ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕೃಷಿಯಿಂದ ಮುಂದಣ ಫಲವ ಕಾಬಂತೆ ಅಸಿಕಲಿಯಿಂದ ಮುಂದಣ ಅರಿಬಲವ ಗೆಲುವಂತೆ ಸತ್ಕ್ರೀಮಾರ್ಗ ಮರ್ಮ ಧರ್ಮಂಗಳನರಿದು ಮುಂದಣ ಆಸುರ ಕರ್ಮಂಗಳ ತಮ ಬಂಧಂಗಳನೀಸಿ ಗೆಲುವುದಕ್ಕೆ ಇಷ್ಟಲ್ಲದಿಲ್ಲ. ಇದು ವಸ್ತುಪೂಜಕನ ವಿಶ್ವಾಸ, ಸಂಗನಬಸವಣ್ಣನ ಸಂಬಂಧ. ಬ್ರಹ್ಮೇಶ್ವರಲಿಂಗವನರಿವುದಕ್ಕೆ ವಿಶ್ವಾಸಬ್ಥಿತ್ತಿ.
--------------
ಬಾಹೂರ ಬೊಮ್ಮಣ್ಣ
ಕೊರಡು ಕೊನರ್ವೋದಲ್ಲಿ, ಬರಡು ಹಯನಾದಲ್ಲಿ ಚಿತ್ರದ ಬೊಂಬೆ ನಿಜಕರ್ತೃರೂಪಾಗಿ ಬಂದಲ್ಲಿ ಅವು ಹಾಹೆಯ ದೃಷ್ಟವೋ, ವಿಶ್ವಾಸಿಯ ಚಿತ್ತವೋ ? ಇದು ಭಕ್ತಿಯ ಹೊಲಬಿಗೆ ಮುಖ್ಯ. ಸಂಗನಬಸವಣ್ಣನ ಸತ್ಯ, ಬ್ರಹ್ಮೇಶ್ವರಲಿಂಗವ ಕೂಡುವ ಕೃತ್ಯ.
--------------
ಬಾಹೂರ ಬೊಮ್ಮಣ್ಣ
ಕಾಯ ತೊಟ್ಟಿನಲ್ಲಿ ನೀರ ಬಿಟ್ಟಡೆ ಕಾಯಿ ನಿಂದುದುಂಟೆ ಬೇರೊಣಗಿದ ಮತ್ತೆ ? ಇಂತೀ ಮೂಲಭೇದದಿಂದ ಶಾಖೆ ಪರ್ಣ ಫಲವಲ್ಲದೆ ಮೊದಲಿಗೆ ನಷ್ಟಲಾಭಕ್ಕೆ ದಿನವುಂಟೆ ? ಜ್ಞಾನಹೀನನು ಆವ ಸ್ಥಲವ ನೆಮ್ಮಿ ಮಾತನಾಡಿದಡೂ ಷಡುಸ್ಥಲದಲ್ಲಿ ಭಾವಶುದ್ಭವಾಗಿಪ್ಪನೆ ? ಇದು ಕಾರಣದಲ್ಲಿ ಗುರುವಾಜ್ಞೆಯ ಮೀರದೆ ಶಿವಲಿಂಗಪೂಜೆಯ ಮರೆಯದೆ ಜಂಗಮಸೇವೆಯಲ್ಲಿ ಸನ್ನದ್ಧನಾಗಿ ಆವುದಾನೊಂದು ವ್ರತವೆಂದು ಹಿಡಿದು ಅದ್ವೈತವನರಿದೆನೆಂದು ಬಿಡದೆ ನಿಂದನಿಂದ ಸ್ಥಲಕ್ಕೆ ನಿಬದ್ಧಿಯಾಗಿ ನಿಂದಲ್ಲಿಯೆ ಲಿಂಗಸಂಗ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದುದು.
--------------
ಬಾಹೂರ ಬೊಮ್ಮಣ್ಣ
ಕಲ್ಲರೂಪು ಕಬ್ಬ ಮೆಲುವಾಗ, ಎತ್ತಿದ ವಿಮಾನದಲ್ಲಿಪ್ಪ ಸದ್ಗುರು ಬರುವಾಗ, ಹೂಳಿದ ವೃಷಭ ಕಲೆವಾಗ, ಇಂತಿವು ಭಾವದ ಬಲ್ಮೆ, ಸತ್ಯದ ಚಿತ್ತ, ಚಿತ್ತದ ಹೆಚ್ಚುಗೆ. ಇಂತೀ ಗುಣ ಸಂಗನಬಸವಣ್ಣನ ಉತ್ಸಾಹ. ಬ್ರಹ್ಮೇಶ್ವರಲಿಂಗವನರಿವುದಕ್ಕೆ ನಿಶ್ಚಯದ ವಿಶ್ವಾಸ.
--------------
ಬಾಹೂರ ಬೊಮ್ಮಣ್ಣ
ಕಾದ ಲೋಹದ ಮೇಲೆ ನೀರನೆರೆದಡೆ ನೀರ ಕುಡಿದುದು ಕಾಹೊ, ಕಬ್ಬುನವೊ ? ಎಂಬುದನರಿತಲ್ಲಿ ಅಂಗಲಿಂಗಸಂಬಂಧಿ. ಕ್ಷೀರ ಉಕ್ಕುವಲ್ಲಿ ಆರೈದು ನೀರನೆರೆದಡೆ ಆ ನೀರ ಕುಡಿದುದು ಹಾಲೊ, ಹಂಚೊ ? ಎಂಬುದ ಕಡೆಗಾಣಿಸಿದಲ್ಲಿ ಕ್ರೀ ಜ್ಞಾನ ಆತ್ಮಲಿಂಗಸಂಬಂಧಿ. ಇಂತೀ ಉಭಯದ ಒಳಗನರಿತಲ್ಲಿ ಕ್ರೀಗೆ ವರ್ತನೆ, ಅರಿವಿಂಗೆ ಕೂಟ. ಈ ಗುಣ ಸಂಗನಬಸವಣ್ಣನ ಆಟ. ಬ್ರಹ್ಮೇಶ್ವರಲಿಂಗದ ಒಳಗನರಿದವರಾಟ.
--------------
ಬಾಹೂರ ಬೊಮ್ಮಣ್ಣ