ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆತ್ಮ ಒಂದೆಂದಲ್ಲಿ, ಇಂದ್ರಿಯಂಗಳು ಹಲವು ತೆರನಾದವು ನೋಡಾ. ವಾಯು ಒಂದೆಂದಡೆ, ಒಂಬತ್ತು ಸಂಧಿಸಿದವು ನೋಡಾ. ಇಂದ್ರಿಯ ಒಂದೆಂದಡೆ, ನಾಲ್ಕು ಸಂದಣಿಸಿದವು ನೋಡಾ. ಮದ ಒಂದೆಂದಡೆ, ಏಳು ಸಂಭ್ರಮಿಸುತಿವೆ ನೋಡಾ. ಕಳೆ ಒಂದೆಂದಡೆ, ಹದಿನೈದು ಹಿಂಗದಿವೆ ನೋಡಾ. ಇಂತೀ ಸ್ಥೂಲತನು ಒಂದೆಂದಡೆ, ಸೂಕ್ಷ್ಮಕಾರಣ ದ್ವಂದ್ವವಾಗಿವೆ ನೋಡಾ. ಜೀವ ಒಂದೆಂದಡೆ, ಪರಮಾತ್ಮನೆಂದು ತ್ರಿವಿಧ ಸಂಗವಾಗಿದೆ ನೋಡಾ. ಅರಿದೆನೆಂಬಲ್ಲಿ ಹಿಂದೊಂದು ಮರವೆ, ಮರೆದೆನೆಂಬಲ್ಲಿ ಮುಂದೊಂದರಿವು. ಇಂತೀ ದಂಪತಿ ಸಂಗವುಳ್ಳನ್ನಕ್ಕ ಏನನಹುದೆಂಬೆ, ಏನನಲ್ಲಾ ಎಂಬೆ ! ನುಡಿದಡೆ ಸಮಯಕ್ಕೆ ದೂರ, ಸುಮ್ಮನಿದ್ದಡೆ ಸ್ವಾನುಭಾವಕ್ಕೆ ದೂರ. ಆರೆಂದಡೂ ಎನಲಿ, ಆವ ಸ್ಥಲದಲ್ಲಿ ನಿಂದಡೂ ಭಕ್ತಿಸ್ಥಲವೆ. ವಸ್ತುವ ನೆಮ್ಮುವುದಕ್ಕೆ ವಿಶ್ವಾಸ. ಇದು ಸಂಗನಬಸವಣ್ಣನ ಕಟ್ಟು, ಬ್ರಹ್ಮೇಶ್ವರಲಿಂಗವ ಮುಟ್ಟುವ ಗೊತ್ತು.
--------------
ಬಾಹೂರ ಬೊಮ್ಮಣ್ಣ
ಆವ ಸ್ಥಲ ಸಾಧಿಸಿ ಬಂದು ನಿಂದಡೂ ಭಾವಶುದ್ಧಾತ್ಮವಾಗಿ ವೇಧಿಸುವುದೊಂದೆ ವಸ್ತು. ಅದು ಭಕ್ತಿಯ ಬೇರು, ಸದಾಶ್ರದ್ಧೆಯ ಶಾಖೆ, ವಿಶ್ವಾಸದ ಫಲ, ನಿಜತತ್ವದ ರಸ, ಸ್ವಯದ ಸಾದು. ಅದು ಸಂಗನಬಸವಣ್ಣನಿಂದ ಬಂದ ಬೆಳೆ, ಬ್ರಹ್ಮೇಶ್ವರಲಿಂಗದಲ್ಲಿ ಐಕ್ಯವಾಯಿತ್ತು.
--------------
ಬಾಹೂರ ಬೊಮ್ಮಣ್ಣ
ಆರುಸ್ಥಲದಲ್ಲಿ ನಿಂದು ನಿಜವಸ್ತುವ ಭೇದಿಸಿ ಕಂಡೆಹೆನೆಂದಡೆ ಆ ಭಕ್ತನ ಭಕ್ತ, ಆ ಮಾಹೇಶ್ವರನ ಮಾಹೇಶ್ವರ, ಆ ಪ್ರಸಾದಿಯ ಪ್ರಸಾದಿ, ಆ ಪ್ರಾಣಲಿಂಗಿಯ ಪ್ರಾಣಲಿಂಗಿ, ಆ ಶರಣನ ಶರಣ, ಆ ಐಕ್ಯನ ಐಕ್ಯ. ಇಂತಿವರೊಳಗಿನಲ್ಲಿ ಮಿಶ್ರಭೇದಂಗಳಾಗಿ, ಸ್ಥಲನಾಮವಾಗಿ, ವರ್ಣಭೇದವನಿಟ್ಟು, ಬೀಜದೊಳಗೆ ಬೇರು ಶಾಖೆ ಪರ್ಣ ಅಂಕುರ ಫಲ ಮುಂತಾದ ಭೇದಂಗಳೆಲ್ಲವೂ ಬೀಜದಲ್ಲಿ ಅಡಗಿಪ್ಪಂತೆ ಚಿತ್ತುವಿನಲ್ಲಿ ಸುಚಿತ್ತದಲ್ಲಿ ಅಡಗಿಪ್ಪ ಏಕವಸ್ತುವ ಹಲವು ತೆರದಲ್ಲಿ ಹೊಲಬಿಗನಾಗಿ ಕಂಡೆಹೆನೆಂದಡೆ ಒಂದೇ ಹೊಲಬಿನ ವಿಶ್ವಾಸದಿಂದಲ್ಲದೆ ಆಗದು. ಅದು ಹಲವು ಕುಂಭದಲ್ಲಿ ತೋರುವ ವರುಣನ ಕಿರಣದಂತೆ. ವಿಶ್ವಮುಖದಿಂದ ಕಂಡೆಹೆನೆಂದಡೆ ವಿಶ್ವಾಸದಿಂದಲ್ಲದೆ ಆಗದು. ಆ ವಿಶ್ವಾಸ ಉಭಯವನಳಿದಲ್ಲಿ ಷಡುಸ್ಥಲಭರಿತ, ಸರ್ವಸ್ಥಲ ಸಂಪೂರ್ಣ. ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗವನು ಅರಿತವಂಗಲ್ಲದೆ ಸಾಧ್ಯವಲ್ಲ ನೋಡಾ.
--------------
ಬಾಹೂರ ಬೊಮ್ಮಣ್ಣ
ಆವ ಭಕ್ತಿ ಸನ್ಮಾರ್ಗದಲ್ಲಿ ನಡೆವಲ್ಲಿ ಭಕ್ತಂಗೆ ಗುರುಭಕ್ತಿ, ಮಾಹೇಶ್ವರಂಗೆ ಲಿಂಗಭಕ್ತಿ, ಪ್ರಸಾದಿಗೆ ಜಂಗಮಭಕ್ತಿ, ಪ್ರಾಣಲಿಂಗಿಗೆ ಸರ್ವ ಅವಧಾನ, ಶರಣಂಗೆ ಪರಿಪೂರ್ಣತ್ವ, ಐಕ್ಯಂಗೆ ಇಂತೀ ಐದು ಗುಣಲೇಪ. ಆರೆಂಬುದ ಮೀರಿ ತೋರಿದಲ್ಲಿ ಷಡುಸ್ಥಲ ಶುದ್ಧ ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗದಾಟ.
--------------
ಬಾಹೂರ ಬೊಮ್ಮಣ್ಣ
ಆವುದೊಂದು ಕರ್ಮಂಗಳ ವ್ಯಾಪಾರಿಸಿ ಮಾಡುವಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯವನರಿತು ಆ ವ್ರತ ಕ್ರೀ ವರ್ತನಂಗಳ ಹಿಡಿದಲ್ಲಿ ಹಿಂದಣ ನಗೆಗೆಡೆ, ಮುಂದಣ ಹಾಸ್ಯರಸಕ್ಕೆ ಒಳಗಲ್ಲದೆ ನುಡಿದ ಮಾತಿಂಗೆ ನಡೆ ಶುದ್ಧವಾಗಿ, ಆ ನಡೆವ ನಡೆಗೆ ಕ್ರೀ ಶುದ್ಧವಾಗಿ, ಆ ಕ್ರೀಯಲ್ಲಿ ವ್ರತಭಂಗವಿಲ್ಲದೆ ಇಪ್ಪುದು, ಸದ್ಭಕ್ತನ ಸಂಬಂಧ. ಈ ಗುಣ ಸಂಗನಬಸವಣ್ಣನ ಶ್ರದ್ಧೆ. ಬ್ರಹ್ಮೇಶ್ವರಲಿಂಗವನರಿವುದಕ್ಕೆ ಕ್ರಿಯಾಮಾರ್ಗ.
--------------
ಬಾಹೂರ ಬೊಮ್ಮಣ್ಣ