ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧಾತ ಮಾಡುವ ತೆರಪನರಿಯದೆ ಕಾಡುವ ಕಮ್ಮಟದೇಹಿಗಳ ನೋಡಾ! ಆತನೇ ಆಗುಚೇಗೆಯನರಿಯದೆ ಮರಿಪಕ್ಷಿ ಕುಟುಕಿಂಗೆ ಬಾಯ ಬಿಡುವಂತೆ ಕೈ ಬಾಯಾನುವ ದರುಶನ ದಾರಿಗಳ್ಳರಿಗೇಕೆ ಮೂರಕ್ಷರ? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಧರೆ ಸಿರಿ ಉರಿ ಮೂರು ಕೂಡಿ ಉರಿವುತ್ತದೆ. ಆ ಉರಿಯ ನಡುವೆ ಮಲಯಜ ಹುಟ್ಟಿತ್ತು. ಮಲಯಜದ ಗಂಧ ತಾಗಿ ಮೂವರ ಬಲೋತ್ರ ನಂದಿತ್ತು. ಅವು ನಂದುವಾಗ ನಾ ನಿಂದಿರಲಾಗಿ ಆ ರಾಹು ತಾಗಿ ಎನ್ನಯ ಕಾಯದ ರೂಪು ಬಯಲಾಗದಿದೆ ಎಂದೆನುತ್ತ ಚಿಹ್ನದೋರುತ್ತದೆ. ತೋರಿ ಅಡಗಬೇಡ, ಅಡಗಿದಡೆ ನಾ ಬಿಡೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಧರೆ ಸಲಿಲ ಅನಲ ರವಿ ಶಶಿ ಜಗಸೂತ್ರವೆಲ್ಲಕ್ಕೂ ಸರಿ. ಅರಿದವನ ಚಿತ್ತದ ದಯ ಸರ್ವಪ್ರಾಣಿಗಳಿಗೂ ಸರಿ. ದಯ ವಿಶ್ರಾಂತಿ ಇದು ಮಿಥ್ಯವಲ್ಲದೆ ತಥ್ಯವಲ್ಲದ ದಂತಶೂಕ ಶಿಲೆಯಲ್ಲಿ ನಿಂದಂತಾಗಬೇಡ, ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ