ಅಥವಾ
(4) (6) (8) (1) (0) (0) (0) (0) (0) (0) (0) (0) (1) (0) ಅಂ (1) ಅಃ (1) (4) (0) (4) (0) (0) (0) (0) (1) (0) (0) (0) (0) (0) (0) (0) (1) (0) (1) (0) (2) (1) (1) (2) (2) (3) (0) (0) (0) (1) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇದರ ನಿರ್ವಚನ : ಬ್ರಹ್ಮೇಶ್ವರಿ ವಿಷ್ಣೇಶ್ವರಿ ರುದ್ರೇಶ್ವರಿ ಮಹೇಶ್ವರಿಯೆಂಬ ಆ ರುದ್ರಶಕ್ತಿಸಹ ಸಪ್ತವ್ಯಸನಗಳೆಂಬ ಮೆಟ್ಟನಿಕ್ಕಿ, ಪ್ರಣಮವೆಂಬ ವೀಣೆಯ ವಿಸ್ತರಿಸಿ, ಸಪ್ತಸ್ಥಾನದಲ್ಲಿ ಎಳೆಯಂ ಬಿಗಿದು, ಹಂಸ ಹಂಸವೆಂಬ ಬೆರಳಲ್ಲಿ ನುಡಿಸುತ್ತ ಗೊಹೇಶ್ವರನಾಳದಲ್ಲಿ ಮಹಾ ಮಹಾತ್ಮನೆಂಬ ವಚನವ ಪಾಡುತ್ತ ಉರಿಗೆಂಡದ ಕಣ್ಣತೆರೆದು, ವಕ್ರಂಗಳ ವಿಸರ್ಜಿಸಿ, ಕಂಗಳ ಮುಚ್ಚಿ, ಸದೈಶ್ವರಿಯ ಸರವಿಗೈದು ಪರಸ್ಥಾನದಲ್ಲಿ ಒಲದಾಡುತಿರ್ದ ಜೋಗಿಯ ಕಂಡು, ಸಾರಾಯ ಸಂತೋಷಮಂ ಮಾಡುತ್ತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇಷ್ಟಲಿಂಗವೆಂಬ ಭ್ರಾಂತಿಗೇಡಿಗಳು ನೀವು ಕೇಳಿರೋ ಇಷ್ಟಲಿಂಗದ ಪೂಜೆಯ ನಿಷೆ*ಯಲ್ಲಿ ಮಾಡಿದರೆ ಅಷ್ಟೈಶ್ವರ್ಯ ದೊರಕೊಂಬುದೇನಯ್ಯ? ಪ್ರಾಣಲಿಂಗದ ನೆಲೆಯನರಿತು ಪೂಜೆಯಂ ಮಾಡಲು ಸಕಲ ಭವಬಂಧನಗಳು ಬಿಟ್ಟು ಚತುರ್ವಿಧ ಫಲಂಗಳು ಆ ಶರಣನ ಬಟ್ಟೆಯ ಸೋಂಕಲೊಲ್ಲವು. ಇದು ಕಾರಣ ಅಂಗಸಂಗವಾಗಿರ್ದ ಪ್ರಾಣ ಬಿಟ್ಟುಹೋಗುವಾಗ ಅಂಗವೊಂದೆಸೆಯಾಗಿ ಪ್ರಾಣವೊಂದೆಸೆಯಾಗಿ ಬಿದ್ದು ಹೋಗುವುದ ಕಂಡು ನಾಚಿತ್ತು ಎನ್ನ ಮನವು. ಇದು ಕಾರಣ ಪ್ರಾಣಲಿಂಗದ ಸಂಬಂಧದ ಭೇದವ ನಮ್ಮ ಪೂವಾಚಾರ್ಯ ಸಂಗನಬಸವಣ್ಣನ ಸಂತತಿಗಳಿಗಲ್ಲದೆ ಉಳಿದಂಥ ತಾಮಸದೇಹಿಗಳಿಗೆ ಅರಿಯಬಾರದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಇಂದ್ರದಳದಲ್ಲಿ ಪುಣ್ಯ, ಅಗ್ನಿದಳದಲ್ಲಿ ಪಾಪ,
--------------
ಗುಹೇಶ್ವರಯ್ಯ
ಇನ್ನು ಗುರುಸ್ಥಲದ ವಚನ : ಗುರುಹೃದಯ ಚಿನ್ಮಯಯೆನಲಂಜುವೆನಯ್ಯ! ಗುರುವೆನ್ನ ಆತ್ಮದಿಂದ ಮೊಳೆಯದೋರಿದನಾಗಿ. ನಾನು ಪಾವನವೆಂಬೆನಯ್ಯ, ಎನ್ನ ಪಾಪಕಂಜುವೆನಯ್ಯ, ಆ ಗುರುವಿನ ಕರಸ್ಥಳದಿಂದ ಉದುಭವಿಸಿದೆನಾಗಿ. ಇಂತೀ ಉಭಯದ ಉತ್ಪತ್ಯ ಸಂಗನ ಶರಣ ಬಸವಣ್ಣನ ಸಂತತಿಗಳಿಲ್ಲದೆ ಶಬ್ದಪಾಠಕರಿಗೆ ಅರಿಯಬಾರದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇದಕ್ಕೆ ಸಾಕ್ಷಿ-ಶ್ಲೋಕ: ಅಷ್ಟವಿಧಾರ್ಚನಂ [ಕೃತ್ವಾ] ಅಷ್ಟಲಿಂಗಸ್ಯ ಪೂಜನಂ ಎಂದುದಾಗಿ, ಚಪಳೆ ಕೊಡನ ಹೊತ್ತು, ಕೈಯ ಮರದಿರ್ದಡೇನಯ್ಯಾ! ಆ ಚಿತ್ತ ಕೊಡನೊಳು ಜಡಿಗಿಡಿತವಾಗಿ ಇರದನ್ನಕ್ಕ? ಇದು ಕಾರಣ, ಪ್ರಾಣಲಿಂಗವನರಿದ ಶರಣರು ಇಷ್ಟಲಿಂಗದ ಕ್ರೀಯವನರಿ[ಯ]ದಿರ್ದರೇನಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ?
--------------
ಗುಹೇಶ್ವರಯ್ಯ
ಇನ್ನು ಭಕ್ತಸ್ಥಲದ ವಚನ: ಪೃಥ್ವಿಯ ಮೂಲವನಳಿದು ಅಪ್ಪುವಿನೊಳು ಕೂಡಬಲ್ಲರೆ ಭಕ್ತ. ಅಪ್ಪುವಿನ ಭಯವ ನಿಲ್ಲಿಸಿ ಅಗ್ನಿಯ ಕೂಡಬಲ್ಲರೆ ಮಾಹೇಶ್ವರ. ಅಗ್ನಿಯ ಆರ್ಭಟವನಳಿದು ವಾಯುವ ಕೂಡಬಲ್ಲರೆ ಪ್ರಸಾದಿ. ವಾಯುವಿನ ಚಂಚಲವ ನಿಲ್ಲಿಸಿ ಆಕಾಶವ ಕೂಡಬಲ್ಲರೆ ಪ್ರಾಣಲಿಂಗಿ, ಆಕಾಶದ ಅಂಕವನಳಿದು ನಿರಂಕಸ್ಥಳದಲ್ಲಿ ಕೂಡಬಲ್ಲರೆ ಶರಣ. ಆಕಾಶಹಂಕೃತಿಯನಳಿದು ನಿತ್ಯಸ್ಥೂಲವ ಕೂಡಬಲ್ಲರೆ ಐಕ್ಯ. ಇಂತೀ ಆರು ಆರುಪರಿಯ ಬಣ್ಣದ ಪರತತ್ವದೊಳು ಕೂಡಿ ಸಂಬಂಧವಾದ ನಿಜಸಾಹಿತ್ಯವುಳ್ಳ ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇದಕ್ಕೆ ನಿರ್ವಚನ : ಅರಿಷಡ್ವರ್ಗವೆಂಬ ಆರು ನಾಯಿಗಳ ಮರ್ದಿಸಿ, ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿಯ ಸೂರೆಗೊಂಡು, ಸಪ್ತವ್ಯಸನಂಗಳೆಂಬ ಏಳುಬೆಕ್ಕಿನ ಮೂಲವಂ ಕೆಡಿಸಿ, ಹಸಿವು ತೃಷೆ ನಿದ್ರೆ ಜಾಡ್ಯವೆಂಬ ಸೂಕರಂಗಳ ಕೊಂದು, ಪಂಚವರ್ಣದ ಹುಲಿಯ ಆರ್ಭಟವಂ ಮುರಿದು, ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರ ಸೂತಕವಂ ಕಳೆದು, ನಾನು ನೀನೆಂಬ ಅಹಾಂಕರವ ನಷ್ಟವ ಮಾಡಿ, ಸುಜ್ಞಾನವೆಂಬ ಜಾಗಟೆಯ ಪಿಡಿದು ಅರಿವೆಂಬ ಕುಡಿಯಲ್ಲಿ ನುಡಿಸಿ, ಪರಮ ಪರಿಣಾಮವೆಂಬ ನಾದದ ಮರೆಯಲ್ಲಿ ಪ್ರಸಾದವಂ ಕೊಂಡು ಸುಖಿಸುವ ಸರ್ವಕಾರರ ನೋಡಿ ಅಹುದಹುದೆಂದು ಅಭಯಹಸ್ತವ ಕೊಡುತ್ತಿದ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇನ್ನು ಪ್ರಾಣಲಿಂಗಿಸ್ಥಲದ ವಚನ: ಪ್ರಾಣಲಿಂಗವ ಬಲ್ಲೆವೆಂಬ ಅಣ್ಣಗಳು ನೀವು ಕೇಳಿರೊ. ಪವನದ ಮೂಲವನರಿಯಬಲ್ಲರೆ ಭಕ್ತನೆಂದೆನಿಸಬಹುದು. ಪ್ರಾಣನಿದ್ದ ನೆಲೆಯನರಿತು ಪ್ರಣಮದ ಸಂಬಂಧದ ಮಾಡಬಲ್ಲರೆ ಪ್ರಾಣಲಿಂಗಿಯೆಂದೆನಸಿಬಹುದು. ಹಿಂದಣ ದ್ವಾರವಂ ತೆರೆದು, ಮುಂದಣ ಮುಪ್ಪುರದ ಬಟ್ಟೆಯಂ ಮೆಟ್ಟಿ, ತ್ರಿಕೂಟವೆಂಬ ಸಂದಿಯಲ್ಲಿ ಹೊಕ್ಕು, ಮಹಾಲಿಂಗವ ನಿರೀಕ್ಷಣವ ಮಾಡಿ, ಶ್ರೀಗುರುವಿನ ಚರಣಾಂಬುಜವ ನೋಡಲಿಕ್ಕಾಗಿ ಮಹಾಜ್ಯೋತಿರ್ಮಯವೆಂಬ ಜಂಗಮವು ಸಿಕ್ಕಿತಯ್ಯಾ. ಆ ಜಂಗಮದ ಒಕ್ಕುಮಿಕ್ಕ ಪ್ರಸಾದವಂ ಸವಿದು ನಿತ್ಯಶರಣರ ಚರಣಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ