ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬರಡು ಕರೆವಾಗ ಈಯಿತ್ತೆ? ಆ ಕೊರಡು ಚಿಗುರುವಲ್ಲಿ ಹುಟ್ಟಿತ್ತೆ? ಆಗ ತೃಣ ನುಡಿವಲ್ಲಿ ಆತ್ಮ ಜೀವಿಸಿತ್ತೆ? ಆಗ ಕಾಷ್ಠವೇಷವೆದ್ದು ನಡೆವಲ್ಲಿ ಅರಿವು ಕರಿಗೊಂಡಿತ್ತೆ? ಇಂತಿವು ವಿಶ್ವಾಸದ ಹಾಹೆ. ಗುರುಚರದಲ್ಲಿ ಗುಣ, ಶಿವಲಿಂಗ ರೂಪಿನಲ್ಲಿ ಸಲಕ್ಷಣವನರಸಿದಲ್ಲಿಯೆ ಹೋಯಿತ್ತು ಭಕ್ತಿ. ಈ ಗುಣ ತಪ್ಪದೆಂದು ಸಾರಿತ್ತು ಡಂಗುರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 61 ||
--------------
ದಾಸೋಹದ ಸಂಗಣ್ಣ
ಬೇರಿನ ಬಣ್ಣ ನೋಡ ನೋಡಲಿಕ್ಕೆ ಹಬೆಗೆ ಹಾರುವ ತೆರದಂತೆ ಪಂಕದ ಸಾರ ಕಿರಣಕ್ಕೆ ಏವಂಕದಲ್ಲಿಯೆ ಅಡಗಿದಂತೆ ಈ ಘಟ ಸಂಕೇತದಲ್ಲಿದ್ದ ಆತ್ಮನು ಆ ಗುಣ ಏವಂಕದಲ್ಲಿಯೆ ಅಡಗಿದ ಮತ್ತೆ ಠವಣೆಗೆ ಸಂದುಂಟೆ? ಇದು ಅಂಗಲಿಂಗ ಸಂಬಂಧ, ಲಿಂಗಾಂಗ ಸಂಯೋಗ. ಶಂಭುವಿನಿಂದತ್ತ ಸ್ವಯಂಭುವಿನಿಂದಿತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 62 ||
--------------
ದಾಸೋಹದ ಸಂಗಣ್ಣ
ಬೇವಿನ ಮರನನೇರಿ ಬೆಲ್ಲವ ಮೆದ್ದಡೆ ಕಹಿಯಾದುದುಂಟೆ? ಕಾಳೋರಗನ ಹೆಡೆಯ ಮೆಟ್ಟಿ ಹಾಲ ಕುಡಿದಡೆ ಹಾಲಾಹಲ ಒಡಲನೇರಿದುದುಂಟೆ? ಸಂಜೀವನದ ಫಲವ ಕಂಡು ಚಪ್ಪಿರಿದಲ್ಲಿ ಆತ್ಮಕ್ಕೆ ಸಲೆ ಸಂದುದುಂಟೆ? ಇಂತೀ ಅವಗುಣವನರಸದೆ ಗುಣಜ್ಞ ತಾನಾದ ಮತ್ತೆ ಅವಗುಣ ವೇಷದಲ್ಲಿ ಅಡಗಿತ್ತು, ಸದ್ಗುಣ ವಸ್ತುವಿನಲ್ಲಿ ಹೊದ್ದಿತ್ತು. ಇಂತೀ ಗುರುವಿನ ಇರವ ವಿಚಾರಿಸಿದಲ್ಲಿ ಭಕ್ತಿ ಹಾರಿತ್ತು, ಸತ್ಯ ಜಾರಿತ್ತು, ವಿರಕ್ತಿ ತೂರಿತ್ತು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 63 ||
--------------
ದಾಸೋಹದ ಸಂಗಣ್ಣ