ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುನಿಷೆ* ಲಿಂಗನಿಷೆ* ಜಂಗಮನಿಷೆ*. ಈ ತ್ರಿವಿಧ ನಿಷೆ*ಯಲ್ಲಿ ಏಕಾಂಗಲಿಂಗನಿಷೆ* ವೀರಧೀರಂಗಲ್ಲದಾಗದು. ಇದು ಸಂಗನಬಸವಣ್ಣನಿಂದ ಬಂದ ಸಂತತಿಗಲ್ಲದಾಗದು. ಬ್ರಹ್ಮೇಶ್ವರಲಿಂಗವನರಿವುದಕ್ಕೆ ತ್ರಿಗುಣಸಂದೇಹಿಗಳಿಗೆ ವಸ್ತು ಸಂಧಿಸದು ನೋಡಾ.
--------------
ಬಾಹೂರ ಬೊಮ್ಮಣ್ಣ
ಗುರು ಅಳಿದಲ್ಲಿ ಗುರುಪಟ್ಟವೆಂದು ಕಟ್ಟಿ ಪರಮ ಗುರುವೆಂದು ಶರಣೆಂಬಲ್ಲಿ ಲಿಂಗಬಾಹ್ಯವಾಗಿ ಅಂಗವ ಹರಿದುಹೋದಲ್ಲಿ ಮತ್ತೊಂದು ಲಿಂಗ ಉಂಟೆಂದು ಕಟ್ಟಿಕೊಳ್ಳರೇತಕ್ಕೆ ? ಗುರು ಪೂರ್ವ, ಲಿಂಗ ಉತ್ತರವೆ ? ಗುರು ಆದಿ, ಲಿಂಗ ಅನಾದಿಯೇ ? ಇದು ಕಾರಣದಲ್ಲಿ ಗುರುಭಕ್ತಿ ಅರಿಬಿರಿದು, ಲಿಂಗಭಕ್ತಿ ಎತ್ತಲಾನು ಒಬ್ಬ ಜಂಗಮಭಕ್ತಿಗೆ ಸಂಗನಬಸವಣ್ಣನಲ್ಲದಿಲ್ಲ ಬ್ರಹ್ಮೇಶ್ವರಲಿಂಗ ಸಾಕ್ಷಿಯಾಗಿ.
--------------
ಬಾಹೂರ ಬೊಮ್ಮಣ್ಣ
ಗುರು ಭಕ್ತನಾದಲ್ಲಿ ಗುರುವಳಿದು ತಾನುಳಿದಡೆ ಗುರು ಭಕ್ತನಲ್ಲ. ಲಿಂಗ ಭಕ್ತನಾದಡೆ ಜಾಗ್ರಜಾಹೆಗಳಲ್ಲಿ ತನ್ನಂಗವ ಬಿಟ್ಟು ಲಿಂಗ ಹಿಂಗಿದಲ್ಲಿಯೆ, ಆತ್ಮ ಒಡಗೂಡಿದಲ್ಲಿಯೆ ಲಿಂಗ ಭಕ್ತನಲ್ಲ. ಜಂಗಮ ಭಕ್ತನಾದಡೆ ಕಳವು ಹಾದರ ದುರ್ಗುಣದಿಂದ ಕಡಿಯಿಸಿಕೊಂಬಲ್ಲಿ, ಬಿಡಿಸದೆ ತಾನಡಗಿ ಅರಿಯದಂತಿದ್ದಾಗವೆ ಜಂಗಮ ಭಕ್ತನಲ್ಲ. ಇಂತೀ ತ್ರಿವಿಧ ಭಾವಂಗಳಲ್ಲಿ ಘಟದ ಸಂದನಳಿದವಂಗಲ್ಲದೆ ತ್ರಿವಿಧಭಕ್ತಿಯಿಲ್ಲ. ಈ ಗುಣ ಸಂಗನಬಸವಣ್ಣಂಗಲ್ಲದೆ ಸಾಧ್ಯವಿಲ್ಲ. ಬ್ರಹ್ಮೇಶ್ವರಲಿಂಗವನರಿದವರಿಗೂ ಅಸಾಧ್ಯ ನೋಡಾ.
--------------
ಬಾಹೂರ ಬೊಮ್ಮಣ್ಣ
ಗುರುಭಕ್ತಿ ಉಂಟು, ಲಿಂಗಭಕ್ತಿ ಉಂಟು. ಜಂಗಮಭಕ್ತಿ ಎತ್ತಲಾನೆ ಉಂಟು. ತನ್ನನರಿದು ಇದಿರ ಕಾಬ ಜ್ಞಾನಭಕ್ತಿ ಚೆನ್ನಬಸವಣ್ಣಂಗೆ ಸಾಧ್ಯವಾಯಿತ್ತು ನೋಡಾ. ಅದು ಅರಿದರುವಿಂಗೆ ಮುನ್ನವೆ ಕುರುಹಿಟ್ಟ ನಿಜ. ಆ ಗುಣ ಸಂಗನಬಸವಣ್ಣ ಬಂದ ಹಾದಿ, ಬ್ರಹ್ಮೇಶ್ವರಲಿಂಗದಲ್ಲಿಗಾಗಿ.
--------------
ಬಾಹೂರ ಬೊಮ್ಮಣ್ಣ
ಗುರುವಿನಲ್ಲಿ ಅನುವನರಿತವಂಗೆ ಮತ್ತೆ ಗುರು ನಿರೂಪವೆಂಬುದಿಲ್ಲ. ಪ್ರಾಣವೆ ಲಿಂಗವಾದವಂಗೆ ನೆನಹಿಂಗೆ ಎಡೆದೆರಪಿಲ್ಲ. ಸರ್ವದಯೆ ಸಂಪೂರ್ಣನಾದವಂಗೆ ಇಕ್ಕಿಹೆ ಎರೆದಿಹೆನೆಂಬ ತೋಟಿಯ ತೊಡಕಿಲ್ಲ. ಇಂತಿವನೊಳಗನರಿದು ವೇಧಿಸುವನ್ನಕ್ಕ ಗುರುವಿನ ಆಜ್ಞೆ, ಲಿಂಗದ ಪೂಜೆ, ಮಾಟಕೂಟದ ಬೇಟವ ಬಿಡಲಿಲ್ಲ. ಇದು ಸಂಗನಬಸವಣ್ಣನಾಟ, ಬ್ರಹ್ಮೇಶ್ವರಲಿಂಗದ ಕೂಟ
--------------
ಬಾಹೂರ ಬೊಮ್ಮಣ್ಣ