ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧೀರ, ಕೂರಲಗಿಂಗೆ ಹೆದರುವನೆ ? ಸಾರಧಿ ಸರ್ವಮಂತ್ರಕ್ಕಲಸುವಳೆ ? ಭಾರಿಯ ಜಾಣ, ಆರೈಕೆಗೊಳಗಹನೆ ? ಇವು ಮೀರಿ ಅರಿದ ಅರಿವು, ತ್ರಿವಿಧ ಹೋರಾಟಕ್ಕೆ ಒಡಲಪ್ಪುದೆ ? ಇದನರಿಯದ ಮುನ್ನವೆ ಅರಿದಾತಂಗೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಧೀರನೆಂದಡೆ ಇದಿರಾದವರ ಇರಿಯಬಹುದಲ್ಲದೆ, ತುಂಬಿದ ತೊರೆಯ ಹಾಯಬಹುದೆ ? ಮಾತಿನಲ್ಲಿ ಶ್ರೇಷ*ನಾದೆನೆಂದಡೆ, ಶಿವಶರಣರ ನೇತಿಗಳೆಯಬಹುದೆ? ಹಸುಳೆಗೆ ಗಲ್ಲವ ಕುಟ್ಟಿ ಹಾಲೆರೆದಡೆ, ಅದಾರಿಗೆ ಹಿತವೆಂಬುದನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ