ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಮಧೇನುವಿನ ನಡುವೆ ಒಂದು ಕೋಣ ಕಟ್ಟಿ ಇದ್ದಿತ್ತು. ಕೋಣನ ಗವಲು ತಾಗಿ ಕಾಮಧೇನು ಕೆಡುತ್ತದೆ. ಕೋಣನ ಡೋಣಿಗೆ ತಳ್ಳಿ ಕಾಮಧೇನುವ ಕಾಣದಂತೆ ಮಾಡು. ಅರಿವು ಅಜ್ಞಾನವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕ್ಷಮೆಯಿಲ್ಲದ ಭಕ್ತಿ, ನಯರತಿಯಿಲ್ಲದ ಮಾಟ, ಶ್ರದ್ಥೆಯಿಲ್ಲದ ಕೂಟ, ಶಿವಲಿಂಗಾರ್ಚನೆಯಿಲ್ಲದವನ ಹೃದಯ ನಂದಿಸಿದ ಕಜ್ಜಳದಂತೆ. ಆ ಸಂದೇಹವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕೋಣನ ಕಿವಿಯಲ್ಲಿ ಮೂರು ಹಸು ತೆನೆ ತುಂಬಿ ಕರವೊಂದನೆ ಈಯಿತ್ತು. ಕರು ತಾಯಿ ನೆರೆ ನೋಡಿ ಹಾಲಿಗೆ ಒಡೆಯರಿಲ್ಲಾ ಎಂದು ಪ್ರಾಣವ ಬಿಟ್ಟಿತ್ತು. ಕರುವಿನ ಹರಣವರಿ; ಅರಿತಡೆ ನಿನ್ನ ನೀನೆ ಬ್ಥಿನ್ನಭಾವವಿಲ್ಲ. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಣ್ಣಿನೊಳಗಣ ಮತ್ಸ ್ಯಕ್ಕೆ ಬಲೆಯ ಬೀಸಿ, ಹದ್ದಿನ ಬಾಯ ಹಾವಿಂಗೆ ಹೇಳಿಗೆಯ ಮಾಡಿ, ಕಾಣಬಾರದ ಬಯಲಿಂಗೆ ಮನೆಯ ಕಟ್ಟಿ ಬಾಳುತ್ತಿದ್ದವನ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕೊಲೆ ಹೊಲೆ ಪಾರದ್ವಾರವ ಪಾತಕ ಮಾಡುವರೊಳಗಿಟ್ಟು ಕೊಂಡು ಘನಲಿಂಗದ ಮುದ್ರೆಯನಿಕ್ಕಿ ಹೊಲೆದೊಳೆದೆವೆಂದು ಕಲಹಕ್ಕೆ ಇದಿರಹ ಕುಲುಮೆಗಾರರಿಗೇಕೆ ಮೂರಕ್ಷರದ ಒಲವರ? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಾಳಿಯ ಹೊಲದ ಓಣಿಯ ದಾರಿಯಲ್ಲಿ ಮೂವರು ಕಳ್ಳರು ಕಟ್ಟಿ ಬೆಳ್ಳನೊಬ್ಬನ ಆ ಕಳ್ಳರು ಹಿಡಿಯಲಾಗಿ ಬೆಳ್ಳನ ಬೆಳುವೆ ತಾಗಿ, ಕಳ್ಳರು ಮೈಮರೆದು, ಮೂರು ಹಳ್ಳದಲ್ಲಿ ಬಿದ್ದರು. ಬಿದ್ದು ಸಾವರ ಕೊಲ್ಲಲೊಲ್ಲದೆ ಬೆಳ್ಳನಲ್ಲಿಯೆ ಅಡಗಿದ. ಅಡಗಿದವನಾರೆಂದರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಂಡವರಿಗೆ ದೇವರ ಕಟ್ಟುವ ಭಂಡ ಗುರುವಿನ ಇರವು ಜಗಭಂಡೆ ಎದೆಯ ಕೊಟ್ಟು ಕಂಡವರ ಕೈಯಲ್ಲಿ ಎದೆಯ ಹೆಟ್ಟಿಸಿಕೊಂಬಂತೆ. ಅಗಲಿ ಬೀಳುವ ಕಲ್ಲಿಗೆ ಹರಿದು ತಲೆಯನೊಡ್ಡಿಸುವನಂತೆ. ಆ ಬರಿ ಕಾಯನಲ್ಲಿ ಕಟ್ಟಿದ ಇಷ್ಟ ತೊಟ್ಟಿಯ ಹುದುರಿನಲ್ಲಿ ಕಲ್ಲು ಸಿಕ್ಕಿದಂತಾಯಿತ್ತು. ಅದು ಭ್ರಷ್ಟನ ಕೈಯ ಕಟ್ಟುಗೂಳು, ಉತ್ತಮರೊಲ್ಲರು. ಆ ಚಿತ್ತವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಳ್ಳ ಉಸುರಡಗಿ ಬೆಳ್ಳನ ಮಂದಿರದಲ್ಲಿ ಬಂದಡಗಿದಂತೆ [ದರ್ಶ] ನವ ಹೊತ್ತು ಪಶುಪತಿಯ ಭಕ್ತರುಗಳು ಸರ ಸಂಪದವರಿಯದೆ ತಮ್ಮಯ ತುರೀಯ ಆಪ್ಯಾಯನಕ್ಕಾಗಿ ಅಗಡವ ನುಡಿವ ದರುಶನ ಸಾಗರಗಳ್ಳರಿಗೇಕೆ ಮೂರಕ್ಷರದ ಭೇದ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕೋಲ ಬಳಿಯ ಅಂಧಕನಂತೆ, ವಾಹನದ ಪಂಗುಳನಂತೆ, ಗಹನದಲ್ಲಿ ಸಿಕ್ಕಿದ ಸಿಸುವಿನಂತೆ, ಸ್ಥಾನದಪ್ಪಿ ಹೊಲಬುದಪ್ಪಿದ್ದೇನೆ, ಹೊಲದ ಹೊಲಬ ಹೇಳು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕೋಲು ಕಪ್ಪರವ ಹಿಡಿದು, ಭಾಳಾಂಬಕನ ಲೀಲೆಯ ತೊಟ್ಟು, ಅಶನದಾಪ್ಯಾಯನಕ್ಕೆ ತಿರುಗುವ ಬಾಲಲೀಲೆಯಲ್ಲದೆ ಭಾಳಾಂಬಕನ ನೆಲೆಯಲ್ಲ. ಜಾಳು ಮಾತ ಬಿಟ್ಟು ಮೂರಕ್ಷರದ ನೆಲೆಯನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ತನ್ನಯ ಕಣ್ಣ ಕಂಡ. ಕಾಲಿಲ್ಲದ ಅದವ ಕಠಾರವ ಹಿಡಿದು ಮೂಗಾವುದ ತಿರುಗಿ ಬಂದ. ನಪುಂಸಕ ಬೆಸನಾಗಿ ಬಂದು ಹುಸಿಯ ಕೂಸು ಹುಟ್ಟಿ ಮಸಕಿತು. ಮೊಲೆ ಹೊಲೆಗೇರಿಯಲ್ಲಿ ಹೊಲೆ ಮೂಲೆಯನುಂಡು ಬೆಳೆದವರನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ