ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತೂತಿಗೆ ಬಹವರ ಶುದ್ಧಿಯ ಮಾತು, ಅದೇತರ ವೇದ? ಅದೇತರ ಶಾಸ್ತ್ರ? ಅದೇತರ ಆಗಮಯುಕ್ತಿ? ಪೂರ್ವ ಅಪರವೆಂಬ ತೂತಿನ ಭೇದವ ಮುಚ್ಚಿ ಆತನನರಿತಲ್ಲಿ ಸಕಲ ಭ್ರಾಂತು ನಿರಸನ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತೊಡೆಯಲ್ಲಿ ಸರಮುದ್ರೆ, ಜಡೆಯಲ್ಲಿ ಸರಮುದ್ರೆ ಉಡಿಯಲ್ಲಿ ಲಿಂಗಮುದ್ರೆ. ಇದರ ಒಡಗೂಡುವ ತೆರನಾವುದು? ಬಿಡು ಸಾಕು, ನಿನಗೆ ಇವು ಒಡವೆಯಲ್ಲ. ನಿನ್ನಿಡಿಗೆರಗುವೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತೃಣ ಮುನಿದು ತ್ರಿಣಯನ ಹೆಡಗುಡಿಯ ಕಟ್ಟುವಾಗ, ಹಣೆಯ ಬೆಂಕಿ ಎಲ್ಲಿ ಅಡಗಿತ್ತೆಂದರಿಯೆ, ಕಡುಗಲಿಗಳೆಲ್ಲರೂ ಉಡುವಿನ ಕೈಯಲ್ಲಿ ಸಾವಾಗ, ಉಡಿಯ ಕೈದು ಎಲ್ಲಿ ಉಡುಗಿದವೆಂದರಿಯೆ. ಒಕ್ಕುಡಿತೆಯಲ್ಲಿ ಅಡಗಿತ್ತು ಸಮುದ್ರ, ಕೆರೆ ತುಂಬಿ ತೊರೆ ಒಡೆಯಿತ್ತು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತೂತಿಂಗೆ ತೂತು ಸರಿ, ಮಾತಿಂಗೆ ಮಾತು ಸರಿ. ನಿಮ್ಮ ಮಾಟಕೂಟಕ್ಕೆ ಎನ್ನ ಆಟ ಸರಿ. ಬಹು ರಾಟೆಯ ಹಿಡಿದು ತಿರಹುವಳ ತೂತೇತಕ್ಕೆ ಬಾತೆ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತಳದಿ ಬಟುವು ಮೇಲೆ ಗೋಮುಖದೊಳಗೆ ಶಿವದೇವನಾರೆಂದರಿಯೆ. ಇದು ಹೊರಹೊಮ್ಮಿಯಲ್ಲದೆ ಎನ್ನ ಮನವರಿಯದು. ಎಲ್ಲರ ಇಷ್ಟಕ್ಕೆ ಕಣ್ಣು ಕೈ ಬಾಯಿ ಮುಖ ಕಾಲು ಇದು ನುಣ್ಣನಿದೆ. ಇದ ಚೆನ್ನಾಗಿ ಹೇಳು. ಆ ಎನ್ನ ಕೈಯಲ್ಲಿ ಕೊಟ್ಟ ಮುನೈದು ನಿನ್ನ ಗನ್ನ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತಿತ್ತಿಯ ಸೂಯಲು ಅದೆತ್ತಣಿಂದ ಬಂದ ವಾಯ? ತುಂಬುವಾನಂದ ಸೂಸುವ ಚೆಂದ, ಬೆಂಬಳಿ ಆರೆಂದರಿ. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತಾ ಹೊಂದುವಾಗ ಕೈದು ಬಾಯೆಂದು ಕರೆದುದುಂಟೆ? ತಡಿಯಲ್ಲಿದ್ದು ಮಡುವಿನಲ್ಲಿ ಬೀಳುವಾಗ ಆ ಮಡು ಒಡಗೂಡುವ ಬಾಯೆಂದು ಕರೆಯಿತ್ತೆ? ತಮವಡಸಿದ ನಿಳಯಕ್ಕೆ ಕರೆಯಿತ್ತೆ ಜ್ಯೋತಿಯ? ನೀ ಬಂದ ಮಣಿಹಕ್ಕೆ ಎನ್ನ ಇರಲೀಸೆಯೆಂದು ಅಸ್ಮಿಕದಲ್ಲಿ ಆತುರವೈರಿ ಮಾರೇಶ್ವರಾ ನುಡಿದ.
--------------
ನಗೆಯ ಮಾರಿತಂದೆ
ತನ್ನ ಹೊಟ್ಟೆ ತುಂಬಿಯಲ್ಲದ ತೃಪ್ತಿಯಿಲ್ಲ, ಭವದ ತೊಟ್ಟ ಹರಿದಲ್ಲದೆ ನಿತ್ಯನಲ್ಲ. ವಿಕಾರದ ಕಟ್ಟು ಮೆಟ್ಟ ನಿತ್ತರಿಸಿಯಲ್ಲದೆ ವಿರಕ್ತನಲ್ಲ. ಇವನರಿಯದೆ ವ್ಯರ್ಥನಾಗಿ ತಿರುಗುವ ಉನ್ಮತ್ತಂಗೆ ಸತ್ಯದ ಸುದ್ದಿಯೇಕೆ? ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತನ್ನಯ ಇರವ ತಾನರಿಯದೆ, ಇದಿರಿಂಗೆ ಭಿನ್ನ ಬೋಧೆಯ ಹೇಳುವವನ ಇರವು, ಸರಧಿಯಲ್ಲಿ ಹೋಹ ಲಘು ಅನ್ಯಭಿನ್ನವಾದಂತೆ. ಇವರು ಗನ್ನದ ಗಾಂಭೀರವ ನುಡಿವುದು ಅನ್ಯಾಯವೆ? ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ