ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಥಮ ಮೂರು, ಆಶ್ರಯ ನಾಲ್ಕು, ಸ್ಥಲವಾರು, ಯೋಗವೆಂಟು, ಸಂಯೋಗವೆರಡು, ವಿಯೋಗವೊಂದು, ವಿಭೇದವೆರಡು, ಭೇದವೊಂದು, ಅರಿಕೆಯೆರಡು ಅರಿದುದೊಂದು ಆಕಾಶ ಮೂರು ಅವಾಕಾಶವೆರಡು, ಮಹದಾಕಾಶ ನಾಲ್ಕು. ಇಂತಿವೆಲ್ಲವೂ ಮಹಾಪ್ರಕಾಶದ ಪ್ರಭೆ ಪ್ರಜ್ವಲವಾಗಿ ಉಭಯನಾಮರೂಪ ತಾಳ್ದು, ವಂಶ ಮೂರರಲ್ಲಿ ಅಳವಟ್ಟು ಸ್ಥಲವಾರರಲ್ಲಿ ಬೆಳೆದು, ಕುಳವೆಂಟರಲ್ಲಿ ಓಲೈಸಿ ಕುಳ ನಾಲ್ಕರಲ್ಲಿ ಒಕ್ಕಿ, ಫಲ ಮೂರರಲ್ಲಿ ಅಳೆದು ಹಗ ಒಂದರಲ್ಲಿ ತುಂಬಿತ್ತು. ಇಂತೀ ವಿವಿಧ ಸ್ಥಲಂಗಳ ಹೊಲಬನರಿತು ವರ್ತಕಕ್ಕೆ ಕ್ರೀ ಶುದ್ಧ, ಅರಿವಿಂಗೆ ಬಿಡುಗಡೆ ಶುದ್ಧ ಬಿಡುಗಡೆ ಎರಡು ಏಕವಾದಲ್ಲಿ ಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು. || 59 ||
--------------
ದಾಸೋಹದ ಸಂಗಣ್ಣ
ಪೃಥ್ವೀತತ್ವದಿಂದ ಭಕ್ತಿರೂಪು, ಅಪ್ಪು ತತ್ವದಿಂದ ಮಾಹೇಶ್ವರರೂಪು, ತೇಜ ತತ್ವದಿಂದ ಪ್ರಸಾದಿ ರೂಪು, ವಾಯು ತತ್ವದಿಂದ ಪ್ರಾಣಲಿಂಗಿ ರೂಪು, ಆಕಾಶ ತತ್ವದಿಂದ ಶರಣ ರೂಪು, ಇಂತೀ ಪಂಚತತ್ವವನವಗವಿಸಿ ಮಹದಾಕಾಶ ಅವಕಾಶವಾದುದು ಐಕ್ಯನ ಅಂತರಿಕ್ಷೆ. ನಿರ್ಮುಕ್ತ ಸ್ವಯಂಸ್ವಾನುಭಾವದಿಂದ ಸಾವಧಾನವನರಿವುದು ಷಟ್ಕರ್ಮನಾಶನ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು || 57 ||
--------------
ದಾಸೋಹದ ಸಂಗಣ್ಣ
ಪೃಥ್ವಿಯ ಅಂಶಿಕ ಶರೀರ ದರ್ಪಗೆಡುವುದ ಕಂಡು, ಅಪ್ಪುವಿನ ಅಂಶಿಕ ಶುಕ್ಲ ಶೋಣಿತ ಜಲ ಕುಪ್ಪಳಿಸುವುದ ಕಂಡು, ತೇಜದ ಅಂಶಿಕ ಅಗ್ನಿ ಡಾವರವಿಲ್ಲದುದ ಕಂಡು, ವಾಯುವಿನ ಅಂಶಿಕ ಸರ್ವಾಂಗದಲ್ಲಿ ವೇದಿಸದೆ ನಾಡಿಗಳಲ್ಲಿ ಭೇದಿಸದೆ ಆತ್ಮನು ಗಾಢವಿಲ್ಲದುದ ಕಂಡು, ಆಕಾಶವನವಗವಿಸುವ ಆಲಿಸೂತ್ರ ಓಸರಿಸುವುದ ಕಂಡು, ಮತ್ತಿನ್ನೇತರ ಅರಿವು? ಇಂತಿವು ದೃಷ್ಟವಿದ್ದಂತೆ ನಷ್ಟವನೆಯ್ದುವುದಕ್ಕೆ ಮುನ್ನವೆ, ತನ್ನಯ ಲಕ್ಷ ್ಯದ ಇಷ್ಟದಲ್ಲಿ ಚಿತ್ತವನನುಕರಿಸಿ ಸುಚಿತ್ತನಾದವ ಸಾವಧಾನಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 56 ||
--------------
ದಾಸೋಹದ ಸಂಗಣ್ಣ
ಪೃಥ್ವೀತತ್ವದೊಳಗಾದವೈದು, ಅಪ್ಪು ತತ್ವದೊಳಗಾದವೈದು, ತೇಜ ತತ್ವದೊಳಗಾದವೈದು, ವಾಯು ತತ್ವದೊಳಗಾದವೈದು, ಆಕಾಶತತ್ವ ದೊಳಗಾದವೈದು, ಇಂತೀ ಇಪ್ಪತ್ತೈದು ತತ್ವವನವಗವಿಸಿದ ಮೂಲತತ್ವವೈದು, ಇಂತೀ ಮೂವತ್ತಾಕ್ಕೆ ವಿಭೇದದಿಂದ ಸಾಧನೆಗೊಳಗಾದವಾರು. ಇಂತೀ ಮೂವತ್ತಾರು ತತ್ವಂಗಳ ನಿಶ್ಚೆ ೈಸಿ ಕಂಡು, ನಿತ್ಯಾನಿತ್ಯವ ತಿಳಿದು, ಭಕ್ತಿ ಜ್ಞಾನ ವೈರಾಗ್ಯಗಳೆಂಬಿವ ನಿಶ್ಚೆ ೈಸಿ, ಲಿಂಗ ನಿಜತತ್ವದಲ್ಲಿ ಆತ್ಮನ ಸಂWಟ್ಟವ ಮಾಡಿ, ಉಚಿತದ ಸಂದನರಿದು ಅಳಿವುದು ಸಾವಧಾನಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 58 ||
--------------
ದಾಸೋಹದ ಸಂಗಣ್ಣ
ಪಂಚಭೌತಿಕದಿಂದತ್ತ ಪಂಚಭೌತಿಕ ಒಳಗಾದುದರಿಂದಿತ್ತ, ಕುರುಹಿಲ್ಲದೆ ದೇವರೆನಿಸಿಕಂಡವರಾರಯ್ಯಾ? ಅಪೂರ್ವವಸ್ತುವ ಕಂಡೆಹೆನೆಂದಡೂ ಕಟ್ಟುವುದಕ್ಕೊಂದಂಗ, ಇರಿಸುವುದಕ್ಕೊಂದು ಆಶ್ರಯ. ಈ ಗುಣ ತೆರನನರಿಯಬೇಕು. ಅರಿವೆ ವಸ್ತು, ಕುರುಹಿಲ್ಲಾ ಎಂದು ನುಡಿದ ಬರುಬರ ಕಾಳ್ಗೆಡೆವರ ಅವರನೊಡಗೂಡ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 55 ||
--------------
ದಾಸೋಹದ ಸಂಗಣ್ಣ
ಪ್ರಮಾಣವ ಪ್ರಮಾಣಿಸಿದಲ್ಲಿ ತಪ್ಪದಿಪ್ಪೆ. ಅಪ್ರಮಾಣ ಅಗೋಚರವೆಂದಡೆ ಅತ್ಯತಿಷ*ದ್ದಶಾಂಗುಲನಾಗಿಪ್ಪೆ. ಪೂರ್ವಕ್ಕೆ ಭಾವಜ್ಞನಾಗಿ, ಉತ್ತರಕ್ಕೆ ತೊಟ್ಟುಬಿಟ್ಟು ಹಣ್ಣಿನಂತೆ ನಿಶ್ಚಯನಾಗಿಪ್ಪೆ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 101 ||
--------------
ದಾಸೋಹದ ಸಂಗಣ್ಣ
ಪ್ರಸಾದಕ್ಕೆಂದು ಮುಯ್ಯಾಂತು ಕೈವೊಡ್ಡಿ ಬಾಯಿದೆರೆವಲ್ಲಿ ಘೃತ ಪಳ ಮಧುರ ರಸ ಮೃಷ್ಟಾನ್ನವೆಂದು ಚಿತ್ತದಲ್ಲಿಕಲೆದೋರಿ, ಜಿಹ್ವೆಯ ಲಂಪಟಕ್ಕೆ ಕೈಯಾಂತು ಬಾಯಿಬಿಟ್ಟು ಕೊಂಡಡೆ, ಸಮ್ಮಗಾರನ ತಿತ್ತಿಯ ಪೋಷಣ ಪ್ರಸಾದಿಗೆ ನಿಶ್ಚಯವಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 60 ||
--------------
ದಾಸೋಹದ ಸಂಗಣ್ಣ