ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಗ್ನಿಯ ಅಡಕವ, ನೀರಿನಲ್ಲಿ[ಯ] ಸಾರವ ನಿರವಯದ ಹೊರೆಯ ಭೇದಿಸಿ ಕಾಬಂತೆ ಅಗ್ನಿಗೆ ಮಥನದಿಂದ, ನೀರಿನ ಸಾರಕ್ಕೆ ಮಧುರದಿಂದ ನಿರವಯದ ಹೊರೆಯಕ್ಕೆ ತನ್ನರಿವಿನ ಭೇದದಿಂದ ಕಾಣಿಸಿಕೊಂಬುದು ತ್ರಿವಿಧಲಿಂಗಭೇದ, ಪ್ರಾಣಲಿಂಗಿಯ ಸಂಗ. ಈ ಗುಣ ಸಂಗನಬಸವಣ್ಣನ ಸುಸಂಗ. ಬ್ರಹ್ಮೇಶ್ವರಲಿಂಗವ ಕೂಡುವ ಕುರುಹಿನ ನಿರಂಗ.
--------------
ಬಾಹೂರ ಬೊಮ್ಮಣ್ಣ
ಅಪರಾಧವ ಮಾಡಿದ ಭಟ ಅರಸಿಂಗೆ ಸಜ್ಜನನಪ್ಪನೆ ? ವ್ರತಭ್ರಷ್ಟ, ನೇಮಕ್ಕೆ ಹಾನಿಯಾದವ. ನಿತ್ಯಕೃತ್ಯವೆಂದು ಹಿಡಿದು ಬಿಟ್ಟವ. ತ್ರಿವಿಧಮಲವನೊಲ್ಲೆನೆಂದು ತೊಟ್ಟವ. ಇಂತೀ ಕಷ್ಟಗುಣದಲ್ಲಿ ನಡೆವ ದೃಷ್ಟಗಳ್ಳರ ನೋಡಾ. ಇದು ಬಾಯೊಳಗಣ ಹುಣ್ಣು ಹೇವರಿಸಿದ ಮತ್ತೆ ಇನ್ನಾವ ಠಾವಿನಲ್ಲಿ ನುಂಗುವ ? ಈ ಹೇಹ[ಯ]ವ ಬಿಡಿಸಾ ಎನಗೆ ಸಂಗನಬಸವಣ್ಣಾ. ಬ್ರಹ್ಮೇಶ್ವರಲಿಂಗವಿಪ್ಪ ಠಾವ ತೋರಾ.
--------------
ಬಾಹೂರ ಬೊಮ್ಮಣ್ಣ
ಅಹಂಕಾರಿಗೆ ಗುರುಭಕ್ತಿಯಿಲ್ಲ. ಪರಸೇವೆಯುಳ್ಳವಂಗೆ ಲಿಂಗಪೂಜೆಯಿಲ್ಲ. ಋಣಾನುಸಂಬಂಧಿಗೆ ಮಾಟದ ಮರ್ಮವಿಲ್ಲ. ಇಂತೀ ತ್ರಿವಿಧಭೇದದ ಕೂಟವನರಿತು ಸಂಗನಬಸವಣ್ಣನ ಆಟದಂತೆ ಬ್ರಹ್ಮೇಶ್ವರಲಿಂಗದಲ್ಲಿ ಕೂಟಸ್ಥನಾಗಬೇಕು.
--------------
ಬಾಹೂರ ಬೊಮ್ಮಣ್ಣ
ಅರಿದೆ ಮರೆದೆನೆಂಬನ್ನಕ್ಕ ಭಕ್ತಿವಿಶ್ವಾಸಭಾವಿಯಲ್ಲ. ಇನ್ನರಿಯಲಿಲ್ಲ, ಮುಂದೆ ಒಂದು ಕುರುಹಿಲ್ಲ ಎಂಬನ್ನಕ್ಕ ಪರವಸ್ತುಭಾವಿಯಲ್ಲ. ನಾನೆಂಬನ್ನಕ್ಕ ತಾನಿದ್ದು ಮುಂದೆ ಏನೂ ಇಲ್ಲವೆಂಬುದು ನಿಜವೆ ? ತಾನೆಂಬುದನಳಿದು ಮುಂದೆ ಏನೂ ಇಲ್ಲಾಯೆಂಬುದು ನಿಜವಾಗಿ ಅದು ನಿರ್ಭಾವವಾದುದು ಸಂಗನಬಸವಣ್ಣನ ಐಕ್ಯ. ಬ್ರಹ್ಮೇಶ್ವರಲಿಂಗದ ಕುರುಹು ನಾಮನಷ್ಟ.
--------------
ಬಾಹೂರ ಬೊಮ್ಮಣ್ಣ