ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪುಟ್ಟಿದ ಮರದಲ್ಲಿ ಹಾರಿದ ಪಕ್ಷಿ ತಲೆದೋರುತ್ತದೆ. ಆಗದ ಹಣ್ಣ ಕುಟುಕಿ ರಸ ತಾಗದೆ ನುಂಗುತ್ತದೆ. ಅದು ನಾಗರಿಕ ಪಕ್ಷಿ, ಹಾರಿಹೋಯಿತು. ಅದರಾಗತವನರಿ, ಆತ್ಮನಿರವ ನಿನ್ನ ನೀನೆ ತಿಳಿ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಪೃಥ್ವಿ ಪೃಥ್ವಿಯ ಕೂಡಿದಲ್ಲಿ ಅಪ್ಪು ಅಪ್ಪುವ ಕೂಡಿದಲ್ಲಿ ತೇಜ ತೇಜವ ಕೂಡಿದಲ್ಲಿ ವಾಯು ವಾಯುವ ಕೂಡಿದಲ್ಲಿ ಆಕಾಶ ಆಕಾಶವ ಕೂಡಿ ನಿಂದಲ್ಲಿ ಜೀವನ ಪಾಪ ಪುಣ್ಯವಾವುದು ಹೇಳಿರಣ್ಣಾ. ಜೀವಕೆ ಭವ ಕಾಯಕ್ಕೆ ಮರಣವೆಂಬರು. ಕಾಯ ಜೀವದ ಬೆಸುಗೆ ಅದಾವುದು ಹೇಳಿರಣ್ಣಾ. ಒಡೆಹಂಚ ಹೊಯಿದಡೆ ದನಿ ಭಿನ್ನವಾದಂತೆ ಅದಾರಿಂದ ಉಭಯ ಭಿನ್ನ ಹೇಳಿರಣ್ಣಾ. ಅದು ಕಂಚಿನ ಕಾಯದಿಂದಲೊ, ನಾದದ ಪ್ರಕೃತಿಯಿಂದಲೊ? ವಾಗದ್ವೆತದ ಸಂಬಂಧವಲ್ಲ, ಸ್ವಯದ ನಿಜ. ನಿನ್ನ ನೀನರಿ. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಪೂರ್ವವ ಕಳೆದು ಪುನರ್ಜಾತನಾದೆವೆಂಬಿರಿ. ಪೂರ್ವ ಬಂದ ಬಟ್ಟೆಯ ಮರೆದು ಜಾತತ್ವಕ್ಕೆ ನಾನಾ ಭೌತಿಕವ ತೊಟ್ಟು ಪಿಷ್ಪದವರ ಅಭೀಷ್ಟನಾಗಿ ಮತ್ತೆ ಪುನರ್ಜಾತನಾದ ಪರಿಯಿನ್ನೆಂತೂ? ಜಂಗಮವಾದಲ್ಲಿ ಜನನಿ ಜನಕ ಸಹೋದರ ಮಿಕ್ಕಾದ ಭವಪಾಶಂಗಳ ಸ್ವಪ್ನದ ಸುಖದಂತೆ ಎಂದರಿದು, ತನ್ನಿರವ ತಾನರಿತು, ಮುಟ್ಟಿದ ಭಕ್ತರ ಮುಕ್ತಿಯ ಮಾಡು; ತ್ರಿಯಕ್ಷರದ ಗೊತ್ತು ಮುಟ್ಟರು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಪಥವನರಿಯದೆ ಇಷ್ಟವ ಕಟ್ಟುವ ಗುರು ಬೆಳಕಿಗೆ ಸಿಕ್ಕಿದ ಪತಂಗನಂತಾದ. ಗುರುವಿನ ಕೈಯಲ್ಲಿ ಕಟ್ಟಿದ ಶಿಷ್ಯ ಕೀಟಕನ ಕೈಯಲ್ಲಿ ಸಿಕ್ಕಿದ ಮಕ್ಷಿಕನಂತಾದ. ಚೇಟಿದಾಸನ ಕೂಟದಂತಾಯಿತ್ತು; ಅದೇತರ ಭೇದ, ನಿನ್ನನೀನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಪಂಚವಳಯ ವಿಸ್ತೀರ್ಣದಲ್ಲಿ ಕಟ್ಟಿದವು ಮೂರು ಪಟ್ಟಣ. ಕೆಲದಲ್ಲಿ ಹೊಲಗೇರಿ, ಬಲದಲ್ಲಿ ಮಾದಿಗರ ಮನೆ. ನಡುವೆ ಹೆಬ್ಬಾರುವರ ಮಹಾಜನಂಗಳ ಗುಡಿವಾಡ. ಹೊಲೆಯರ ಗೋವಧೆಯ ಮಾದಿಗರ ಮನೆಯ ನಾತ. ಹಾರುವರೂಟದ ಸುಖ ಲೇಸಾಯಿತ್ತು. ಜಗದ ಕೀಳು ಮೇಲಿನ ಕೂಟ ಅದೇತರಿಂದಾಯಿತ್ತು ಎಂಬುದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ