ಅಥವಾ
(7) (1) (4) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (1) (0) (1) (0) (0) (0) (0) (0) (0) (0) (0) (0) (1) (0) (0) (0) (3) (11) (0) (0) (0) (2) (0) (0) (0) (0) (2) (5) (0) (3) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚರಲಿಂಗಪ್ರಸನ್ನ ಪ್ರಸಾದಿ ಭಕ್ತ ಮಹೇಶ್ವರರು, ಶ್ರೀ ವಿಭೂತಿಯ ಕ್ರಿಯಾಧಾರಣ ಮಾಡಬೇಕಾದರೆ, ಸಾಜವಾದಂಥ ಗಟ್ಟಿಗೆ, ಆ ಮಡಿಗಿಕೊಂಡಿರ್ದಂಥ ಗುರುಪಾದೋದಕದಿಂದ ಅಭಿಷೇಕಂಗೈದು, ಅದೇ ಉದಕವನ್ನು ಒಂದು ಬಟ್ಟಲಲ್ಲಿ ಸ್ವಲ್ಪ ಮಾತ್ರ ತೆಗೆದುಕೊಂಡು, ಮೂಲಮಂತ್ರಧ್ಯಾನದಿಂದ ಆ ಜಂಗಮಮೂರ್ತಿಗಳ ಉಭಯಾಂಗುಷ*ದಡಿಯಲ್ಲಿ ಮಡುಗಿ ತನ್ನ ನಿಜದೃಷ್ಟಿಯೆ ಅರ್ಚನೆಯಾಗಿ ನಮಸ್ಕರಿಸಿ, ಇಷ್ಟಲಿಂಗಸಂಬಂಧವಾದ ಅಂಗುಷ*ವ ತನ್ನ ತರ್ಜನಿಬೆರಳಿಂದ ನಾದಬಿಂದುಕಳೆಗಳೆಂಬ ತ್ರಿವಿಧಪ್ರಣಮಗಳ ಬಿಂದುದೀರ್ಘಾಯುಕ್ತವಾಗಿ ಮೂರುವೇಳೆ ಘನಮನವೇದ್ಯದಿಂದ ಸ್ಪರಿಶನವಮಾಡಿ, ಪ್ರಾಣಲಿಂಗಸಂಬಂಧವಾದ ಅಂಗುಷ*ವ ಅದರಂತೆ ಚಿನ್ನಾದ ಬಿಂದು ಕಳೆಗಳೆಂಬ ತ್ರಿವಿಧಪ್ರಣಮಗಳ ಬಿಂದುದೀರ್ಘಯುಕ್ತವಾಗಿ ಮೂರುವೇಳೆ ಪರಿಪೂರ್ಣಾನುಭಾವದಿಂದ ಸ್ಪರಿಶನವ ಮಾಡಿ, ಅಲ್ಲಿಂದ ಭಾವಲಿಂಗಸ್ವರೂಪ ಅಷ್ಟಾವರಣಸಂಬಂಧವಾದ ಎಂಟು ಅಂಗುಲಿಗಳ ಅಂಗುಷ*ಗಳೊಡಗೂಡಿ, ಪರನಾದ ಬಿಂದು ಕಳೆಗಳೆಂಬ ತ್ರಿವಿಧಪ್ರಣಮಗಳ ಬಿಂದು ದೀರ್ಘಯುಕ್ತವಾಗಿ, ಒಂದು ವೇಳೆ ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವದಿಂದ ಸ್ಪರಿಶನವ ಮಾಡಿದಂಥ ಲಿಂಗಪಾದೋದಕವನ್ನು ಗುರುಪಾದೋದಕದಿಂದಭಿಷೇಕಂಗೈದಿಷ್ಟವಿಭೂತಿಗಟ್ಟಿ ಸುಯಿಧಾನದಿಂದ ಸಮ್ಮಿಶ್ರಂಗೈದುಳಿದಂಥ ಲಿಂಗಪಾದೋದಕವನ್ನು ಪ್ರಸಾದಿಸ್ಥಲವಿಲ್ಲದವರು ಒಂದು ಗಿಂಡಿಯಲ್ಲಿ ಮಡುಗಿಕೊಂಡು ನೆಲದಮೇಲಿಡದೆ ಒಂದಾಸನದಲ್ಲಿಟ್ಟು, ಸುಯ್ದಾನದಿಂದ ಘನಪಾದತೀರ್ಥ ತನ್ನರ್ಪಿತ ಸಮಯೋಚಿತಕ್ಕೆ ದೊರೆಯದಿದ್ದರೆ ಇಷ್ಟಲಿಂಗಾರ್ಪಿತಕ್ಕೆ ಮೂರುವೇಳೆ ಶಿವಶಿವ ಹರಹರ ಜಯಜಯ ಬಸವಲಿಂಗಯ್ಯಯೆಂದು ತಾನು ಸ್ವೀಕರಿಸಿ, ಕಂಡಿತಂಗೈದು, ಲಿಂಗಾರ್ಪಿತವ ಮಾಡುವುದು. ಗುರುದೀಕ್ಷೆಯುಳ್ಳವರು ಆ ಗಿಂಡಿಯೊಳಗಿರುವ ಉದಕವ ಜಂಗಮಮೂರ್ತಿಗಳು ದೊರೆತ ಸಮಯದಲ್ಲಿ ಕಂಡಿತಂಗೈದು, ಲಿಂಗದ ಉದುಗದಲ್ಲಿ ದ್ರವವನಾರಿಸಿ, ಆ ಗಿಂಡಿಯಂ ಬೆಳಗಿ, ಶಿವಪ್ರಸಾದಿಗಳಿಂದ ಶರಣುಹೊಕ್ಕು ಮೊದಲಂತೆ ಪಾದೋದಕವ ಮಾಡಿಟ್ಟು, ಗಿಂಡಿಯಲ್ಲಿ ತುಂಬಿಟ್ಟುಕೊಂಡು, ಪ್ರಾಣಾಂತ್ಯಲೀಲೆಸಮಾಪ್ತಪರಿಯಂತರವು ಆಚರಿಸುವುದು. ಲಿಂಗಪ್ರಸಾದಿಗಳಾದವರು, ಅಲ್ಲಿಂದ ಗಿಂಡಿ ಒಂದು ತಾವು ಉಳಿದು, ತಾನೊಂದು ಬಳಿಯವಾದಲ್ಲಿ ಜಂಗಮದ ತೀರ್ಥವ ಪಡೆದು ಸಲಿಸಿ, ಲಿಂಗಾರ್ಪಿತ ಭೋಗೋಪಭೋಗದಲ್ಲಿರ್ಪವರೆ ಲಿಂಗಾಂಗಿಗಳೆನಿಸುವರು. ಈ ಎರಡೂ ಇಲ್ಲವಾದೊಡೆ, ಪ್ರಸಾದಿಸ್ಥಲವುಳ್ಳವರು ಧರಿಸುವ ಕ್ರಿಯಾಭಸಿತದಿಂದ, ಪರಿಣಾಮೋದಕವನೊಂದು ಬಟ್ಟಲಲ್ಲಿ ಸ್ವಲ್ಪಮಡಗಿಕೊಂಡು, ಭಸ್ಮಮಿಶ್ರಂಗೆಯ್ದು, ಹಿಂದೆ ಹೇಳಿದ ಸ್ಮರಣೆಯಿಂದೆ ಸಲಿಸಿ, ಕಂಡಿತಂಗೈದು, ಷಡ್ರಸಾಮೃತಲಿಂಗಭೋಗದಲ್ಲಿರ್ಪುದೆ ನಿರವಯಪ್ರಭು ಮಹಾಂತನ ಸೂತ್ರಧಾರಿಗಳೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ