಟೆ? ಗುರುವಿಲ್ಲದೆ ಲಿಂಗವುಂಟೆ ? ಇಂತೀ ವೇಷದ ಭಾಷೆಗೆ ಹೇಸಿದೆನು ಕಾಣಾ, ಗವರೇಶ್ವರಾ.
--------------
ಮೇದರ ಕೇತಯ್ಯ
ಮೊದಲು ಹುಸಿ, ಲಾಭ ದಿಟವೆ? ನಿರೀಕ್ಷಣೆಯಿಲ್ಲದೆ ಪರೀಕ್ಷೆ ಉಂಟೆ? ಈ ಯಾವ ಸರದಂಗವ, ಗವರೇಶ್ವರಲಿಂಗ ನೀನೇ ಬಲ್ಲೆ?
--------------
ಮೇದರ ಕೇತಯ್ಯ