ಅಥವಾ

ಒಟ್ಟು 34 ಕಡೆಗಳಲ್ಲಿ , 21 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ, ನಡೆನುಡಿಯೊಳಗೆ ರಂಜಕದ ತೊಡಿಗೆಯನೆ ತೊಡಿಸಿ, ಮುಂದುಗಾಣಿಸದೆ, ಹಿಂದನರಸದೆ, ಲಿಂಗವ ಮರಹಿಸಿ, ಜಂಗಮವ ತೊರೆಯಿಸಿ, ಸಂದೇಹದಲ್ಲಿ ಸತ್ತು ಹುಟ್ಟುವ ಈ ಭವಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ ? ಅವರ ನೆಲೆ ತಾನೆಂತೆಂದಡೆ ಹಿಂದನರಿದು, ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು, ಜಗದ ಜಂಗುಳಿಗಳ ಹಿಂಗಿ, ಕಂಗಳ ಕರುಳನೆ ಕೊಯ್ದು, ಮನದ ತಿರುಳನೆ ಹರಿದು, ಅಂಗಲಿಂಗವೆಂಬುಭಯವಳಿದು, ಸರ್ವಾಂಗಲಿಂಗವಾಗಿ, ಮಂಗಳದ ಮಹಾಬೆಳಗಿನಲ್ಲಿ ಓಲಾಡುವ ಶರಣರ ನೆಲೆಯ ಜಗದ ಜಂಗುಳಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮುಟ್ಟಿ ಪೂಜಿಸುವೆನಯ್ಯಾ, ಮುಟ್ಟಿದ ಬಳಿಕ ಇದು ನಷ್ಟವಾಗಬಹುದೆ? ಈ ಹುಟ್ಟುವ ಹೊಂದುವವರ ಮುಟ್ಟಲೀಯದಾರಯ್ಯ. ಮುಟ್ಟಿದ ಬಳಿಕ ಹುಟ್ಟುವ ಹೊಂದುವ ಕಷ್ಟವ ಮಾಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬೀಜ ಹುಟ್ಟುವ ತತ್ಕಾಲವೆಂತೆಂದಡೆ: ಹೊಯ್ದಿದ್ದ ಹೊಯಿಗಿಲದಲ್ಲಿಯೆ ಬೇರು ಬಿಟ್ಟು, ಸಸಿ ಬೆಳೆದು ಎಲೆ ನೀಡಿ ಫಲ ಬೆಳೆದುದುಂಟೆ ? ಸಕಲ ಸ್ಥಲ ಕುಳವನರಿತ ಬ್ರಹ್ಮಿ ತಾನೆಂದಡೆ ಅರ್ಚನೆ ಅರತು, ಪೂಜೆ ನಿಂದು, ಸತ್ಯ ಕೆಟ್ಟು ಭಕ್ತಿ ಹಾರಿದಲ್ಲಿ, ಆತ ನಿಜತತ್ವಜ್ಞನಪ್ಪನೆ ? ಇದು ವಿಶ್ವಾಸದ ಭಿತ್ತಿ, ವಿರಕ್ತಿಯ ನಿಳಯ. ಸಂಗನಬಸವಣ್ಣ ಭಕ್ತಿ ವಿರಕ್ತಿಗಿಕ್ಕಿದ ಕಟ್ಟು. ಬ್ರಹ್ಮೇಶ್ವರಲಿಂಗವ ಮುಟ್ಟುವ ಮುಟ್ಟು.
--------------
ಬಾಹೂರ ಬೊಮ್ಮಣ್ಣ
ಆಕಾಶದ ಮಳೆಯನರಿತು, ಭೂಮಿಯ ಬೆಳೆಯನರಿತು, ಹುಟ್ಟುವ ಬೀಜವನರಿತು, ದೃಷ್ಟವ ಕಂಡು ಹೊತ್ತಾಡಿ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಸಂಸಾರಸುಖಕ್ಕೆ ಕಟ್ಟಿದ ಮನೆ, ಸಂಸಾರಸುಖಕ್ಕೆ ಕೊಂಡ ಹೆಣ್ಣು, ಸಂಸಾರಸುಖಕ್ಕೆ ಆದ ಮಕ್ಕಳು, ಸಂಸಾರಸುಖಕ್ಕೆ ನೆರೆದ ಬಂಧುಬಳಗ, ಸಂಸಾರಸುಖಕ್ಕೆ ಗಳಿಸಿದ ದ್ರವ್ಯ, ಸಂಸಾರಸುಖಕ್ಕೆ ಹೊಂದಿದ ಕ್ಷೇತ್ರ ಬೇಸಾಯ, ಸಂಸಾರ ಸುಖ-ದುಃಖ ಘನವಾಗಿ ಸತ್ತು ಸತ್ತು ಹುಟ್ಟುವ ಮಾನವರು ನಿಃಸಂಸಾರದಿಂದ ನಿಮ್ಮನರಿದು, ನಿಮ್ಮ ಜ್ಞಾನದೊಳಿಂಬುಗೊಂಡು, ಭವವಿರಹಿತರಾಗುವುದಿದನೇನಬಲ್ಲರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. ?
--------------
ಹೇಮಗಲ್ಲ ಹಂಪ
ಅರಿವು ಆಚಾರವುಳ್ಳ ಸಮ್ಯಜ್ಞಾನಿಗೆ ಹೇಳುವೆನಲ್ಲದೆ, ಜಗದಲ್ಲಿ ನಡೆವ ಜಂಗುಳಿಗಳಿಗೆ ನಾ ಹೇಳುವನಲ್ಲ. ಆರುಸ್ಥಲವನರಿದ ಲಿಂಗೈಕ್ಯಂಗೆ ಅಂಗದಮೇಲಣ ಲಿಂಗ ಭಿನ್ನವಾಗಲು ಸಂದೇಹಗೊಳ್ಳಲಿಲ್ಲ, ಲಿಂಗ ಹೋಯಿತ್ತು ಎಂದು ನುಡಿಯಲಿಲ್ಲ. ವೃತ್ತ ಗೋಳಕ ಗೋಮುಖ ಈ ತ್ರಿವಿಧ ಸ್ಥಾನದಲ್ಲಿ ಭಿನ್ನವಾಗಲು ಲಿಂಗದಲ್ಲಿ ಒಡವೆರೆಯಬೇಕು. ಹೀಂಗಲ್ಲದೆ ಸಂದೇಹವೆಂದು ಘಟವ ಹೊರೆವ ಅಜ್ಞಾನಿ ಕೋಟಿಜನ್ಮದಲ್ಲಿ ಶೂರಕನಾಗಿ ಹುಟ್ಟುವ. ಸಪ್ತಜನ್ಮದಲ್ಲಿ ಕುಷ್ಟನಾಗಿ ಹುಟ್ಟುವ. ದಾಸೀ ಗರ್ಭದಲ್ಲಿ ಹುಟ್ಟಿ, ಹೊಲೆಯರ ಎಂಜಲ ತಿಂದು, ಭವಭವದಲ್ಲಿ ಬಪ್ಪುದು ತಪ್ಪದು ಕಾಣಾ, ಚೆನ್ನಬಸವಣ್ಣ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಎನಗೆ ಹುಟ್ಟುವ ಮುನ್ನವೆ ಇಲ್ಲಿ ಮುನ್ನ ಮುನ್ನ ತನುವ ನೀಗಿ, ಮೂರ್ತಿಯ ಅನುಭವವನರಿದೆ. ಅನುಭಾವವಡಗಿ ನಿಂದೆನಯ್ಯ ಸಂಗಯ್ಯ.
--------------
ನೀಲಮ್ಮ
ಹರಲಿಂಗಕೆ ಹರಿ ಅಜಾಸುರರು ಸರಿಯೆಂಬ ಕುರಿಮಾನವ ನೀ ಕೇಳಾ. ಹರ ನಿತ್ಯ, ಹರಿಯಜಾಸುರರು ಅನಿತ್ಯ. ಅದೇನು ಕಾರಣವೆಂದರೆ : ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ, ಸುರರ ಪ್ರಳಯವೆಂದರೆ ಅಳವಲ್ಲ. ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹುಟ್ಟುವ ಅನಿತ್ಯದೈವವ ತಂದು ನಿತ್ಯವುಳ್ಳ ಶಿವಂಗೆ ಸರಿಯೆಂಬ ವಾಗದ್ವೈತಿಯ ಕಂಡರೆ ನೆತ್ತಿಯ ಮೇಲೆ ಟೊಂಗನಿಕ್ಕೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬ್ರಹ್ಮಪದವಿಯನೊಲ್ಲೆ , ವಿಷ್ಣುಪದವಿಯನೊಲ್ಲೆ , ರುದ್ರಪದವಿಯನೊಲ್ಲೆ , ಇಂದ್ರಪದವಿಯನೊಲ್ಲೆ , ಉಳಿದ ದೇವತೆಗಳ ಪದವಿಯನೊಲ್ಲೆ . ಎಲ್ಲಕ್ಕೂ ಒಡೆಯನಾದ ಶಿವನ ಪ್ರಮಥಗಣಂಗಳ ತಿಪ್ಪೆಯ ಮೇಲಣ ಹುಳುವಾಗಿ ಹುಟ್ಟುವ ಪದವಿಯ ಕರುಣಿಸು, ಮಹಾಮಹಿಮ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಹೆತ್ತವರೇ ಹೆಸರಿಡಬೇಕಲ್ಲದೆ, ತೊತ್ತಿರು ಬಂಟರು ಎತ್ತಬಲ್ಲರೊ ? ಕರ್ತೃ ನಿಮ್ಮ ನೆಲೆಯ ನಿಮ್ಮ ಒತ್ತಿನಲಿಪ್ಪ ಶರಣರು ಬಲ್ಲರಲ್ಲದೆ, ಈ ಸತ್ತು ಹುಟ್ಟುವ ಮನುಜರೆತ್ತ ಬಲ್ಲರೊ ? ನಿತ್ಯವಪ್ಪ ಮಹಾಘನ ಗುರು ಮಾತ ನೀನೆ ಬಲ್ಲೆ , ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಕಲ್ಲ, ದೇವರೆಂದು ಪೂಜಿಸುವರು_ಆಗದು ಕಾಣಿರೊ. ಅಗಡಿಗರಾದಿರಲ್ಲಾ ! ಮುಂದೆ ಹುಟ್ಟುವ ಕೂಸಿಂಗೆ ಇಂದು ಮೊಲೆಯ ಕೊಡುವಂತೆ ಗುಹೇಶ್ವರ !
--------------
ಅಲ್ಲಮಪ್ರಭುದೇವರು
ಮಹಾವಾರಿಧಿಯ ತೆರೆಯ ಮಧ್ಯದಲ್ಲಿ ಹುಟ್ಟುವ ಹೊಂದುವ ದಿನಮಣಿಯ ಭೇದದಂತೆ, ತನ್ನ ಚಿತ್ತದ ಅರಿವು ಮರವೆ ಕುರುಹೆಂದು ಪ್ರಮಾಳಿಸದೆ, ಅರಿವೆಂದು ನಿರ್ಧರಿಸದೆ ಎರಡರ ಭೇದದಲ್ಲಿ ಕಂಡು ನಿಂದ ಉಳುಮೆ ಬೆಳಗುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಸಂಜೀವನವ ಕೈಯಲ್ಲಿ ಹಿಡಿದಿರ್ದು, ಸಾವ ಹುಟ್ಟುವ ಜೀವವ ನಾ ಕಂಡೆ. ಕಂಗಳ ಮುಂದೆ ಕಡವರ ತುಂಬಿರ್ದು, ದಾರಿದ್ರ್ಯದಲ್ಲಿ ನೊಂದವರ ನಾ ಕಂಡೆ. ತನ್ನಂಗದಲ್ಲಿ ಅಲಗ ಹೊಣೆಯಾಗಿ ಹೊತ್ತಿರ್ದು, ಕೋಲಿನ ಹೊರೆಯ ಮೊನೆಯಲ್ಲಿ, ಇರಿಯಿಸಿಕೊಂಡು ಸತ್ತವರ ನಾ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋದವರ.
--------------
ಮೋಳಿಗೆ ಮಾರಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶದಿಂದ ಹೊಂದುವ, ಹುಟ್ಟುವ ದೇಹದ ಅಂದಗಾರಿಕೆಯಲ್ಲಿ ಬಂದುದನರಿಯ. ಬಂದಂತೆ ಹಿಂಗಿತೆಂದು ಇರು. ಮುಂದಣ ನಿಜಲಿಂಗವನರಿಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->