ಶ ಪದದಿಂದ ಪ್ರಾರಂಭವಾಗುವ ವಚನಗಳು:
ಶಿಲೆ ಕಮ್ಮಾರನ ಹಂಗು,ಮಾತು ಮನಸ್ಸಿನ ಹಂಗು,ಮನಸ್ಸು ಆಕಾಶದ ಹಂಗು,ಆಕಾಶ ಬಯಲ ಹಂಗು.ಕುರುಹುವಿಡಿದು ಇನ್ನೇತರಿಂದರಿವೆ?ಅರಿವುದಕ್ಕೆ ಸ್ವಯಂಭುವಿಲ್ಲ,ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯಹೇಳಿದುದೆ ದಿಟವೆಂಬೆ.