ಅಥವಾ
(7) (1) (4) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (1) (0) (1) (0) (0) (0) (0) (0) (0) (0) (0) (0) (1) (0) (0) (0) (3) (11) (0) (0) (0) (2) (0) (0) (0) (0) (2) (5) (0) (3) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿರವಯರ್ಪಿತವಾದ ತದನಂತರದೊಳು ಚಿದ್ಭಸ್ಮಧಾರಣಂಗೈದು, ಸರ್ವೋಪಚಾರವನುಳಿದು, ಪತ್ರಿ ಪುಷ್ಪಗಳ್ಯಾವುದಾದರೂ ಒಂದೇ ಧರಿಸಿ, ತನ್ನ ಹೃನ್ಮಂದಿರದಲ್ಲಿ ನೆಲೆಸಿರುವ ವಸ್ತುವು ಬೇರೆ, ನಾ ಬೇರೆಂಬ ಉಭಯಭಾವಮಂ ಭಾವಸ್ಥಲ ಮನಸ್ಥಲ ಕರಸ್ಥಲ ಪರಿಪೂರ್ಣಸ್ಥಲವ ಕಾಣದೆ ಇದ್ದಾಗೆ ಸರಿಮಾಡಿ, ಈ ತತ್ಸಮಯವೆಂತಾಯಿತೆಂದೊಡೆ : ಕ್ಷೀರ ಕ್ಷೀರ ಕೂಡಿದಂತೆ, ಘೃತ ಘೃತ ಕೂಡಿದಂತೆ, ಜ್ಯೋತಿ ಜ್ಯೋತಿ ಒಂದಾದಂತೆ, ಉದಕ ಉದಕವ ಕೂಡಿದಂತೆ, ಕೇವಲ ಅಂಗ ಲಿಂಗದಲ್ಲಿ ಲಿಂಗಗುರುಚರಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರವೆಂಬ ಚಿದಾಬ್ಧಿಸಂಗ ಚಿದ್ಬೆಳಗಿನ ಸಮರಸದಲ್ಲಿ ಆ ಸಮರಸಪರಮಾಣುಮಹಾಂತದೈಕ್ಯದಲ್ಲಿ ಆ ಐಕ್ಯ ನಿರವಯಬ್ರಹ್ಮವೆಂಬ ಕುರುಹು ನಷ್ಟವಾಗಿ, ತಾನೆ ತಾನಾದಂತೆಯೆಂದು, ಒಳಹೊರಗೆನ್ನದೆ, ಈ ಕೂಟವೆ ನಿರಂಜನ ಚಿನ್ಮಯರೂಪ ಘನಗಂಭೀರ ಜಂಗಮಮೂರ್ತಿ ಭಾವಲಿಂಗಾರ್ಚನೆ ಇದೆಯೆಂದು, ಮಹಾಜ್ಞಾನ ಪರಿಪೂರ್ಣಾನುಭಾವದಿಂದ ಪರಮಕಾಷಿ*ಯನೈದು, ಹಿಂದುಮುಂದಣ ಭವಮಂ ನೀಗಿ, ತನ್ನ ಘನಮನೋಲ್ಲಾಸ ನಿಜನೈಷೆ* ಬೆಳಗೆ, ಅಷ್ಟವಿಧಾರ್ಚನೆ ಷೋಡಶೋಪಚಾರವಾಗಿ, ಭಕ್ತಜಂಗಮವೆಂಬುಭಯವಳಿದುಳಿದು ನಿಂದ ನಿರ್ವಾಣಪದಸ್ಥಾನಿಗಳೆ ನಿರವಯಪ್ರಭು ಮಹಾಂತರೆಂದವರಲ್ಲಿ ಅಚ್ಚೊತ್ತಿದಂತಿರ್ಪರು ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ನಿಃಕಳಂಕ ಶ್ರೀಗುರುವಿನ ಚಿದ್ಗರ್ಭೋದಯ ವೇಧಾಮಂತ್ರಕ್ರಿಯಾದೀಕ್ಷಾನ್ವಿತ ವೀರಶೈವ ಭಕ್ತಮಹೇಶ್ವರರು ಪ್ರಮಾದವಶದಿಂದ ವಿಘ್ನಾದಿಗಳ ಅಚೇತನದ ವೇಳೆ ಬಂದೊದಗಿ ಕ್ರಿಯಾಲಿಂಗಾರ್ಪಣ ತಡೆದುನಿಂದಲ್ಲಿ ಮತ್ತೊಮ್ಮೆ ಒದಗಿದಾಗ್ಗೆ, ನಿನ್ನೆ ನಿಂತ ಕ್ರಿಯೆಗಳೆಂದು ಎರಡು ಮೂರು ಜಪಗಳ ಮಾಡಿ, ಎರಡು ಮೂರು ವೇಳೆ ತೀರ್ಥಪ್ರಸಾದಗಳೆಂದು, ಭಿನ್ನಕ್ರಿಯಾರ್ಪಣಗಳ ಮಾಡಲಾಗದು ಶಿವಪ್ರಸಾದಿಗಳು. ಸಾಕ್ಷಿ : ``ದಿವಾ ನ ಪೂಜಯೇಲ್ಲಿಂಗಂ ರಾತ್ರೌ ಚೈವ ನ ಪೂಜಯೇತ್ | ಸದಾ ಸಂಪೂಜಯೇಲ್ಲಿಂಗಂ ದಿವಾರಾತ್ರಿ ನಿರೋಧತಃ ||'' ಎಂಬ ಹರನಿರೂಪಪ್ರಮಾಣವಾಗಿ ಮಾರ್ಗಕ್ರಿಯಾಚರಣೆ ಇಷ್ಟಲಿಂಗಾರೋಪಿತವಾಗಿ, ಮೀರಿದಕ್ರಿಯಾಚರಣೆಯೇ ಪ್ರಾಣಲಿಂಗಾರೋಪಿತವಾಗಿ, ಸದಾಸನ್ನಹಿತ ಪರಿಪೂರ್ಣಕ್ರಿಯಾಚರಣೆಯೆ ಭಾವಲಿಂಗಾರೋಪಿತವಾಗಿ, ತ್ರಿವಿಧ ತನುಮನದ ವಸ್ತುಗಳೆಲ್ಲ ಲಿಂಗಾಂಗಸಂಗಸಂಯೋಗವಾದ ನಿಜಲಿಂಗೈಕ್ಯಂಗೆ ದಿವರಾತ್ರಿಗಳ ತೊಡಕೇತಕೆಂದಾತ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ನಿರಾವಲಂಬಜಂಗಮಲಿಂಗಮೂರ್ತಿಯ ಚರಣಕಮಲದಡಿಯಲ್ಲಿ ಸ್ಥಾಪ್ಯವಾದ ಹಸ್ತಕಮಲದಲ್ಲಿ ಶಕ್ತಿಸಂಬಂಧವಾದ ಕಿರಿಬೆರಳು ಶಿವಸಂಬಂಧವಾಗಿ ರಾಜಿಸುವಲ್ಲಿ ಅಂಗುಷ*ವ ಕೂಡಿಸಿ, ತರ್ಜನಿ ಮಧ್ಯ ಅನಾಮಿಕಾಂಗುಲಿಗಳಲ್ಲಿ ಅನಾದಿವಿಡಿದುಬಂದ ಜ್ಞಾನಗುರುಲಿಂಗಜಂಗಮಸಂಬಂಧವಾಗಿರ್ಪುದು. ಆ ಜಂಗಮಮೂರ್ತಿಯ ಅಂಗುಷ*ವೆರಡು ಮಧ್ಯದಲ್ಲಿ ಕೂಡಿ ಆದಿವಿಡಿದುಬಂದ ಕ್ರಿಯಾಗುರುಲಿಂಗಜಂಗಮಸಂಬಂಧವಾಗಿರ್ಪುದು. ಇಂತೆಸೆವ ಸಾಕಾರ ನಿರಾಕಾರದ ನಿಲುಕಡೆಯ ಗುರುಸ್ವಾನುಭಾವದಿಂದರಿದು ಆನಂದಿಸುವ ನಿಲುಕಡೆಯೆಂತೆಂದೊಡೆ : ಆ ಜಂಗಮಮೂರ್ತಿಗಳಿಗೆ ಲಿಂಗಜಂಗಮದ ಕ್ರಿಯಾಪಾದೋದಕ ಪ್ರಸಾದಸೇವನೆ ಮಾಡಿದುದರಿಂದ ಆ ಜಂಗಮಮೂರ್ತಿಗಳಲ್ಲಿ ಆದಿವಿಡಿದು ಬಂದ ಕ್ರಿಯಾಗುರುಲಿಂಗಜಂಗಮಸ್ಥಲಸಂಬಂಧವಾಗಿರ್ಪುದು. ಆ ಸದ್ಭಕ್ತಗಣಂಗಳಲ್ಲಿ ಜಂಗಮಲಿಂಗದ ಜ್ಞಾನಪ್ರಸಾದ ಪಾದೋದಕಸೇವನೆ ಮಾಡಿದುದರಿಂದ ಆ ಸದ್ಭಕ್ತಗಣಂಗಳಿಗೆ ಅನಾದಿವಿಡಿದುಬಂದ ಜ್ಞಾನಗುರುಲಿಂಗಜಂಗಮಸ್ಥಲ ಸಂಬಂಧವಾಗಿರ್ಪುದು. ಈ ನಿಲುಕಡೆಯನರಿದ ಸಂಗಸಮರಸೈಕ್ಯರೆ ನಿರವಯಪ್ರಭು ಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ