ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಸುಗಾಯವಡೆದವನಂತೆ ನೋವುಣ್ಣದೆ, ಸತ್ಕಿ ್ರೀವಂತನಂತೆ ಸಂದೇಹವಿಲ್ಲದೆ, ಖಳನಿಚ್ಚಟನಂತೆ ಆತ್ಮಕ್ಕೆ ಸಂದು ಸಂಶಯವಿಲ್ಲದೆ, ನೆರೆ ಅರಿದವನಂತೆ ಮರವೆಯ ಕುರುಹಿಗೆ ಬಾರೆದ, ಲಿಂಗದಲ್ಲಿ ಕರಿಗೊಂಡವನಂತೆ ಕೊಟ್ಟಿಹೆ ಕೊಂಡೆಹೆನೆಂಬ ಸೂತಕವಿಲ್ಲದೆ, ಬೊಮ್ಮವನರಿದವನಂತೆ ಅವರಿವರಲ್ಲಿ ಸುಮ್ಮಾನದ ಸುಖವ ನುಡಿಯದೆ, ಘಟಕರ್ಮ ಯೋಗಿಯಂತೆ ಆ ದೇಹ ಇಂದ್ರಿಯಂಗಳಿಲ್ಲದೆ, ಲಿಂಗಸಂಗಿಯಂತೆ ಬಾವಸರ್ವರ ಸಂಗ ಮಾಡದೆ ಇಂತೀ ಸರ್ವಗುಣಸಂಪನ್ನ ನವಬ್ರಹ್ಮಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 52 ||
--------------
ದಾಸೋಹದ ಸಂಗಣ್ಣ
ನೋಡುವರೆಲ್ಲರು ಆಡಬಲ್ಲರೆ? ಮಾತನಾಡುವರೆಲ್ಲರು ಲಿಂಗಾಂಗಯೋಗ ಬಲ್ಲರೆ? ಸಾಧನೆಯ ಮಾಡುವ ಬಾಲರೆಲ್ಲರೂ ಕಳನಹೊಕ್ಕು ಕಾದಬಲ್ಲರೆ? ಈ ಮಾತಿನ ಮಾಲೆಯ ಸಂಸಾರದ ತೂತ ಯೋಗಿಗಳೆಲ್ಲರೂ ಲಿಂಗಾಂಗ ನಿಹಿತ ಯೋಗವ ಬಲ್ಲರೆ? ಶಂಭುವಿನಿಂದಿತ್ತ ಸ್ವಯಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 54 ||
--------------
ದಾಸೋಹದ ಸಂಗಣ್ಣ
ನಾ ನೀನೆಂಬನ್ನಕ್ಕ ಕ್ರೀಯ ಮಾಡುತ್ತಿರಬೇಕು. ನಾನೀನೆಂಬುದಳಿದ ಮತ್ತೆಅದು ಅವಿರಳ ಸ್ವರೂಪು; ನಾಮ ಶೂನ್ಯ ನಾಸ್ತಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 53 ||
--------------
ದಾಸೋಹದ ಸಂಗಣ್ಣ