ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏರಿಯಕೆಳಗೆ ಬಿದ್ದ ನೀರು ಪೂರ್ವದ ತಟಾಕಕ್ಕೆ ಏರಬಲ್ಲುದೆ ? ವ್ರತಾಚಾರವ ಮೀರಿ ಕೆಟ್ಟ ಅನಾಚಾರಿ ಸದ್ಭಕ್ತರ ಕೂಡಬಲ್ಲನೆ ? ದೇವಾಲಯದಲ್ಲಿ ಸತ್ತಡೆ ಸಂಪ್ರೋಕ್ಷಣವಲ್ಲದೆ ದೇವರು ಸತ್ತಲ್ಲಿ ಉಂಟೆ ಸಂಪ್ರೋಕ್ಷಣ ? ಅಂಗದಲ್ಲಿ ಮರವೆಗೆ ಹಿಂಗುವ ಠಾವಲ್ಲದೆ, ಮನವರಿದು ತಾಕು ಸೋಂಕಿಗೆ ಹೆದರದೆ ಕೂಡಿದ ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ? ಇಂತಿವ ಕಂಡಲ್ಲಿ ಗುರುವಾದಡೂ ಬಿಡಬೇಕು, ಲಿಂಗವಾದಡೂ ಬಿಡಬೇಕು, ಜಂಗಮವಾದಡೂ ಬಿಡಬೇಕು ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಬಿಡಬೇಕು.
--------------
ಅಕ್ಕಮ್ಮ
ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ ತಮ್ಮ ತಮ್ಮ ಭಾವದಶೀಲ. ಗಂಗೆವಾಳುಕ ಸಮಾರುದ್ರರೆಲ್ಲಕ್ಕೂ ತಮ್ಮ ತಮ್ಮ ಮನಕ್ಕೆ ಸಂದ ಸಂದ ನೇಮ. ಮರ್ತ್ಯಕ್ಕೆ ಬಂದ ಪ್ರಮಥರೆಲ್ಲರೂ ತಾವು ಬಂದುದನರಿದು ಮುಂದಿನ ಪಯಣಕ್ಕೆ ಎಂದೆಂಬುದ ಕಂಡು, ಬಸವಣ್ಣನ ಮಣಿಹ ಎಂದಿಂಗೆ ಸಲೆ ಸಂದು ನಿಂದಿಹ ವೇಳೆಯನರಿವನ್ನಕ್ಕ ತಾವು ಕೊಂಡ ವ್ರತದಲ್ಲಿ ಭಯ ಭಂಗವಿಲ್ಲದೆ ನಿಂದಿರಬೇಕು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗಹನ್ನಕ್ಕ.
--------------
ಅಕ್ಕಮ್ಮ