ಪ ಪದದಿಂದ ಪ್ರಾರಂಭವಾಗುವ ವಚನಗಳು:
ಪಶು ಸಾವುತ್ತ ತನ್ನ ಶಿಶುವಿಂಗೆ ಏನ ಗಳಿಸಿಕೊಟ್ಟಿತ್ತು?ಪಿಂಡ ಹುಟ್ಟುವಾಗ ಅದಕ್ಕೆ ಸಂಚಿತ ಪ್ರಾರಬ್ಧ ಆಗಾಮಿ ತಪ್ಪದೆಂದೆ.ಆರು ಸತ್ತರೂ ಲೇಸಿಗರಿಲ್ಲ;ತಮ್ಮ ತಮ್ಮಷ್ಟಕ್ಕೆ ಲೇಸಿಗರೆಲ್ಲರು.ಇದು ತಪ್ಪದು, ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.