ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುರಿಯ ಮೆಟ್ಟುವ ವಿಹಂಗ ಜಾತಿ ಜೀವಂಗಳೆಲ್ಲವೂ ಮುಂಚಿ ಅವ ಬಲ್ಲಡೆ ಸಂಚವ ಮೆಟ್ಟಿ ತಾವು ಸಿಕ್ಕುವವೆ ? ಆ ತೆರನ ಕಂಡು ತ್ರಿವಿಧದ ಹುರಿಯಲ್ಲಿ ಅಡಿಯನಿಕ್ಕಿ ಅಡೆಗೊಡ್ಡಿದಂತೆ ಬಿದ್ದಿರುತ್ತ, ಮತ್ತರಿಕೆಯ ಮಾತ ನುಡಿದಡೆ ಅದು ಬರುಕಟಿಯೆಂಬರು. ನೆರೆ ಅರಿದು ಹರಿದ ಶರಣರು ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಹೊರೆಹೊರೆಯಲ್ಲಿ ವೇಧಿಸಬೇಕು
--------------
ಬಾಹೂರ ಬೊಮ್ಮಣ್ಣ
ಹಿಂದಣ ಸುಖ, ಮುಂದಣ ದುಃಖಂಗಳು ಮುಂದಣ ಸುಖ, ಹಿಂದಣ ದುಃಖಂಗಳು ಇವ ತಾ ಸಂಧಿಸಿ ಅನುಭವಿಸಿದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳೆಂದು ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೆ? ಹಿಂದೆ ಅಳಿದವರ ಕೇಳಿ, ಮುಂದೆ ಸಾವವರ ಕಂಡು ಅಂದಂದಿಗೆ ನೂರು ತುಂಬಿತ್ತೆಂದು ಸಂದೇಹ ನಿವೃತ್ತಿಯಾಗಿರಬೇಕು, ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿವುದಕ್ಕೆ.
--------------
ಬಾಹೂರ ಬೊಮ್ಮಣ್ಣ
ಹಾಲನಟ್ಟಿ ಹಾವ ಸಲಹಿದಲ್ಲಿ ಅದು ತನ್ನಯ ಉಚಿತಕ್ಕೆ ಹಾಳಾಹಳವ ಬಿಟ್ಟಿತ್ತೆ ? ಕುಕ್ಕುಟನ ಮಾಳಿಗೆಯಲ್ಲಿ ಕೂಡಿ, ಪ್ರತಿಗೂಡಿನಲ್ಲಿ ಕೂಡಲಿಕ್ಕೆ ತನ್ನ ತತ್ಕಾಲಕ್ಕೆ ಕೂಗುವುದ ಬಿಟ್ಟಿತ್ತೆ ? ಇಂತೀ ವರ್ತನದಂತೆ ಭಕ್ತಿಢಾಳಕರ ದರ್ಶನ. ಚೋರಕರ, ವಾಚಾರಚನೆಗರ ಬರಿಮಾತಿನ ಪೂಸರ, ಈಶ್ವರ ಭಕ್ತರ ಪರಮೇಶ್ವರ ರೂಪು ಎನಲಾರೆ. ಮತ್ತೆ ನೀತಿಯ ವಿಶ್ವಾಸವ ಬಿಡಲಾರೆ. ಈ ಭಕ್ತಿಯೆಂಬ ಪಾಶವ ಹರಿವುದಕ್ಕೆ ನಿಹಿತವ ತೋರಯ್ಯಾ ಸಂಗನಬಸವಣ್ಣಾ. ಬ್ರಹ್ಮೇಶ್ವರಲಿಂಗವನರಿವುದಕ್ಕೆ ಕುರುಹ ಹೇಳಣ್ಣಾ.
--------------
ಬಾಹೂರ ಬೊಮ್ಮಣ್ಣ