ಅಥವಾ
(7) (1) (4) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (1) (0) (1) (0) (0) (0) (0) (0) (0) (0) (0) (0) (1) (0) (0) (0) (3) (11) (0) (0) (0) (2) (0) (0) (0) (0) (2) (5) (0) (3) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೀರಶೈವ ಸನ್ಮಾರ್ಗ ಗುರೂಪದೇಶರೆನಿಸಿ ತಮ್ಮಯ ನವಸ್ಥಾನದಲ್ಲಿರ್ದು ಮೂರ್ತಿಗೊಂಡಿರ್ಪ ನವಲಿಂಗಮಂತ್ರಗಳಿಗೆ ಸುಗಂಧ ಸುರಸ ಸುರೂಪು ಸುಸ್ಪರಿಶನ ಸುಶಬ್ದ ಸುತೃಪ್ತಿ ಅಖಂಡತೃಪ್ತಿ ಮಹಾತೃಪ್ತಿ ಮಹಾಪರಿಪೂರ್ಣತೃಪ್ತಿ ಕಡೆಯಾದ ನವರಸಾಮೃತಗಳ ಆ ಲಿಂಗಮಂತ್ರನಿರೀಕ್ಷಣೆಗಳನುಳಿದು, ಕ್ರಿಯಾರ್ಪಣ ಜ್ಞಾನಾರ್ಪಣ ಮಹಾಜ್ಞಾನಾರ್ಪಣ ತ್ರಿವಿಧಸಂಬಂಧದಾಚರಣೆಯ ಸಾವಧಾನ ಸಪ್ತವಿಧಭಕ್ತಿಯಿಂ ಮರೆದು, ಪಂಚಪರುಷಮಂ ಮಾಡದೆ, ಜಡಜೀವರಂತೆ ಭೌತಿಕಲಿಂಗೋದಕಂಗಳ ಭುಂಜಿಸಿ, ಅಂಗಭೋಗವಿಷಯಾತುರನಾಗಿರ್ಪುದೆ ಅಂತರಂಗದ ತೃಪ್ತಿಯ ಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ವೀರಶೈವಾಚಾರಗುರುಮಾರ್ಗವಿಡಿದು ಬಂದ ಭಕ್ತಗಣಾಧೀಶ್ವರರು ಕ್ರಿಯಾಜಂಗಮಲಿಂಗದ ಪಾದಪೂಜೆಯ ಮಾಡುವ ವಿವರವದೆಂತೆಂದೊಡೆ : ಜಂಗಮಲಿಂಗಮೂರ್ತಿಗಳು ತಮ್ಮ ಗೃಹಕ್ಕೆ ಬಂದು, ಶಿವಲಿಂಗಾರ್ಪಣಕ್ಕೆ ಭಿಕ್ಷಾಯೆಂದಾಕ್ಷಣವೆ, ಶರಣುಶರಣಾರ್ಥಿ, ಮಹಾಲಿಂಗಾರ್ಪಣಕ್ಕೆ ನಮಸ್ಕಾರವೆಂದು ಅಭಿವಂದಿಸಿ, ಆಸನವ ರಚಿಸಿದ ಮೇಲೆ ಮೂರ್ತಿಗೊಂಡ ತದನಂತರದೊಳು ಅವರ ಜಂಘೆಯಾಗೊಪ್ಪುವ ವೃತ್ತಸ್ಥಾನಪರಿಯಂತರವು, ಬಹುಗುಣದಲ್ಲಿ ತೊಳೆದಂಥ ನಿರ್ಮಾಲ್ಯವ ಧೂಳೋದಕದಿಂದ ಹೊಸದಾಗಿ ಕಟ್ಟಿದ ಆಲಯ ಬಾವಿ ಧನ ಧಾನ್ಯ ಕಾಯಿಪಲ್ಲೆ ಕಾಷ* ಮೊದಲಾದ ಜನನಿಜಠರದಿಂದುದಯವಾದ ಶಿಶುವಿಗೆ, ಲಿಂಗಾಂಗ ಮುಂತಾದ ಹೊಸ ಅರುವೆ ಆಭರಣ, ದಗ್ಧದ್ರವ್ಯ ಕಡೆಯಾದವಕ್ಕೆ ಸಂಪ್ರೋಕ್ಷಿಸಿ, ಪವಿತ್ರವೆನಿಸಿ, ಆಸೆ ಆಮಿಷ ರೋಷಾದಿಗಳಿಲ್ಲದಾಚರಿಸುವುದೆ ನಿರವಯಪ್ರಭು ಮಹಾಂತನಾಚಾರ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ