ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಡೆವ ಕಾಲು, ಆನುವ, ಕೈ, ಬೇಡುವ ಬಾಯಿ, ಸರ್ವವನೊಡಗೂಡುವ ಮನವುಡಗಿ, ಘನಲಿಂಗದಲ್ಲಿ ತಲ್ಲೀಯವಾದವನಂಗ, ಮರುಳು ಕಂಡ ಕನಸಿನಂತೆ, ಮೂಗನ ಕಾವ್ಯದಂತೆ, ಜಲಲಿಪಿಯಂತೆ, ಉರಿಯ ಧೂಮದಂತೆ, ಇದಾರಿಗೂ ಆಸಾಧ್ಯ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ನಿಃಕಲನ ನಿಜ ಬೆಲ್ಲ ಬೇವಾಗಬೇಕು, ಬೇವು ಬೆಲ್ಲವಾಗಬೇಕು. ಸೊಲ್ಲು ಸೊಲ್ಲಿಂಗೆ ಕ್ರಮವ ಬಲ್ಲವನ ಮುಟ್ಟಬೇಕು. ಇದು ಎಲ್ಲರ ಬಳಸಿಪ್ಪ ಕಲ್ಲಿಯ ರಜ್ಜು. ಬಲ್ಲವರ ಮುನ್ನುಡಿಗೆ ಗುಣಜ್ಞರ ಭಾವ ಎಲ್ಲಕ್ಕೂ ಸರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ನಾನಾ ಭವಂಗಳಿಂದ ಬಂದವರ, ಅಂಡಪಿಂಡದ ಸಂದಣಿಯಲ್ಲಿ ಬಂದವರ, ಇವ ಹಿಂಗಿದರೆಂದಡೆ ಲಿಂಗಸಂಗಕ್ಕೆ ದೂರ. ದ್ವಂದ್ವದಲ್ಲಿ ಸಂಗೀತರಾದೆನೆಂದಡೆ ಮಂಗಳಮಯ ಚಿತ್ತ; ಅನಂಗವಿರೋಧಿಗೆ ದೂರ. ಹಿಡಿದಡೆ ಭಂಗ, ಹಿಡಿಯದಿದ್ದಡೆ ತೊಡಕು. ಇದರ ಬಿಡುಗಡೆಯ ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ನೆನಹಿನ ಭಾವಕ್ಕೆ ಈ ಭವ; ಮನಸಿನ ಮೋಹವೆಲ್ಲ ಸತಿ; ಆಸೆಯೆ ತನ್ನ ಸುತ್ತಿಪ್ಪ ಭವಪಾಶದ ಹೇಳಿಗೆ. ತನ್ನಲ್ಲಿ ತೋರುತಿಪ್ಪ ತಥ್ಯಮಿಥ್ಯವೆ ಕೂರಲಗು. ಬೇರೊಂದರಸಲೇಕೆ ಸಂಸಾರವ? ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ