ಒ ಪದದಿಂದ ಪ್ರಾರಂಭವಾಗುವ ವಚನಗಳು:
ಒಡಲು ಒಡವೆ ಧರೆ ನಿನಗಾಯಿತ್ತೆಂದುಉಣಲೊಲ್ಲದಿಪ್ಪ ಮರುಳೆ ಕೇಳಾ!ಅಡವಿಯನೆ ಕೆಳೆಗೊಂಡು ನೆಲದೊಳಗೆ ಬೈಚಿಟ್ಟು.ಹೊಲಬುದಪ್ಪಿ ಭೂತ ಕೊಡಲೊಲ್ಲದವೆಯೊ.ಹಾಗಕ್ಕೆ ಹಾಗವ ಗಳಿಸಿ ಆಗಾಯಿತ್ತೆಂದುಉಣಲೊಲ್ಲದಿಪ್ಪ ಮರುಳೆ ಕೇಳಾ!ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿಗಾವುದಿ ಮಾಚಯ್ಯ ಹೇಳಿದುದ ಕೇಳು ಮಾನವಾ.