ಅಥವಾ

ಒಟ್ಟು 83 ಕಡೆಗಳಲ್ಲಿ , 26 ವಚನಕಾರರು , 72 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಲುಗೊಂಡು, ಕಾಯವ ಬಳಿಗೊಂಡು, ಸಂಸಾರದ ಕುರುಹಿನ ಹೆಸರಲ್ಲಿ ಕರೆದಡೆ, ಓ ಎನುತಿಪ್ಪವರು ನರರೆ ? ಬರಿದೆ ಸಂಸಾರವ ಬಳಸುವಂತಿಪ್ಪರು, ಸಕಳೇಶ್ವರದೇವಾ, ನಿಮ್ಮ ಶರಣರು.
--------------
ಸಕಳೇಶ ಮಾದರಸ
ಸತ್ಯಸದಾಚಾರ ಭಕ್ತಿಯನರಿಯದೆ ಬರಿದೆ ಭಕ್ತರೆಂಬುದ ನೋಡಾ. ಮತ್ತೆ ಮರಳಿ ಮನೆದೈವ ಕುಲದೈವಕೆರಗುತ್ತ ಭಕ್ತರೆಂದು ನುಡಿದಡೆ ನರಕದಲ್ಲಿ ಮೆಟ್ಟುವನೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುವಿನಿಂದುದಯವಾಗಿ ಲಿಂಗನಡೆಸಂಪನ್ನರೆನಿಸಿಕೊಂಡ ಹಿರಿಯರು ಗುರುದಯದೊಳೈಕ್ಯತೆಯನೈದಬೇಕಲ್ಲದೆ, ಗುರುದಯವಿಲ್ಲದೆ ಬರಿದೆ ಬಳಲುವ ಭಾವಗೇಡಿ ಭ್ರಷ್ಟಭವಿಗಳ ಸಂಗ ಹೀನ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುರರ ಬೇಡಿದಡಿಲ್ಲ, ನರರ ಬೇಡಿದಡಿಲ್ಲ ಬರೆದ ಧೃತಿಗೆಡಬೇಡ ಮನವೆ ! ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೆಡಬೇಡ ಮನವೆ ! ಕೂಡಲಸಂಗಮದೇವ[ನ]ಲ್ಲದೆ, ಆರ ಬೇಡಿದಡಿಲ್ಲ ಮನವೆ ! 278
--------------
ಬಸವಣ್ಣ
ಮಡಕೆಯ ತುಂಬಿ ಪಾವಡೆಯ ಕಟ್ಟುವರಲ್ಲದೆ ಸರ್ವಾಂಗವನು ಸದಾಚಾರವೆಂಬ ಪಾವಡದಲ್ಲಿ ಕಟ್ಟುವರನಾರನೂ ಕಾಣೆನಯ್ಯ. ಬಾಯ ತುಂಬಿ ಪಾವಡೆಯ ಬಿಗಿಬಿಗಿದು ಕಟ್ಟುವರಲ್ಲದೆ ಮನದ ಬಾಯ ಅರುಹೆಂಬ ಪಾವಡೆಯಲ್ಲಿ ಕಟ್ಟುವರನಾರನು ಕಾಣೆನಯ್ಯ. ಮುಖ ತುಂಬಿ ಪಾವಡೆಯ ಕಟ್ಟುವರಲ್ಲದೆ ಮೂಗು ಹೋದವರಂತೆ ಭಾವ ತುಂಬಿ ನಿರ್ವಾಣವೆಂಬ ಪಾವಡೆಯ ಕಟ್ಟುವರನಾರನೂ ಕಾಣೆನಯ್ಯ. ಅಂಗ ಆಚಾರದಲ್ಲಿ ಸಾವಧಾನವಾಗದೆ, ಮನ ಅರುಹಿನಲ್ಲಿ ಸಾವಧಾನವಾಗದೆ, ಭಾವ ನಿರ್ವಾಣದಲ್ಲಿ ಸಾವಧಾನವಾಗದೆ, ಬರಿದೆ ಶೀಲವಂತರು ಶೀಲವಂತರೆಂದರೇನಯ್ಯ. ತನು ಮನ ಧನ ಅವಗುಣವೆಂಬ ಭವಿಯ ಕಳೆಯದೆ ಹೊರಗೆ ವ್ರತಿಗಳೆಂದರೆ ಆರು ಮಚ್ಚುವರಯ್ಯ? ಹುಚ್ಚರಿರಾ ಸುಮ್ಮನಿರಿ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ಇವರ ಮೆಚ್ಚನು ಕಾಣಿರೋ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
'ಷಟುಸ್ಥಲದ ಬ್ರಹ್ಮಿಗಳೆ'ಂದು ಹೇಳಿಕೊಂಬಿರಿ, ನೀವು ಕೇಳಿರಯ್ಯಾ : ನಿಮ್ಮ ಷಟುಸ್ಥಲದ ಬ್ರಹ್ಮಿಗಳ ಲಕ್ಷಣ ದಾವುದೆಂದಡೆ, ಅಂಗಲಿಂಗ ಸಂಬಂಧವಾದುದೇ ಷಟುಸ್ಥಲ. ಅಂಗ ಲಿಂಗವಾದ ಪರಿ ಎಂತೆಂದಡೆ, ಲಿಂಗ ಪೋದುದೇ ಷಟುಸ್ಥಲ: ಗ್ರಂಥ || ಅನಾದಿ ಸಂಸಿದ್ಧಸ್ಯ ಆತ್ಮಪರೀಕ್ಷಣಂ ಜಗತಾರಾ[ಧ್ಯಸ್ಯ] | ಸತ್ಯಂ ಜನನಮರಣವಿರಹಿತಂ [ಇತಿ]ಷಟ್‍ಸ್ಥಲಂ || ಇಂತೀ ಸಾಕ್ಷಿ ಉಂಟಾಗಿ, ಪರಾನ್ನ ಅಪೇಕ್ಷಿತನಾಗದೆ, ಪರಸ್ತ್ರೀಯಂ ನೋಡದೆ, ಪರರೊಡವೆಯ ಹಂಗು ಹಚ್ಚದೆ, ಪರಾತ್ಪರವಾಗಿಪ್ಪುದೆ ಜಂಗಮ ಲಿಂಗ. ಪರಮ ಹರುಷದಿಂದ ಪಾತಕವನೀಡಾಡಿ, ಪರ[ಮ] ಪುರುಷಾರ್ಥವನೇ ಗ್ರಹಿಸಿ, ಪಾವನಚರಿತನಾಗಿ, ಭಕ್ತನ ಮನೆಗೆ ನಡೆದು ಬಂದು ಬೀಯೆಂಬೋ ಪಾಪವು ಕ್ಷಯವಾಗಲೆಂದು 'ಭಿಕ್ಷಾ' ಎಂದು ನಿಂದಡೆ, ಅರಿದ ಭಕ್ತ ನೀಡಿದರೂ ಸಂತೋಷ ಅರಿಯದಿದ್ದ ಭಕ್ತ ನೀಡದಿದ್ದರೂ ಸಂತುಷ್ಟನಾಗಿ 'ಹಳ್ಳಿಗೇಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ' ಸಂಚರಿಸುತಿರ್ಪುದೇ ಷಟುಸ್ಥಲದ ಬ್ರಹ್ಮಿ ಎಂದು ನಮೋ ಎಂಬುವೆನಯ್ಯಾ ಬರಿದೆ 'ನಾ ಷಟುಸ್ಥಲದ ಬ್ರಹ್ಮಿ' 'ನೀ ಷಟುಸ್ಥಲದ ಬ್ರಹ್ಮಿ' ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಮಾಯಾಮಲಿನ ಮನದಿಂದಗಲದೆ, ಕಾಯದ ದಂದುಗ ಕಳೆಯಿಂದಗಲದೆ, ಅರಿವು ಬರಿದೆ ಬಪ್ಪುದೆ? ನಿಜವು ಬರಿದೆ ಸಾಧ್ಯವಪ್ಪುದೆ ? ಮರುಳೆ, ಗುಹೇಶ್ವರಲಿಂಗವನರಿಯ ಬಲ್ಲಡೆ, ನಿನ್ನ ನೀ ತಿಳಿದು ನೋಡಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ, ಬಹಿರಂಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲದ ಸುದ್ದಿಯ ಹೇಳಿ, ದಶಾವತಾರದಾಟವ ತೊಟ್ಟಂತೆ ಗುರುಮುಖವಿಲ್ಲದೆ ವಿಭೂತಿ ರುದ್ರಾಕ್ಷಿ ಶಿವಲಿಂಗ ಲಾಂಛನವ ಧರಿಸಿ, ಒಳಗೆ ಶುದ್ಧವಿಲ್ಲದೆ ಬರಿದೆ ಶಿವಪ್ರಸಾದದ ಸುದ್ಧಿಯ ಹೇಳುವವರಲ್ಲಿ ಅಷ್ಟಾವರಣ ಪರಿಚಾರವಿಲ್ಲ ನೋಡ! ತನ್ನಂತರಂಗ ಬಹಿರಂಗದಲ್ಲಿ ಚಿಜ್ಯೋತಿರ್ಲಿಂಗವೆಂಬ ರಮಣನ ಸದ್ಗುರುಮುಖದಿಂ ಕೂಡಿ ಎರಡಳಿದು, ಆ ಲಿಂಗದ ಚಿಚ್ಚೆತನ್ಯವೆ ನಿರಂಜನ ಜಂಗಮವೆಂದು ಆ ಜಂಗಮವೆ ತಾನೆಂದರಿದು, ತನ್ನ ಚಿತ್ಕಳೆಯ ಚಿದ್ವಿಭೂತಿ-ರುದ್ರಾಕ್ಷಿ, ಲಾಂಛನ, ತನ್ನ ಪರಮಾನುಭಾವನೆ ಮಹಾಮಂತ್ರ, ತನ್ನ ನಿಜಾನಂದವೆ ಪಾದೋದಕ-ಪ್ರಸಾದ, ತನ್ನ ಸತ್ಯ ಸದಾಚಾರ ನಡೆನುಡಿಯೆ ಪರಮ ಕೈಲಾಸ! ಇಂತು ಪ್ರಮಥರು ಆಚರಿಸಿದ ಭೇದವ ತಿಳಿಯದೆ ಬರಿದೆ ಅಹಂಕರಿಸಿ ಗುರುಸ್ಥಲ, ಚರಸ್ಥಲ, ಪರಸ್ಥಲ, ಶಿವಭಕ್ತಿ, ಶಿವಭಕ್ತ, ಶಿವಶರಣ, ಶಿವಪ್ರಸಾದಿಗಳೆಂದು ವಾಗದ್ವೆ ೈತವ ನುಡಿವವರಲ್ಲಿ ಪರತತ್ತ್ವಸ್ವರೂಪ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ!
--------------
ಘಟ್ಟಿವಾಳಯ್ಯ
ಶುದ್ಧ , ಸಿದ್ಧ , ಪ್ರಸಿದ್ಧ , ಪ್ರಸಾದವೆಂದು ಹೆಸರಿಟ್ಟುಕೊಂಡು ಚೆನ್ನಾಗಿ ನುಡಿವಿರಿ. ಶುದ್ಧವಾದ ಮುಖ, ಸಿದ್ಧವಾದ ಮುಖ, ಪ್ರಸಿದ್ಧವಾದ ಮುಖ, ಅರಿದರೆ ನೀವು ಹೇಳಿರೊ. ಅರಿದು ಅರಿಯದೆ, ಅರಿಮರುಳುಗಳಿರಾ ನೀವು ಕೇಳಿರೊ. ಕಾಯಕರಣಾದಿಗಳ ಗುಣವಳಿದುದೆ ಶುದ್ಧ . ಜೀವನ ದೃಶ್ಯ ಕೆಟ್ಟು, ಜಗದ ವ್ಯಾಕುಳವಳಿದು, ನಿರಾಕುಳದಲ್ಲಿ ನಿಂದುದೆ ಸಿದ್ಧ. ಪ್ರಾಣದ ಭಯ ಮರಣದ ಭಯ ಮರಣಾದಿಗಳ ಹಿಂಗಿ, ಭಾವಳಿದು ಭವಕ್ಕೆ ಸವೆದುದೆ ಪ್ರಸಿದ್ಧ . ಈ ತೆರನನರಿಯದೆ ಎತ್ತರ ತೆತ್ತರನಾಗಿ ನುಡಿವಿರಿ. ಬಲ್ಲವರೆನಿಸಿಕೊಂಡಿಹೆವೆಂದು ನಿಮ್ಮ ಬಲ್ಲತನ ಹಾಳಾಯಿತ್ತು . ನೀವು ಬರುಸೂರೆಯ ಹೋಗುವುದನರಿಯದೆ, ಬರಿದೆ ಏಕೆ ಅರಚಾಗಿ ಸತ್ತಿರಿ, ನೆರೆ ಮೂರುಲೊಕವೆಲ್ಲ ? ಇದನರಿದಾದರೂ ಆರಿಗೂ ಕೊಡಬೇಡ, ಕೊಳಬೇಡ. ಮನಮುಟ್ಟಿ ಎರಗಿ ಬದುಕಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
856 ಶ್ರೀ ಗುರುಲಿಂಗಜಂಗಮದ ಚರಣೋದಕವ ಭೇದಿಸಲರಿಯದೆ, ಬರಿದೆ ಶಿವಭಕ್ತರೆಂದು ಹೊಗಳಿ, ಮಡು ಹೊಂಡ ಹಳ್ಳ ಹೊಳೆ ಕೆರೆ ಬಾವಿ ಮೊದಲಾದ ಜಡ ಜಲವ ಕುಡಿದು, ಶಿವಭಕ್ತಿಯ ಬೊಗಳುವ ಮಲದೇಹಿಗಳ ಮುಖವ ನೋಡಲಾಗದು. ಪಾದೋದಕದ ನೆಲೆಕಲೆಯನರಿಯದ ಗೂಗೆಗಳ ಮುಖವ ನೋಡಲಾಗದೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭು ನಿಷ್ಕಳಲಿಂಗವು. ಬರಿದೆ ಶಿವಭಕ್ತರೆಂದು ಹೊಗಳಿ, ಮಡು ಹೊಂಡ ಹಳ್ಳ ಹೊಳೆ ಕೆರೆ ಬಾವಿ ಮೊದಲಾದ ಜಡ ಜಲವ ಕುಡಿದು, ಶಿವಭಕ್ತಿಯ ಬೊಗಳುವ ಮಲದೇಹಿಗಳ ಮುಖವ ನೋಡಲಾಗದು. ಪಾದೋದಕದ ನೆಲೆಕಲೆಯನರಿಯದ ಗೂಗೆಗಳ ಮುಖವ ನೋಡಲಾಗದೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭು ನಿಷ್ಕಳಲಿಂಗವು.
--------------
ಚೆನ್ನಯ್ಯ
ವಾಯುಮುಖದಲುಲಿವಾವಯದ ವೃಕ್ಷದೊಳು ಆಯತವಾಗಿಹ ಹಣ್ಣಿನ ರುಚಿಯನು ಸವಿಯನರಿಯದೆ ಯತಿ ಸಿದ್ಧ ಸಾಧ್ಯರು ಬಾಯಸವಿಯನುಂಬರು. ಪದ :ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ ನೆರದು ರುದ್ರಾಗ್ನಿಯೆಂದೆಂಬುವ ಮೂಲದ ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. | 1 | ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ ಸಾಯಸಬಡುತಿದೆ ಸಂಸಾರಬಂಧನದೊಳು. | 2 | ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ ಛಾಯದ ಮನೆಯೊಳು ನಿಂದು ಚತುಃಕರಣ ಮಾಯಮದದಹಂಕಾರಗಿರಿಯನೇರಿ ಆಯಸಗೊಳುತಿದೆ ಬರಿದೆ ಅಜ್ಞಾನದೊಳು. | 3 | ವಾಯುಮುಖದ ತನು ವಾಯುಮುಖದ ಮನವು ವಾಯುಮುಖದ ಕರಣ ವಾಯುಮುಖದ ಚಿತ್ತ ವಾಯುಮುಖದ ಬುದ್ಧಿ ವಾಯುಮುಖದ ಆತ್ಮ ವಾಯುವಿಂಗೆ ಗುರಿಯಾಯಿತ್ತು . | 4 | ಗುಡಿಯಮುಖದಿ ದೇವರ ಕಾಣ್ಬಂದದಿಂ ಒಡಲ ವಾಯುಮುಖದಿ ಲಿಂಗವ ಕಂಡು ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. | 5 |
--------------
ಹೇಮಗಲ್ಲ ಹಂಪ
ನಂಬರು ನಚ್ಚರು ಬರಿದೆ ಕರೆವರು, ನಂಬಲರಿಯರೀ ಲೋಕದ ಮನುಜರು, ನಂಬಿ ಕರೆದಡೋ ಎನ್ನನೆ ಶಿವನು ನಂಬದೆ ನಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ 116
--------------
ಬಸವಣ್ಣ
ನಿರಾಳ ನಿಶ್ಶೂನ್ಯ ಪರಮಜಂಗಮದರಿವು ತಾನಾಗದೆ, ಬರಿದೆ ಅಹಂಕಾರದಿಂದ ಮೂರು ಮಲಂಗಳ ಸ್ವೀಕರಿಸುತ್ತ ನಾವೆ ಜಂಗಮವೆಂದು ನುಡಿವ ಕರ್ಮ ಪಾಷಂಡಿಗಳು_ ಕಾಶಿ ಕೇದಾರ ಶ್ರೀಶೈಲ ವಿರೂಪಾಕ್ಷನೆಂದು, ಮತ್ತೆ ಈರಣ್ಣ ಮಲ್ಲಣ್ಣ ಬಸವಣ್ಣ ಇವರೇ ದೇವರೆಂದು ಆ ಕಲ್ಲುಗಳ ತಮ್ಮ ಮನೆಯೊಳಗೊಂದು ಮೂಲೆ ಸಂದಿ ಗೊಂದಿ ಗೊತ್ತಿನೊಳಗಿಟ್ಟು ಅದರ ಬಳಿದ [ತೊಳೆದ] ನೀರು, ಅವರೆಂಜಲ ತಿಂಬುವ ಪಶುಗಳಿಗೆ ದೇವಭಕ್ತರೆನಬಹುದೇನಯ್ಯಾ ? ಎನಲಾಗದು. ಇಂತಪ್ಪ ಅನಾಚಾರಿ ಅಪಸ್ಮಾರಿ ಶ್ವಪಚರ ಜಂಗಮವೆಂದು ಪೂಜಿಸಲಾಗದು ಕಾಣಿರೊ. ವೀರಶೈವ ಆಚಾರವುಳ್ಳ ಭಕ್ತನು ಇದ ಮೀರಿ ಪೂಜಿಸಿದಡೆ ಅವರಿಬ್ಬರಿಗೆಯೂ ಭವಕರ್ಮಂಗಳು ತಪ್ಪವು ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಯ್ಯಾ, ಯತಿಯತ್ವವ ಪಡೆದೆನೆಂಬೋ ಮನುಜನೇ, ನೀ ಕೇಳು : ನಿನ್ನ 1ಯತಿಯತ್ವ1ದ ಬಗೆ ಎಂತೆಲಾ ? ಬರಿದೆ ದ್ರವ್ಯಕ್ಕೆ ಆಶೆಮಾಡಿ, ಪರರ ಕಾರ್ಪಣ್ಯದಿಂದ ಕಾಡಿ ಬೇಡಿ, ದ್ರವ್ಯವ ಗಳಿಸಿಕೊಂಡು, ಜನರ ಕಟ್ಟಿಕೊಂಡು ಬಡಿವಾರದಿಂದ ತಿರುಗಿದ ಬಳಿಕ, ನಿನಗೆ ಯತಿಯತ್ವವು ಎಲ್ಲೈತೆಲಾ ? ಅದು ಎಂತೆಂದರೆ, ಯತಿಯತ್ವವ ಪೇಳುವೆನು ಕೇಳೆಲಾ : ಯತಿ ನೀನಾದ ಬಳಿಕ ತನುವಿನ ಹಂಗು ಹರಿಯಬೇಕು ; ಮನವ ಘನಲಿಂಗಕ್ಕೆ ಕಟ್ಟಿಹಾಕಬೇಕು ; ಧನವ ಸ್ವಪ್ನದಲ್ಲಿ ಮುಟ್ಟಲಾಗದು ; ಅನ್ನದ ಆಸೆಯ ಬಿಡಬೇಕು ; ಚಿನ್ಮಯನಾಗಿ ನಡೆಯಬೇಕು ; ಚಿಂತೆಯ ಮರೆತು ವೈರಾಗ್ಯದಿಂದಿರಬೇಕು ; ಕಾಮದ ಹಂಗ ಕಳೆಯಬೇಕು ; ಕರ್ಮೇಂದ್ರಿಯಂಗಳ ಸುಡಬೇಕು ; ಲಿಂಗದಲ್ಲಿ ಕರುಣ ಇರಬೇಕು. ಸ್ಫಟಿಕದಂತೆ ನಿರ್ಮಳ ಕಾಯನಾಗಿ, ನಿಶ್ಚಿಂತನಾಗಿ, ಮೋಕ್ಷವ ಕಂಡಡೆ ಯತಿವರನೆಂದು ನಮೋ ಎಂಬುವೆನಯ್ಯಾ ! ಬರಿದೆ ಯತಿ ಎನಿಸಿಕೊಂಡು ಕೋಪಾಟೋಪದೊಳು ಬಿದ್ದು ಹೊರಳಾಡುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಜಗವಾಗಬಲ್ಲ ನೋಡಿರೊ ನಮ್ಮ ಶಿವನು. ಜಗವಾಗಲರಿಯದೆ ಇರಬಲ್ಲ ನೋಡಿರೊ ನಮ್ಮ ಶಿವನು. ಅನಂತಕೋಟಿ ಬ್ರಹ್ಮಾಂಡಗಳ ನಿಮಿಷಮಾತ್ರದಲ್ಲಿ ಪುಟ್ಟಿಸಬಲ್ಲ ನೋಡಿರೊ ನಮ್ಮ ಶಿವನು. ಆ ಬ್ರಹ್ಮಾಂಡಗಳ ನಿಮಿಷ ಮಾತ್ರದಲ್ಲಿ ಕೆಡಿಸಬಲ್ಲ ನೋಡಿರೊ ನಮ್ಮ ಶಿವನು. ಇಂತಪ್ಪ ಶ್ರೀ ಮಹಾದೇವನ ಘನವನರಿಯದೆ ಬರಿದೆ ದೇವರು ಉಂಟೆಂದು ಬೊಗಳುವ ಭವಭಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->