ಅಥವಾ

ಒಟ್ಟು 20 ಕಡೆಗಳಲ್ಲಿ , 14 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು, ದರ್ಪದಷ್ಟವಾದಡೆಯೂ ಸಾಯರು ನಿಶ್ಯಂಕಿತರಾದವರು. ಕೂಡಲಸಂಗಮದೇವಯ್ಯಾ, ಶಂಕಿತಂಗೆ ಪ್ರಸಾದ ಸಿಂಗಿ, ಕಾಳಕೂಟವಿಷವು.
--------------
ಬಸವಣ್ಣ
ಸ್ಥಾಣುನಿನ ರಜ್ಜು, ಮೀರಿ ಎಯ್ದದೆ ಆಡಿ, ತನ್ನಯ ಸ್ಥಾನಕ್ಕೆ ಬಹಂತೆ, ವಸ್ತುವಿನ ಗೊತ್ತಿನಿಂದ ಕಟ್ಟು ಮೀರಲಿಲ್ಲವಾಗಿ, ಐಘಟದೂರ ರಾಮೇಶ್ವರಲಿಂಗದಲ್ಲಿಗೆ ಎಯ್ದುವ ತೆರ.
--------------
ಮೆರೆಮಿಂಡಯ್ಯ
ಅರಿವ ಮನ ಏಕವಾಗಿಯಲ್ಲದೆ, ವಸ್ತುವನೊಡಗೂಡಬಾರದು. ಹುರಿ ರಜ್ಜು ಒಂದೆ ಗಡಣದಲ್ಲಿಯಲ್ಲದೆ ಎಡಬಲಕ್ಕಿಲ್ಲ.
--------------
ಮೋಳಿಗೆ ಮಾರಯ್ಯ
ಕರ್ಮವ ನುಂಗಿತ್ತು ಹಾಹೆ, ಹಾಹೆಯ ನುಂಗಿತ್ತು ರಜ್ಜು, ರಜ್ಜುವ ನುಂಗಿತ್ತು ವಿದ್ಯೆ, ವಿದ್ಯೆಯ ನುಂಗಿತ್ತು ಕಳೆ, ಕಳೆಯ ನುಂಗಿತ್ತು ಬೆಳಗು, ಬೆಳಗ ನುಂಗಿತ್ತು ನಾದ, ನಾದವ ನುಂಗಿತ್ತು ಶೂನ್ಯ, ಶೂನ್ಯವ ನುಂಗಿತ್ತು ಮಹಾಶೂನ್ಯ, ಮಹಾಶೂನ್ಯವ ನುಂಗಿತ್ತು ನಿರಾಳ. ಆ ನಿರಾಳದಲ್ಲಿ ನಿಂದು ನಿಶ್ಚಿಂತವಾಸಿಯಾಗಿದ್ದೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮಲ್ಲಿ ಅವಿರಳನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಸ್ಥಾಣು ನರನೆಂದು, ರಜ್ಜು ಸರ್ಪನೆಂದು, ಸ್ಫಟಿಕದ ಘಟದಲ್ಲಿ ನಿಂದ ಗಜ ದಿಟವೆಂದು ನಿಬದ್ಧಿಸಿ ನೋಡಲಿಕ್ಕಾಗಿ, ಸಂದೇಹ ನಿಂದಲ್ಲಿ ಮುನ್ನಿನಂದವೆ ಆ ನಿಜಗುಣ ? ಈ ಸಂದೇಹ ನಿವೃತ್ತಿಯಾದಲ್ಲಿ ಇಷ್ಟ ಪ್ರಾಣಲಿಂಗವೆಂಬ ಉಭಯದ ದೃಷ್ಟ ಒಂದೆ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಆವ ಬಗೆ ಭಾವ ಬಲ್ಲತನ ಅಳವಟ್ಟಲ್ಲಿ ರಾಗವಿರಾಗವೆಂಬುದಿಲ್ಲ. ಸುಖ ಸುಮ್ಮಾನ ರುಜೆ ರೋಗ ತಾಗು ನಿರೋಧ ಬಂದಲ್ಲಿ ಶೋಕ ಮೋಹಾದಿಗಳು ವರ್ತಿಸಿದಲ್ಲಿ ಜ್ಯೋತಿಯ ಬುಡದಂತೆ; ರಜ್ಜು ತೈಲ ಅಗ್ನಿ ಉಳ್ಳನ್ನಕ್ಕ ಉರಿದು ಆ ಬುಡ ಹೊದ್ದದಂತೆ. ಈ ಸಂಸಾರದ ಬುಡದಲ್ಲಿ ನಾನಾ ವಿಕಾರತ್ರಯದ ಗುಣದಲ್ಲಿ ನೀರಿನೊಳಗಿರ್ದು ಈಸುವನಂತೆ ಬಂಧ ಮೋಕ್ಷ ಕರ್ಮಂಗಳಲ್ಲಿ ದ್ವಂದ್ವಿತನಲ್ಲದೆ, ನಿಂದ ನಿಜೈಕ್ಯಂಗೆ ಹಿಂದು ಮುಂದೆಂಬ ಬಂಧವಿಲ್ಲ. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ-ಲಿಂಗವಾದವಂಗೆ.
--------------
ಗೋರಕ್ಷ / ಗೋರಖನಾಥ
ಮಣಿಯ ವೆಜ್ಜದಲ್ಲಿ ಎಯ್ದುವ ರಜ್ಜು, ಮೊನೆ ಮಣಿದಲ್ಲಿ ನಿಂದಿತ್ತು. ಅದರಿರವು ಲಕ್ಷಿಸುವ ಲಕ್ಷ್ಯದಲ್ಲಿ ಅಲಕ್ಷ್ಯಮಯ ಅಭಿಮುಖವಾಗಲಾಗಿಸಿಕ್ಕಿತ್ತು, ಮಾಡುವ ಸತ್ಕ್ರೀ ವಸ್ತುವ ಮುಟ್ಟಲಿಲ್ಲದೆ ಇಂತೀ ಯುಗಳ ನಾಮವಳಿದು ಲಕ್ಷ್ಯಅಲಕ್ಷ್ಯಕ್ಕೆ ಬೆಚ್ಚಂತಿರಬೇಕು. ಬೆಸುಗೆಯ ನಡುವೆ ಬೆಳಗುತ್ತದೆ, ಸದಾಶಿವಮೂರ್ತಿಲಿಂಗ.
--------------
ಅರಿವಿನ ಮಾರಿತಂದೆ
ಸಾವಿರದಲ್ಲಿ ಒಂದು ರಜ್ಜು ಹರಿದಡೆ, ಅದ ಸಾಗಿಸಿ ಕಡೆಹಾಸಬೇಕಲ್ಲದೆ, ಗೈದು ಬಿಟ್ಟದೆ, ಒಂದರ ಹಿಂದೊಂದಳಿಯಿತ್ತು ಆ ಅಚ್ಚು. ಬಂದುದನರಿದು ಮಾಡುವ ಭಕ್ತನ ದ್ವಂದ್ವದೊಳಗೊಂದು ತಪ್ಪಿದಡೆ, ಅವ ಹಿಂದುಳಿದನೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
`ಸರ್ವಂ ಶಿವಮಯಂ ಜಗತ್' ಎಂಬ ವಾಕ್ಯವನರಿಯದೆ ಹೋಗರಾ, ಮನವೆ. `ಪಂಚತತ್ವರೂಪಾಯ' ಎಂಬ ಶ್ರ್ಕುವಾಕ್ಯವ ಮರೆದೆಯಲ್ಲಾ, ಮನವೆ. `ಂಗಮದ್ಯೇ ಜಗತ್ಸರ್ವಂ' ಎಂಬ ಮಹಾವಾಕ್ಯವ ಮರೆದೆಯಲ್ಲಾ, ಮನವೆ. ರಜ್ಜು ಸರ್ಪ ನ್ಯಾಯ-ರಜ್ಜುವ ಸರ್ಪವೆಂದು ನಂಬಿ, ಕಪಿಲಸಿದ್ಧಮಲ್ಲಿಕಾರ್ಜುನಂಗೆ ಬೇರೆಯಾದೆಯಲ್ಲಾ, ಮನವೆ
--------------
ಸಿದ್ಧರಾಮೇಶ್ವರ
ಜಲದಲ್ಲಿ ಚಂದ್ರನಿಲ್ಲ, ಜಲವೆಲ್ಲ ಮಾಯಾತ್ಮಕ. ವಸ್ತುವಲ್ಲ; ವಸ್ತ್ವಾತ್ಮಕ ಮಾಯೆಯಲ್ಲ. ಉಪಾಧಿಯಿಂದ ತೋರ್ಪುದೆಲ್ಲ ನಿಜವೆ ಅಯ್ಯಾ? ಸಾ*ಣು ಚೋರ ನ್ಯಾಯದಂತೆ, ಶುಕ್ತಿ ರಜತ ನ್ಯಾಯದಂತೆ, ರಜ್ಜು ಸರ್ಪ ನ್ಯಾಯದಂತೆ, ಅಧ್ಯಾರೋಪವಾದ ಅವಿದ್ಯೆಯಲ್ಲಿ ಲೇಸುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ರಜ್ಜು ರಸ ಕೂಡಿ ಅಗ್ನಿ ಮುಟ್ಟಿ ಉರಿದಲ್ಲಿ, ಅದೇತರ ಹೊದ್ದಿಗೆಯ ಬೆಳಗು ? ರಜ್ಜು, ರಸದಿಂದವೋ ? ಅಗ್ನಿಯ ಭಾವದಿಂದವೋ ? ಈ ಮೂರರ ಹೊಲಬಿನ ಹೊದ್ದಿಕೆಯಲ್ಲಿ ಬೆಳಗುವ ಪ್ರಜ್ವಲಿತ ಅನಲನ ಕೂಡುವಿನೊಳಗಾಯಿತ್ತು. ಕಾಯದ ಕರ್ಮದ ಜ್ಞಾನದಿಂದ ಕಂಡೆಹೆನೆಂದಡೆ, ನಾಮವಿಲ್ಲದ ರೂಪು, ಭಾವದಿಂದ ಅರಿವ ಠಾವಾವುದು ? ಒಂದರಿಂದ ಒಂದ ಕಂಡೆಹೆನೆಂಬ ಸಂದೇಹ, ಇನ್ನೆಂದಿಗೆ ಹರಿಗು ? ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.
--------------
ವೀರ ಗೊಲ್ಲಾಳ/ಕಾಟಕೋಟ
ರಜ್ಜು ಸ್ಥಾಣು ಶಂಕೆ ಹರಿದಲ್ಲದೆ ಸಂದೇಹ ಬಿಡದು. ಅರಿವು ಮರವೆ ಹೆರೆಹಿಂಗಿಯಲ್ಲದೆ ಬೇರೊಂದರಿಯಲಿಲ್ಲ. ಭೇದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ನಿರಿಂದ್ರಿಯನಾದ ಶಿವನು ತಾನೇ ದೇವದೇಹಿಕ ಭಕ್ತನಾಗಿ `ಅನ್ಯಪೂಜಾವಿನಿರ್ಮುಕ್ತೋ ಭಕ್ತೋ ಜಂಗಮಪೂಜಕಃ' ಅನ್ಯಪೂಜೆಯಂ ಬಿಟ್ಟು ಜಂಗಮಲಿಂಗವನೆ ಪೂಜಿಸುವಂಥ ಭಕ್ತ ಲಿಂಗೇಂದ್ರಿಯ ಮುಖದಿಂದವೇ ಸಕಲಭೋಗಂಗಳ ಭೋಗಿಸುವನು. ಅದೆಂತೆಂದಡೆ: ಜ್ಯೋತಿಯ ಮುಖದಲ್ಲಿ ರಜ್ಜು ತೈಲವನವಗ್ರಹಿಸುವಂತೆ, ಸಕಲದ್ರವ್ಯಂಗಳ ಅಗ್ನಿಯ ಮುಖದಲ್ಲಿ ನಿರ್ಜರರು ತೃಪ್ತಿಯನೆಯ್ದುವಂತೆ, ಸದ್ಬಕ್ತರ ಹೃದಯದಲ್ಲಿ ತೃಪ್ತಿಯನೆಯ್ದಿಪ್ಪನು ಶಿವನು. ಇದು ಕಾರಣ ಶಿವಭಕ್ತನಿರ್ದುದೆ ಅವಿಮುಕ್ತಕ್ಷೇತ್ರ. ಆತನ ಶಿರವೆ ಶ್ರೀಪರ್ವತ, ಭಾಳವೇ ಕೇತಾರ, ಭ್ರೂಮಧ್ಯವೇ ವಾರಣಾಸಿ, ನೇತ್ರವೇ ಪ್ರಯಾಗ, ಸರ್ವೇಂದ್ರಿಯಂಗಳೇ ಸರ್ವತೀರ್ಥಂಗಳು, ಪಾದವೇ ಅಷ್ಟಾಷಷಿ* ಕ್ಷೇತ್ರಂಗಳು, ಇಂತಪ್ಪ ಪವಿತ್ರಗಾತ್ರನ ಕಾಯವೇ ಕೈಲಾಸ. ಇಂತಪ್ಪ ಸದ್ಭಕ್ತನನೆನಗೆ ತೋರಿಸಿ ಬದುಕಿಸಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನಿಃಕಲನ ನಿಜ ಬೆಲ್ಲ ಬೇವಾಗಬೇಕು, ಬೇವು ಬೆಲ್ಲವಾಗಬೇಕು. ಸೊಲ್ಲು ಸೊಲ್ಲಿಂಗೆ ಕ್ರಮವ ಬಲ್ಲವನ ಮುಟ್ಟಬೇಕು. ಇದು ಎಲ್ಲರ ಬಳಸಿಪ್ಪ ಕಲ್ಲಿಯ ರಜ್ಜು. ಬಲ್ಲವರ ಮುನ್ನುಡಿಗೆ ಗುಣಜ್ಞರ ಭಾವ ಎಲ್ಲಕ್ಕೂ ಸರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ದೇಹದ ಕಲೆಯನರಿವನ್ನಬರ ಇಷ್ಟಲಿಂಗ ಸಂಬಂಧಿಯಲ್ಲ. ಭಾವದ ಭ್ರಮೆ ಉಳ್ಳನ್ನಕ್ಕ ಭಾವಲಿಂಗ ಸಂಬಂಧಿಯಲ್ಲ. ಪ್ರಾಣ ಪ್ರಳಯವನರಿವನ್ನಬರ ಪ್ರಾಣಲಿಂಗ ಸಂಬಂಧಿಯಲ್ಲ. ಭಾವ ಇಷ್ಟದಲ್ಲಿ ನಿಂದು, ಇಷ್ಟಕ್ಕೆ ಭಾವ ಚೇತನವಾಗಿ ರಜ್ಜು ತೈಲವ ಆಗ್ನಿಗೆ bs್ಞೀದಿಸಿಕೊಡುವಂತೆ, ಇಷ್ಟಭಾವದ ಸತ್ವ, ಆ ಉಭಯನಾಧರಿಸಿ ನಿಂದ ಒಡಲು ಸದ್ಭಾವವಂತನ ಕ್ರೀ. ಈ ಮೂರು ಏಕವಾಗಿ ವೇಧಿಸಿ, ಉದಯಿಸಿ ತೋರುವ ಬೆಳಗು, ಆ ಕಳೆಯನೊಳಕೊಂಡಲ್ಲಿ, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->