ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ಥೂಲ ತನುವಿಂಗೆ ಶಿಲೆಯ ಮರೆಯಲ್ಲಿ ಎನ್ನ ಘಟದಲ್ಲಿ ಮೂರ್ತಿಗೊಂಡು ಬಾಹ್ಯಕ್ರೀ ಆರ್ಚನೆ ಪೂಜನೆಗಳಿಂದ ಶುದ್ಧತೆಯ ಮಾಡಿದೆ. ಸೂಕ್ಷ ್ಮ ತನುವಿಂಗೆ ಭಾವದ ಕೊನೆಯಲ್ಲಿ ಅರಿವಾಗಿ ಬಂದು ಪ್ರಕೃತಿ ಸಂಚಾರ ಮರವೆಯಿಂದ ಬಹ ತೆರನ ತೀರ್ಚಿ ಸರ್ವೇಂದ್ರಿಯಲ್ಲಿ ನೀ ನಿಂದು ಆ ಸೂಕ್ಷ ್ಮತನುವ ಶುದ್ಧವ ಮಾಡಿದೆ. ಕಾರಣತನುವಿಂಗೆ ಇಂದ್ರ ಮಹೇಂದ್ರ ಜಾಲದಂತೆ, ಮುರೀಚಿಕಾ ಜಲವಳಿಯತೆ, ವಿದ್ಯುಲ್ಲತೆಯ ಸಂಚದ ಶಂಕೆಯ ಬೆಳಗಿನಂತೆ ಸಷುಪ್ತಿಯಲ್ಲಿ ಮರವೆಯಿಂದ ಮಗ್ನನಾಗಲೀಸದೆ ಆ ಚಿತ್ತುವಿಗೆ ನೀ ಚಿತ್ತವಾಗಿ ಮೂರ್ಛೆಗೊಳಿಸದೆ ನೀನೆ ಮೂರ್ತಿಗೊಂಡೆಯಲ್ಲಾ! ಇಂತೀ ತ್ರಿವಿಧ ಸ್ವರೂಪಕ್ಕೆ ತ್ರಿವಿಧಾಂಗ ಭರಿತನಾಗಿ ತ್ರಿವಿದ ಸ್ವರೂಪ ನೀನಲಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 98 ||
--------------
ದಾಸೋಹದ ಸಂಗಣ್ಣ
ಸಂಚದ ಸರಾಗದಂತೆ, ಮಿಂಚಿನ ಕುಡಿವೆಳಗಿನ ಸಂಚಾರದಂತೆ, ಉರಿಯ ನಾಲಗೆಯ ದ್ರವದ ತರಂಗದಂತೆ, ಪನ್ನಗನ ಜಿಹ್ವೆಯ ನಿಳಿವಳಿಯಂತೆ, ಚಮತ್ಕಾರದ ಅಸಿಯ ಗುಣಮೊನೆಯಂತೆ, ಅಶ್ವಪರ್ಣದ ಅಗ್ರದ ಬಿಂದುವಿನ ಅಂದದಾತ್ಮನ ತಿಳಿದು, ಸರ್ವೇಂದ್ರಿಯದಲ್ಲಿ ಮುಂಚುವುದಕ್ಕೆ ಮುನ್ನವೆ ಆತ್ಮನ ಉಚಿತವನರಿದು, ರಸ ಬೆಂಕಿಯಲ್ಲಿ ಬೆರೆದಂತಾಗಬೇಕು; ಈ ಗುಣ ಸಾವಧಾನಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 91 ||
--------------
ದಾಸೋಹದ ಸಂಗಣ್ಣ
ಸರ್ವಾಂಗಲಿಂಗ ವ್ಯವಧಾನಿ ಎಂದು ಆತ್ಮಂಗೆ ಕಟ್ಟಮಾಡಿ, ಒಟ್ಟಾದ ತಿರುಗಿ ಮುಟ್ಟಿಹೆನೆನಬಹುದೆ? ಮತ್ತೆ ಮನಸೋತು ಮುಟ್ಟುವುದು ವಿಷಯವೊ? ನಿರ್ವಿಷಯವೊ? ಹೆಣ್ಣ ಹಿಡಿದಲ್ಲಿ ವಿಷಯ ವ್ಯಾಪಾರನಾಗಿ ಹೊನ್ನ ಹಿಡಿದಲ್ಲಿ ಸತಿ-ಸುತ ಸಕಲ ಸುಖಂಗಳಿಗೆ ಈಡೆಂದು ಅಂಡಿನ ಅಂಡಕ್ಕೆ ಹಾಕುತ್ತ, ಮಣ್ಣ ಹಿಡಿದಲ್ಲಿ ಅರೆ ಅಡಿಗಾಗಿ ಕಡಿದಾಡುತ್ತ ಆ ತೆರ ಅರಿಕೆಗೊಡಲುಂಟೆ? ಉನ್ಮತ್ತಂಗೆ ತನ್ನ ನುಡಿ ಸಸಿನವಲ್ಲದೆ ಸನ್ಮತಗುಂಟೆ ಮರವೆಯ ತೆರ? ಬಿಟ್ಟುದು ಹಿಡಿದೆನೆಂಬ ನಾಚಿಕೆ ತೋರದೆ, ದುಷ್ಟ ಜೀವವ ನೋಡಾ? ಅದು ನುಡಿಗೆಡೆಗಂಜದು, ಪುಡಿಪುಚ್ಚವಿಲ್ಲ, ಅವರ ಒಡಗೂಡಲಿಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 94 ||
--------------
ದಾಸೋಹದ ಸಂಗಣ್ಣ
ಸತ್ತು ಚಿತ್ತುವಿನಿಂದ, ಚಿತ್ತು ಆನಂದದಿಂದ, ತ್ರಿವಿಧ ಭೇದ ಮುಕ್ತಿಯ ಗೊತ್ತು, ಮುಕ್ತಿ ನಿರ್ಮುಕ್ತವಾದುದು ನಿಜವಸ್ತುವಿನ ಗೊತ್ತು; ಅದು ನಿಶ್ಚಯದ ಪದ. ಶಂಭುರಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 92 ||
--------------
ದಾಸೋಹದ ಸಂಗಣ್ಣ
ಸಹಪಂತಿಯಲ್ಲಿ ಗುರುಚರವಿರುತಿರಲಿಕ್ಕಾಗಿ ತನ್ನ ಗುರುವೆಂದು ಮುಂದಿದ್ದ ಪ್ರಸಾದವ ಬಿಟ್ಟು ಕೈವೊಡ್ಡಿ ಕೊಂಡಡೆ, ವಿಚಾರವಿಲ್ಲದೆ ಕೊಟ್ಟಡೆ, ಆ ಗುರುವಿಂಗೆ ಗುರುವಿಲ್ಲ, ಅವನಿಗೆ ಪ್ರಸಾದವಿಲ್ಲ. ಮುಂದೆ ಇದಿರಿಟ್ಟು ತೋರಿದನಾಗಿ ಎಲ್ಲಿಯೂ ನಾನೆ ಎಂದಲ್ಲಿ ಗುರುಸ್ಥಲ. ಅಲ್ಲಿ ಪರಿಪೂರ್ಣನಾಗಿಪ್ಪನು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 95 ||
--------------
ದಾಸೋಹದ ಸಂಗಣ್ಣ
ಸುಗಂಧದ ಅಂಗವಿದ್ದು ಕರಂಡದಲ್ಲಿ ಬಂಧಿಸಲಿಕ್ಕಾಗಿ, ಗಂಧ ನಿಂದಿತ್ತಲ್ಲದೆ, ವಾಯುವಿನ ಕೈಯ ಗಂಧವ ಕರಂಡದಲ್ಲಿ ಕೂಡಿ ಮುಚ್ಚಲಿಕ್ಕೆ ನಿಂದುದುಂಟೆ ಆ ಸುವಾಸನೆ? ಈ ಗುಣ ಲಿಂಗಾಂಗಿಯ ಸಂಗದ ಇರವು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 96 ||
--------------
ದಾಸೋಹದ ಸಂಗಣ್ಣ
ಸರ್ಪ ಮುಟ್ಟಿದಡೇನು ವಿಷ ತಪ್ಪಿದ ಮತ್ತೆ? ಲೌಕಿಕಿ ವರ್ತನವಾದಡೇನು ಚಿತ್ತ ವಸ್ತುವಿನಲ್ಲಿ ಮುಟ್ಟಿದ ಮತ್ತೆ? ತ್ರಿವಿಧವ ಮುಟ್ಟಿ ಪೂಜಿಸಿದಡೇನು ತ್ರಿವಿಧ ಮಲತ್ರಯಕ್ಕೆ ಕಚ್ಚಿ ಕಡಿದಾಡಿದ ಮತ್ತೆ? ಮಾತಿನ ಮಾಲೆಯಿಂದ ದ್ವೆ ೈತಾದ್ವೆ ೈತಂಗಳ ಎಷ್ಟು ನುಡಿದಡೇನು ಚಿತ್ತ ವಸ್ತುವಿನಲ್ಲಿ ನಿಹಿತವಿಲ್ಲದೆ ಮತ್ತೆ? ಇಂತಿವನರಿತು ಗುರುಕರಜಾತನಾದವಂಗೆ ಕರ್ತೃಭೃತ್ಯನೆಂಬ ಸೂತಕದ ಸುಳುಹಿಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 93 ||
--------------
ದಾಸೋಹದ ಸಂಗಣ್ಣ
ಸ್ಥೂಲತನುವ ಬಿಟ್ಟು ನಿನ್ನ ಕಂಡೆಹೆನೆಂದಡೆ ನಿನ್ನ ಪ್ರಮಾಣು ಕ್ರೀವಿಡಿದು ಅಂಗದಲ್ಲಿ ನಿಂದ ಕಾರಣ ಸೂಕ್ಷ ್ಮತನುವನೊಲ್ಲದೆ ನಿನ್ನ ಕಂಡೆಹೆನೆಂದಡೆ ನಿನ್ನ ಪ್ರಮಾಣು ಭಾವದ ಕೈಯಲ್ಲಿ ಅರ್ಪಿಸಿಕೊಂಬೆಯಾಗಿ. ಕಾರಣತನುವ ಹರಿದು ನಿನ್ನ ಕಂಡೆಹೆನೆಂದಡೆ ನಿನ್ನ ಪ್ರಮಾಣು ಚಿದಾದಿತ್ಯ ಚಿತ್ಪ್ರಕಾಶದ ಬೆಳಗಿನಲ್ಲಿ ಕಟ್ಟುವಡೆದೆಯಾಗಿ. ಇಂತೀ ಜಾಗ್ರದಲ್ಲಿ ಕ್ರೀವಂತನಾಗಿ, ಸ್ವಪ್ನದಲ್ಲಿ ಆತ್ಮಸ್ವರೂಪನಾಗಿ, ಸುಷುಪ್ತಿಯಲ್ಲಿ ಮೂರ್ಛೆಯಿಂದ ಅಮೂರ್ತಿಯಾಗಿ ವಿರಳಕ್ಕೆ ಅವಿರಳನಾಗಿ ಪರಿಪೂರ್ಣವಸ್ತು ನೀನಲಾ! ಶುಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 97 ||
--------------
ದಾಸೋಹದ ಸಂಗಣ್ಣ